ಬೆಂಗಳೂರು(ಜು. 13) ಸ್ಯಾಂಡಲ್​ವುಡ್ ಗೂ ಕೊರೋನಾ ಕಾಟ ಶುರುವಾಗಿದೆ. ಚಿತ್ರನಟ ನೆನಪಿರಲಿ ಪ್ರೇಮ್​ ಅವರ ತಾಯಿಗೆ ಕೊರೋನಾ ಪಾಸಿಟಿವ್​ ಬಂದಿದ್ದು, ಅವರನ್ನು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಟ ಪ್ರೇಮ್​ ಅವರ ತಾಯಿಗೆ 66 ವರ್ಷ ವಯಸ್ಸಾಗಿದ್ದು, ಕಾಮಾಕ್ಷಿ ಪಾಳ್ಯದಲ್ಲಿ ನೆಲೆಸಿದ್ದರು. ಕೆಲ ದಿನಗಳಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಹಾಗಾಗಿ ಅವರನ್ನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೊರೋನಾ ಟೆಸ್ಟ್ ಮಾಡಿಸಿದಾಗ ದೃಢವಾಗಿದೆ.

ಬೆಂಗಳೂರಿನಲ್ಲಿ ಲಾಕ್ ಡೌನ್; ಏನಿರುತ್ತೆ? ಏನಿರಲ್ಲ?

ಕುಟುಂಬದವರು ಕೊರೋನಾ ಟೆಸ್ಟ್ ಮಾಡಿಸಿದ್ದು ಉಳಿದೆಲ್ಲರ ರಿಪೋರ್ಟ್ ನೆಗೆಟಿವ್ ಆಗಿದೆ. ಕನ್ನಡತಿ ನಟಿ ನವ್ಯಾ ಸ್ವಾಮಿ ಕೊರೋನಾ ಬಂದಿದ್ದನ್ನು ಅವರೇ ದೃಢಪಡಿಸಿದ್ದರು. ಅತ್ತ ಬಾಲಿವುಡ್  ಬಿಗ್ ಬಿ ಕುಟುಂಬಕ್ಕೆ ಕೊರೋನಾ ಕಂಟಕ ಶುರುವಾಗಿದೆ. ಅಮಿತಾಬ್ ಬಚ್ಚನ್, ಅಭಿಷೇಕ್ ಬಚ್ಚನ್, ಐಶ್ವರ್ಯಾ ಎಲ್ಲರಿಗೂ ಕೊರೋನಾ ತಾಗಿದೆ.