ವಿಜಯಲಕ್ಷ್ಮಿ ತಮ್ಮ ಹೇಳಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಂದಿರುವ ಕೆಟ್ಟ ಕಾಮೆಂಟ್‌ಗಳ ವಿರುದ್ಧ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾರೆ. ಈ ಹಿಂದೆ ನಟಿ ರಮ್ಯಾ ಅವರು ದರ್ಶನ್ ಫ್ಯಾನ್ಸ್‌ಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಮಗೆ ಬಂದ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು.
ಸುದೀಪ್-ದರ್ಶನ್ ಫ್ಯಾನ್ಸ್ ವಾರ್ ಎಲ್ಲಿಗೆ ಬಂತು?
ಸದ್ಯ ಸ್ಯಾಂಡಲ್‌ವುಡ್ ಚಿತ್ರರಂಗದಲ್ಲಿ ಸುದೀಪ್-ದರ್ಶನ್ ಫ್ಯಾನ್ಸ್ ವಾರ್, ದರ್ಶನ್ ಪತ್ನಿ ವಿಜಯಲಕ್ಷ್ಮೀ, ದರ್ಶನ್ ಸ್ನೇಹಿತ ಧನ್ವೀರ್ ಗೌಡ ಹಾಗೂ ಸ್ವತಃ ಕಿಚ್ಚ ಸುದೀಪ್ 'ಪೈರಸಿ' ಹೇಳಿಕೆ ಎಲ್ಲವೂ ಈಗ ಟ್ರೆಂಡಿಂಗ್‌ನಲ್ಲಿದೆ. ಇದೀಗ ಈ ಸ್ಟಾರ್ ವಾರ್, ಫ್ಯಾನ್ಸ್ ವಾರ್‌ಗೆ ಕನ್ನಡದ 'ಜೋಗಿ' ಖ್ಯಾತಿಯ ನಿರ್ದೇಶಕ ಪ್ರೇಮ್ ಎಂಟ್ರಿ ಕೊಟ್ಟಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ? ಅವರ ಅನುಭವದಲ್ಲಿ ಸುದೀಪ್-ದರ್ಶನ್ ಏನು? ಈ ಸ್ಟೋರಿ ನೋಡಿ..
ಸುದೀಪ್ ದರ್ಶನ್ ಫ್ಯಾನ್ಸ್ ವಾರ್: ನಿರ್ದೇಶಕರ ಜೋಗಿ ಪ್ರೆಮ್ ಹೇಳಿಕೆ- 'ಸುದೀಪ್ ಹಾಗೂ ದರ್ಶನ್ ಅವರಿಬ್ಬರೂ ಜೋಡೆತ್ತುಗಳು.. ಫ್ಯಾನ್ಸ್ ಮಧ್ಯೆ ಯಾವ ವಾರ್ ಇಲ್ಲ. ವಾರ್ ಮಾಡ್ತಾ ಇರೋದು ಪೈರೆಸಿ ಬಗ್ಗೆ.. 'ವಿಲನ್' ಸಿನಿಮಾ ಬಂದಾಗ್ಲೂ ಪೈರೆಸಿ ಮಾಡಿದ್ರು.. ಸುದೀಪ್ ಹೇಳಿರೋದು ಪರ್ಸನಲ್ ಯಾರ ಬಗ್ಗೆನೂ ಅಲ್ಲ, ಪೈರಸಿ ಬಗ್ಗೆ ಅಷ್ಟೇ..
ಸುದೀಪ್-ದರ್ಶನ್ ‘ಯುದ್ಧ’ ಯಾವುದಕ್ಕೆ?
ಪೈರಸಿ ಮಾಡಬೇಡಿ ಅನ್ನೋ ಕಾರಣಕ್ಕೆ 'ಯುದ್ಧ' ಅಂತ ಹೇಳಿದ್ದಾರೆ. ಸುದೀಪ್ ಹೇಳಿಕೆಯನ್ನ ಬೇರೆ ಅರ್ಥ ಮಾಡಿಕೊಳ್ಳಬೇಡಿ.. ಪೈರೆಸಿ ಅನ್ನೋದು ಸುದೀಪ್ ಸಿನಿಮಾಗೆ ಮಾತ್ರ ಅಲ್ಲ, ಕನ್ನಡದ ಹಲವು ಸಿನಿಮಾಗಳಿಗೆ ಮಾಡೇ ಮಾಡ್ತಾರೆ.. ಸುದೀಪ್ ಹಾಗೂ ದರ್ಶನ್ ಯಾವತ್ತೂ ಅವರು- ಇವರ ಬಗ್ಗೆ ಇವರು- ಅವರ ಬಗ್ಗೆ ಕೆಟ್ಟದಾಗಿ ಮಾತಾಡಿಕೊಂಡಿಲ್ಲ. ದರ್ಶನ್ ಬಗ್ಗೆ ಸುದೀಪ್ ಮಾತಾಡಲ್ಲ, ಸುದೀಪ್ ಬಗ್ಗೆ ದರ್ಶನ್ ಮಾತಾಡಲ್ಲ.. ನನಗೆ ತಿಳಿದ ಹಾಗೆ ಇಬ್ಬರು ಸಿನಿಮಾ ಫಿಟರ್ಸ್.. ನಾಟ್ ಲೈಕ್ ಕೆ ಪರ್ಸನಲ್ ಫಿಟರ್ಸ್..
ಪರ್ಸನಲ್ ಮಾತು ನನಗೆ ಗೊತ್ತಿಲ್ಲ
ಇನ್ನು, ದರ್ಶನ್ ಪತ್ನಿ ವಿಜಯಲಕ್ಷ್ಮಿ ಹೇಳಿಕೆ ಬಗ್ಗೆ- 'ಅದು ಅವರ ಪರ್ಸನಲ್ ಮಾತು ನನಗೆ ಗೊತ್ತಿಲ್ಲ' ಎಂದಿದ್ದಾರೆ ಜೋಗಿ ಪ್ರೇಮ್.. ಆದರೆ, ಇದೀಗ ವಿಜಯಲಕ್ಷ್ಮಿ ಅವರು ತಮ್ಮ ಹೇಳಿಕೆಗೆ ಸೋಷಿಯಲ್ ಮೀಡಿಯಾಗಳಲ್ಲಿ ಬಂದಿರುವ ಕೆಟ್ಟ ಕಾಮೆಂಟ್‌ಗಳ ವಿರುದ್ಧ ಪೊಲೀಸ್ ಸ್ಟೇಷನ್‌ಗೆ ಹೋಗಿ ದೂರು ನೀಡಿದ್ದಾರೆ. ಈ ಹಿಂದೆ ನಟಿ ರಮ್ಯಾ ಅವರು ದರ್ಶನ್ ಫ್ಯಾನ್ಸ್‌ಗಳಿಂದ ಸೋಷಿಯಲ್ ಮೀಡಿಯಾಗಳಲ್ಲಿ ತಮಗೆ ಬಂದ ಕೆಟ್ಟ ಕಾಮೆಂಟ್‌ಗಳ ಬಗ್ಗೆ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದೀಗ ವಿಜಯಲಕ್ಷ್ಮೀ ಅವರು ಸುದೀಪ್ ಫ್ಯಾನ್ಸ್ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಮುಂದೆ ಈ ವಿವಾದ ಎಲ್ಲಿಗೆ ತಲುಪುತ್ತೋ ದೇವರೇ ಬಲ್ಲ..!


