'ಅರ್ಜುನ್ ಜನ್ಯಾ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಬಿಗ್ ಬಜೆಟ್ ಸಿನಿಮಾ ನಿರ್ದೇಶನವನ್ನು ಮಾಡಿದ್ದು, ಸಿನಿಮಾವನ್ನು ಅದ್ದೂರಿ ಬಜೆಟ್ ಹಾಗೂ ರಿಚ್ ಲುಕ್‌ನಲ್ಲಿ ಮಾಡಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಮೋಘವಾಗಿ ನಟಿಸಿದ್ದಾರೆ. ಮುಂದೆ ನೋಡಿ..
ಹೇಗಿದೆ 45 ಸಿನಿಮಾ?
ಕನ್ನಡದ ಪ್ಯಾನ್ ಇಂಡಿಯಾ ಸಿನಿಮಾ, ಅರ್ಜುನ್ ಜನ್ಯಾ ಮೊಟ್ಟಮೊದಲ ನಿರ್ದೇಶನದ ಕನ್ನಡದ ಬಹುಭಾಷಾ ಸಿನಿಮಾ '45' ನಾಳೆ ಪ್ರಪಂಚದಾದ್ಯಂತ ಬಿಡುಗಡೆ ಆಗಲಿದೆ. ನಿನ್ನೆ ಈ (45) ಸಿನಿಮಾದ ಪ್ರೀಮಿಯರ್ ಶೋ ಆಯೋಜಿಸಲಾಗಿದ್ದು, ಸಿನಿಮಾ ನೋಡಿದವರು ಸೋಷಿಯಲ್ ಮೀಡಿಯಾದಲ್ಲಿ ತಮ್ಮ ಅನಿಸಿಕೆ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರೇನು ಹೇಳಿದ್ದಾರೆ ನೋಡಿ..
'ಅರ್ಜುನ್ ಜನ್ಯಾ ಅವರು ತಮ್ಮ ಮೊಟ್ಟಮೊದಲ ಸಿನಿಮಾದಲ್ಲೇ ಬಿಗ್ ಬಜೆಟ್ ಸಿನಿಮಾ ನಿರ್ದೇಶನವನ್ನು ಮಾಡಿದ್ದು, ಸಿನಿಮಾವನ್ನು ಅದ್ದೂರಿ ಬಜೆಟ್ ಹಾಗೂ ರಿಚ್ ಲುಕ್‌ನಲ್ಲಿ ಮಾಡಿದ್ದಾರೆ. ಶಿವರಾಜ್‌ಕುಮಾರ್, ಉಪೇಂದ್ರ ಹಾಗೂ ರಾಜ್ ಬಿ ಶೆಟ್ಟಿ ಅಮೋಘವಾಗಿ ನಟಿಸಿದ್ದು, ಈ ತ್ರಿಮೂರ್ತಿಗಳು ಇಡೀ ಸಿನಿಮಾವನ್ನು ತಮ್ಮ ಹೆಗಲ ಮೇಲೆ ಹೊತ್ತು ನಡೆದಿದ್ದಾರೆ. ಅಥವಾ, ನಿರ್ದೇಶಕರು ಈ ಮೂವರನ್ನು ಸಿನಿಮಾದ ಪಿಲ್ಲರ್ ಆಗಿ ಚೆನ್ನಾಗಿ ಬಳಿಸಿಕೊಂಡಿದ್ದಾರೆ ಎಂಬ ಮಾಹಿತಿ ಸೋಷಿಯಲ್ ಮೀಡಿಯಾದಲ್ಲಿ ಓಡಾಡುತ್ತಿವೆ.
ಶಿವರಾಜ್‌ಕುಮಾರ್ ಎಂಟ್ರಿ ಅತ್ಯದ್ಭುತ?
ಶಿವರಾಜ್‌ಕುಮಾರ್ ಎಂಟ್ರಿ ಅತ್ಯದ್ಭುತ ಎಂಬಂತಿದ್ದು, ಥಿಯೇಟರ್‌ಗಳಲ್ಲಿ ಅವರ ಆಗಮನವೇ ಒಂದು ದೊಡ್ಡ ಹಬ್ಬ ಎಂಬಂತಿದೆ. ಇನ್ನು. ಕನ್ನಡದ ಖ್ಯಾತ ನಿರ್ದೇಶಕರು, ನಟರೂ ಆಗಿರುವ ಉಪೇಂದ್ರ ಅವರದ್ದು ಎಂದೂ ಮರೆಯಲಾಗದ ಪಾತ್ರ ಎಂಬ ಮಾತು ಕೇಳಿ ಬರುತ್ತಿದೆ. ಜೊತೆಗೆ, ಸಿನಿಮಾಗೆ ಕಳಶವಿಟ್ಟಂತೆ ನಟ 'ಸು ಫ್ರಂ ಸೋ' ಖ್ಯಾತಿಯ ನಟ ರಾಜ್ ಬಿ ಶೆಟ್ಟಿಯವರು ಸಿನಿಮಾದಲ್ಲಿ ತಮ್ಮ ಪಾತ್ರವನ್ನು ಅಮೋಘವಾಗಿ ನಿರ್ವಹಿಸಿ ಪ್ರೇಕ್ಷಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ಒಟ್ಟಿನಲ್ಲಿ, ಅರ್ಜುನ್ ಜನ್ಯಾ ನಿರ್ದೇಶನದ '45' ಸಿನಿಮಾ ತನ್ನ ರಿಚ್ ಮೇಕಿಂಗ್ ಹಾಗೂ ಅದ್ದೂರಿತನದಿಂದ ವಿಶ್ವಮಟ್ಟದಲ್ಲಿ ಮಿಂಚಲಿದೆ ಎಂಬ ರೀವ್ಯೂ ವೈರಲ್ ಆಗುತ್ತಿದೆ.
ಉಪೇಂದ್ರ-ರಾಜ್ ಬಿ ಶೆಟ್ಟಿ ಮಿಂಚಿಂಗ್!
ಕನ್ನಡದ ಹಿರಿಯ ನಟ ಶಿವರಾಜ್‌ಕುಮಾರ್ ಅವರು ಈಗ ಕನ್ನಡಕ್ಕೆ ಮಾತ್ರ ಸೀಮಿತವಾಗಿಲ್ಲ. ಅವರು ರಜನಿಕಾಂತ್ ನಟನೆಯ 'ಜೈಲರ್' ಸಿನಿಮಾದ ಪಾತ್ರದ ಮೂಲಕ ಪ್ಯಾನ್ ಇಂಡಿಯಾ ಪಬ್ಲಿಸಿಟಿ ಹಾಗೂ ಪ್ರಸಿದ್ಧಿ ಪಡೆದಿದ್ದಾರೆ. ಅವರಿಗೆ ಈಗ ಭಾರತವೂ ಸೇರಿದಂತೆ ಪ್ರಪಂಚದಾದ್ಯಂತ ಫ್ಯಾನ್ಸ್ ಇದ್ದಾರೆ. ರಿಯಲ್ ಸ್ಟಾರ್ ಉಪೇಂದ್ರ ಅವರು ಕೂಡ ತೆಲುಗು, ತಮಿಳು ಸೇರಿದಂತೆ ಈ ಮೊದಲೇ ಪರಭಾಷೆಯಲ್ಲಿ ಮಿಂಚಿರುವ ಕಾರಣಕ್ಕೆ ಅವರಿಗೂ ಆಲ್ ಇಂಡಿಯಾ ಲೆವಲ್‌ನಲ್ಲಿ ಅಭಿಮಾನಿಗಳು ಇದ್ದಾರೆ. ರಾಜ್ ಬಿ ಶೆಟ್ಟಿಯವರೂ ಕೂಡ ಪ್ರಪಂಚಕ್ಕೇ ಪರಿಚಿತವಾಗಿರುವ ನಟ ಹಾಗೂ ನಿರ್ದೇಶಕರು. ಈ ಎಲ್ಲಾ ಕಾರಣಗಳಿಂದ ನಾಳೆ ಬಿಡುಗಡೆ ಆಗಲಿರುವ '45' ಸಿನಿಮಾ ಜಗತ್ತಿನ ಗಮನ ಸೆಳೆಯುವ ಎಲ್ಲಾ ಸಾಧ್ಯತೆ ದಟ್ಟವಾಗಿದೆ ಎಂಬ ರೀವ್ಯೂ ಸೋಷಿಯಲ್ ಮೀಡಿಯಾಗಳಲ್ಲಿ ಹರಡುತ್ತಿದೆ.


