ಕನ್ನಡದ ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ ಅಂದ್ರೆ ಸುಮ್ನೆ ಅಲ್ಲ, ಅವರು ನಟ ಮಾತ್ರವಲ್ಲ, ನಿರ್ದೇಶಕರು ಕೂಡ. ಪ್ರೇಮಲೋಕ, ಶಾಂತಿ ಕ್ರಾಂತಿ, ರಾಮಾಚಾರಿ, ಹೀಗೆ ಹತ್ತು ಹಲವು ಸಿನಿಮಾಗಳನ್ನು ಕನ್ನಡ ಸಿನಿರಂಗಕ್ಕೆ.. ಲವ್ ಬಗ್ಗೆ ರವಿಮಾಮನ ಟಿಪ್ಸ್ ಎಲ್ರಿಗೂ ಸಖತ್ ವರ್ಕ್ ಆಗೋ ತರ ಇದೆ, ಸ್ವಲ್ಲ ಇಲ್ಲಿ ಕಣ್ಣಾಡಿಸಿ..
ಕನ್ನಡದ ನಟ, ಕ್ರೇಜಿ ಸ್ಟಾರ್ ರವಿಚಂದ್ರನ್ (Ravichandran) ಅಂದ್ರೆ ಸುಮ್ನೆ ಅಲ್ಲ, ಅವರು ನಟ ಮಾತ್ರವಲ್ಲ, ನಿರ್ದೇಶಕರು ಕೂಡ. ಪ್ರೇಮಲೋಕ, ಶಾಂತಿ ಕ್ರಾಂತಿ, ರಾಮಾಚಾರಿ, ಹೀಗೆ ಹತ್ತು ಹಲವು ಸಿನಿಮಾಗಳನ್ನು ಕನ್ನಡ ಸಿನಿರಂಗಕ್ಕೆ ಕೊಟ್ಟಿದ್ದಾರೆ. ಜೊತೆಗೆ, ಕೆಲವು ಸಿನಿಮಾಗಳನ್ನು ಪರಭಾಷೆಯಿಂದ ರೀಮೇಕ್ ಮಾಡಿದ್ದಾರೆ. ಕನ್ನಡದ ಕೆಲವು ರವಿಮಾಮ ಸಿನಿಮಾಗಳು ಇಲ್ಲಿಂದ ಪರಭಾಷೆಗೆ ಡಬ್ ಆಗಿವೆ. ಒಟ್ಟಿನಲ್ಲಿ ಹೇಳಬೇಕು ಅಂದ್ರೆ, ರವಿಚಂದ್ರನ್ ಅವರು ಸಿನಿಮಾ ಬ್ಯುಸಿನೆಸ್‌ನಲ್ಲಿ ಸಾಕಷ್ಟು ಕೊಡುಗೆ ನೀಡಿದ್ದಾರೆ.
ನಟ ರವಿಚಂದ್ರನ್ ಅವರು ಕೇಳಲಾದ ಪ್ರಶ್ನೆಗೆ ಉತ್ತರಿಸುತ್ತ 'ಲವ್ ಅನ್ನೋದು ಯಾವತ್ತೂ ಇರುತ್ತೆ, ಇರುವಂಥದ್ದು. ಆದರೆ, ಅದನ್ನು ವ್ಯಕ್ತಪಡಿಸುವ ರೀತಿ ಬದಲಾಗಬಹುದು ಅಷ್ಟೇ. ಮೊದಲು ಲೆಟರ್ ಬರೆಯೋರು, ಈಗ ಮೆಸೇಜ್ ಮಾಡ್ತಾರೆ ಅಷ್ಟೇ, ಲೆಟರ್‌ಗೂ ಮೊದಲು ಬಾಯಿಂದ ಹೇಳ್ತಾ ಇದ್ರು ಅಥವಾ ಸನ್ನೆ ಮಾಡ್ತಾ ಇದ್ದಿರಬಹುದು. ಆದರೆ, ಮನುಷ್ಯ ಹುಟ್ಟಿದಾಗಿನಿಂದ ಇಲ್ಲಿಯವರೆಗೂ, ಮುಂದೆ ಕೂಡ ಲವ್ ಯಾವತ್ತೂ ಇರುತ್ತೆ. ಆದ್ರೆ, ಅದನ್ನು ಹೇಳೋ ರೀತಿ ಮಾತ್ರ ಕಾಲಕಾಲಕ್ಕೂ ಬದಲಾಗುತ್ತೆ' ಅಂದಿದ್ದಾರೆ ಕ್ರೇಜಿಸ್ಟಾರ್ ರವಿಚಂದ್ರನ್.
ಪರಭಾಷೆ ಸಿನಿಮಾಗಳ ಕರಾಳ ಸತ್ಯವನ್ನು ಬಿಚ್ಚಿಟ್ಟ ಕ್ರೇಜಿ ಸ್ಟಾರ್ ರವಿಚಂದ್ರನ್, ಹೀಗೂ ಉಂಟೇ..!
ಕನ್ನಡದ ನಟ ರವಿಚಂದ್ರನ್ (Crazy Star Ravichandran) ಅವರು ಮಾತನ್ನಾಡಿದ್ರೆ ತುಂಬಾ ಪ್ರಾಮಾಣಿಕವಾಗಿ ಮಾತನ್ನಾಡುತ್ತಾರೆ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಚಾನೆಲ್ ಒಂದರಲ್ಲಿ ಮಾತನಾಡುತ್ತಿದ್ದ ನಟ ರವಿಚಂದ್ರನ್ ಅವರು ಕೆಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾರಂಗ, ಪ್ಯಾನ್ ಇಂಡಿಯಾ ಸಿನಿಮಾಗಳು, ಪರಭಾಷೆಯ ಸಿನಿಮಾಗಳು, ಹೀಗೆ ಬಹಳಷ್ಟು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ, ತುಂಬಾ ಬಿಂದಾಸ್ ಆಗಿ ಮಾತನ್ನಾಡಿದ್ದಾರೆ.
ನಟ ರವಿಚಂದ್ರನ್ ಅವರು ಕೆಲವು ಸಂಗತಿಗಳನ್ನು ಬೇಸರದಿಂದ ಹೇಳಿದ್ದಾರೆ. 'ಕನ್ನಡಿಗರು ಸಾಕಷ್ಟು ಬಾರಿ ನಮ್ಮ ಭಾಷೆಯ ಸಿನಿಮಾ ಚೆನ್ನಾಗಿಲ್ಲ, ಪರಭಾಷೆಯ, ಅದರಲ್ಲೂ ಮುಖ್ಯವಾಗಿ ತೆಲುಗು-ತಮಿಳು ಸಿನಿಮಾಗಳು ಚೆನ್ನಾಗಿ ಮೂಡಿಬರುತ್ತಿವೆ ಅಂತಾರೆ. ಆದರೆ, ಅದು ನಿಜವಲ್ಲ. ಏಕೆಂದರೆ, ಯಾವುದೇ ಸಿನಿಮಾರಂಗದ ಇತಿಹಾಸ ತೆಗೆದುಕೊಂಡರೆ, ತೆರೆಗೆ ಬಂದ ನೂರು ಸಿನಿಮಾಗಳಲ್ಲಿ ಗೆಲ್ಲವುದು ಐದು ಮಾತ್ರ!
'ಡಾ ರಾಜ್ ಸ್ಮಾರಕ ಲೋಕಾರ್ಪಣೆ'ಗೆ ಲೀಲಾವತಿ-ವಿನೋದ್‌ರಾಜ್ ಹೋದಾಗ ಶಿವಣ್ಣ ಮಾಡಿದ್ದೇನು?
ನೂರು ಸಿನಿಮಾಗಳಲ್ಲಿ ಕೇವಲ ಐದು ಸಿನಿಮಾಗಳು ಗೆಲ್ಲುತ್ತವೆ, ಇನ್ನೈದು ಸಿನಿಮಾಗಳು ಹಾಕಿದ ಬಂಡವಾಳ ವಾಪಸ್ ಮಾಡಿರುತ್ತವೆ. ಆದರೆ, ಮಿಕ್ಕ 90 ಸಿನಿಮಾಗಳು ಪ್ಲಾಪ್ ಪಟ್ಟಿ ಸೇರಿರುತ್ತವೆ. ಆದರೆ, ಪರಭಾಷೆಯ ಹಿಟ್ ಸಿನಿಮಾಗಳು ಮಾತ್ರ ಇಲ್ಲಿಗೆ ಬರುತ್ತವೆ. ಮಿಕ್ಕ ಸೋತ ಸಿನಿಮಾಗಳು ಇಲ್ಲಿಗೆ ಬರಲ್ಲ, ಹೀಗಾಗಿ ನಮ್ಮವರು ಕನ್ನಡ ಸಿನಿಮಾಗಳು ಮಾತ್ರ ಸೋಲುತ್ತವೆ, ಬೇರೆ ಭಾಷೆಯ ಎಲ್ಲಾ ಸಿನಿಮಾಗಳು ಗೆಲ್ಲುತ್ತವೆ ಎಂದುಕೊಂಡಿದ್ದಾರೆ. ಆದರೆ, ಅದು ನಿಜವಲ್ಲ' ಎಂದಿದ್ದಾರೆ ರವಿಚಂದ್ರನ್.
'ಸಿನಿಮಾ ಅಂದ್ರೆ ಅಲ್ಲಿ ಸೋಲು-ಗೆಲುವು, ಲಾಭ-ನಷ್ಟ ಎಲ್ಲವೂ ಇದ್ದಿದ್ದೇ. ಕಾರಣ ಸಿನಿಮಾ ಉದ್ಯಮ ಒಂದು ಬಿಸಿನೆಸ್. ಇಲ್ಲಿ ಎಲ್ಲಾ ಬಿಸಿನೆಸ್‌ನಂತೆ ಇದು ಒಂದು ಪ್ರೊಸೆಸ್. ಸಿನಿಮಾ ಮೇಕಿಂಗ್ ನಿರಂತರವಾಗಿ ನಡೆದುಕೊಂಡು ಹೋಗ್ತಾ ಇರುತ್ತೆ. ಲಾಭ-ನಷ್ಟ ಎಲ್ಲಾ ಸಿನಿಮಾರಂಗದಲ್ಲೂ ಇದ್ದಿದ್ದೇ. ಕನ್ನಡ ಸಿನಿಮಾರಂಗವೂ ಅದಕ್ಕೆ ಹೊರತಲ್ಲ..' ಎಂದಿದ್ದಾರೆ ನಟ ರವಿಚಂದ್ರನ್.
'ರಾಜ್ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!
