ನಟ ರವಿಚಂದ್ರನ್ ಅವರು ಕೆಲವು ಸಂಗತಿಗಳನ್ನು ಬೇಸರದಿಂದ ಹೇಳಿದ್ದಾರೆ. 'ಕನ್ನಡಿಗರು ಸಾಕಷ್ಟು ಬಾರಿ ನಮ್ಮ ಭಾಷೆಯ ಸಿನಿಮಾ ಚೆನ್ನಾಗಿಲ್ಲ, ಪರಭಾಷೆಯ, ಅದರಲ್ಲೂ ಮುಖ್ಯವಾಗಿ ತೆಲುಗು-ತಮಿಳು ಸಿನಿಮಾಗಳು ಚೆನ್ನಾಗಿ...

ಕನ್ನಡದ ನಟ ರವಿಚಂದ್ರನ್ (Crazy Star Ravichandran) ಅವರು ಮಾತನ್ನಾಡಿದ್ರೆ ತುಂಬಾ ಪ್ರಾಮಾಣಿಕವಾಗಿ ಮಾತನ್ನಾಡುತ್ತಾರೆ ಎಂದೇ ಹೇಳಲಾಗುತ್ತಿದೆ. ಇತ್ತೀಚೆಗೆ ಖಾಸಗಿ ಚಾನೆಲ್‌ ಒಂದರಲ್ಲಿ ಮಾತನಾಡುತ್ತಿದ್ದ ನಟ ರವಿಚಂದ್ರನ್ ಅವರು ಕೆಲವು ಸೀಕ್ರೆಟ್‌ಗಳನ್ನು ಹಂಚಿಕೊಂಡಿದ್ದಾರೆ. ಕನ್ನಡ ಸಿನಿಮಾರಂಗ, ಪ್ಯಾನ್ ಇಂಡಿಯಾ ಸಿನಿಮಾಗಳು, ಪರಭಾಷೆಯ ಸಿನಿಮಾಗಳು, ಹೀಗೆ ಬಹಳಷ್ಟು ಸಂಗತಿಗಳ ಬಗ್ಗೆ ಮಾತನ್ನಾಡಿದ್ದಾರೆ. ಅಷ್ಟೇ ಅಲ್ಲ, ತುಂಬಾ ಬಿಂದಾಸ್ ಆಗಿ ಮಾತನ್ನಾಡಿದ್ದಾರೆ. 

Add Asianetnews Kannada as a Preferred SourcegooglePreferred

ಹಾಗಿದ್ರೆ ನಟ ರವಿಚಂದ್ರನ್ ಅವರು ಹೇಳಿದ್ದೇನು? ಹೌದು, ನಟ ರವಿಚಂದ್ರನ್ ಅವರು ಕೆಲವು ಸಂಗತಿಗಳನ್ನು ಬೇಸರದಿಂದ ಹೇಳಿದ್ದಾರೆ. 'ಕನ್ನಡಿಗರು ಸಾಕಷ್ಟು ಬಾರಿ ನಮ್ಮ ಭಾಷೆಯ ಸಿನಿಮಾ ಚೆನ್ನಾಗಿಲ್ಲ, ಪರಭಾಷೆಯ, ಅದರಲ್ಲೂ ಮುಖ್ಯವಾಗಿ ತೆಲುಗು-ತಮಿಳು ಸಿನಿಮಾಗಳು ಚೆನ್ನಾಗಿ ಮೂಡಿಬರುತ್ತಿವೆ ಅಂತಾರೆ. ಆದರೆ, ಅದು ನಿಜವಲ್ಲ. ಏಕೆಂದರೆ, ಯಾವುದೇ ಸಿನಿಮಾರಂಗದ ಇತಿಹಾಸ ತೆಗೆದುಕೊಂಡರೆ, ತೆರೆಗೆ ಬಂದ ನೂರು ಸಿನಿಮಾಗಳಲ್ಲಿ ಗೆಲ್ಲವುದು ಐದು ಮಾತ್ರ!

'ಡಾ ರಾಜ್‌ ಸ್ಮಾರಕ ಲೋಕಾರ್ಪಣೆ'ಗೆ ಲೀಲಾವತಿ-ವಿನೋದ್‌ರಾಜ್ ಹೋದಾಗ ಶಿವಣ್ಣ ಮಾಡಿದ್ದೇನು?

ನೂರು ಸಿನಿಮಾಗಳಲ್ಲಿ ಕೇವಲ ಐದು ಸಿನಿಮಾಗಳು ಗೆಲ್ಲುತ್ತವೆ, ಇನ್ನೈದು ಸಿನಿಮಾಗಳು ಹಾಕಿದ ಬಂಡವಾಳ ವಾಪಸ್ ಮಾಡಿರುತ್ತವೆ. ಆದರೆ, ಮಿಕ್ಕ 90 ಸಿನಿಮಾಗಳು ಪ್ಲಾಪ್ ಪಟ್ಟಿ ಸೇರಿರುತ್ತವೆ. ಆದರೆ, ಪರಭಾಷೆಯ ಹಿಟ್ ಸಿನಿಮಾಗಳು ಮಾತ್ರ ಇಲ್ಲಿಗೆ ಬರುತ್ತವೆ. ಮಿಕ್ಕ ಸೋತ ಸಿನಿಮಾಗಳು ಇಲ್ಲಿಗೆ ಬರಲ್ಲ, ಹೀಗಾಗಿ ನಮ್ಮವರು ಕನ್ನಡ ಸಿನಿಮಾಗಳು ಮಾತ್ರ ಸೋಲುತ್ತವೆ, ಬೇರೆ ಭಾಷೆಯ ಎಲ್ಲಾ ಸಿನಿಮಾಗಳು ಗೆಲ್ಲುತ್ತವೆ ಎಂದುಕೊಂಡಿದ್ದಾರೆ. ಆದರೆ, ಅದು ನಿಜವಲ್ಲ' ಎಂದು ಸತ್ಯವನ್ನು ಕಣ್ಣಿಗೆ ಕಟ್ಟುವಂತೆ ವಿವರಿಸಿದ್ದಾರೆ. 

ಅಷ್ಟೇ ಅಲ್ಲ, ನಟ ರವಿಚಂದ್ರನ್ ಪ್ರಕಾರ, ಕನ್ನಡದಲ್ಲಿ 'ಪ್ರೇಮಲೋಕ' ಕಾಲಕ್ಕೆ ಪ್ಯಾನ್ ಇಂಡಿಯಾ ಸಿನಿಮಾ ಬಂದಿದೆ. ರವಿಚಂದ್ರನ್ ನಟನೆ, ನಿರ್ದೇಶನದ 'ಪ್ರೇಮಲೋಕ' ಚಿತ್ರವು ಆಗಿನ ಕಾಲದಲ್ಲೇ 3 ಭಾಷೆಗಳಲ್ಲಿ ರೆಡಿಯಾಗಿ ಮತ್ತೊಂದು ಭಾಷೆಗೆ ಡಬ್ ಮಾಡಲಾಗಿದೆ. ಕನ್ನಡ-ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಏಕಕಾಲಕ್ಕೆ ರೆಡಿಯಾಗಿದ್ದು, ಚಿತ್ರ ಬಿಡುಗಡೆ ಬಳಿಕ ತೆಲುಗಿಗೆ ಡಬ್ ಮಾಡಲಾಗಿದೆ. ಆದ್ದರಿಂದ ಕನ್ನಡದಲ್ಲಿ ಪ್ಯಾನ್ ಇಂಡಿಯಾ ಕಾನ್ಸೆಪ್ಟ್ ಈಗ ಬಂದಿದ್ದಲ್ಲ. 

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ಜೊತೆಗೆ, ನಟ ರವಿಚಂದ್ರನ್ ಅವರು ಇನ್ನೂ ಒಂದು ಸಂಗತಿ ಬಗ್ಗೆ ಹೇಳಿದ್ದಾರೆ. 'ಸಿನಿಮಾ ಅಂದ್ರೆ ಅಲ್ಲಿ ಸೋಲು-ಗೆಲುವು, ಲಾಭ-ನಷ್ಟ ಎಲ್ಲವೂ ಇದ್ದಿದ್ದೇ. ಕಾರಣ ಸಿನಿಮಾ ಉದ್ಯಮ ಒಂದು ಬಿಸಿನೆಸ್. ಇಲ್ಲಿ ಎಲ್ಲಾ ಬಿಸಿನೆಸ್‌ನಂತೆ ಇದು ಒಂದು ಪ್ರೊಸೆಸ್. ಸಿನಿಮಾ ಮೇಕಿಂಗ್ ನಿರಂತರವಾಗಿ ನಡೆದುಕೊಂಡು ಹೋಗ್ತಾ ಇರುತ್ತೆ. ಲಾಭ-ನಷ್ಟ ಎಲ್ಲಾ ಸಿನಿಮಾರಂಗದಲ್ಲೂ ಇದ್ದಿದ್ದೇ. ಕನ್ನಡ ಸಿನಿಮಾರಂಗವೂ ಅದಕ್ಕೆ ಹೊರತಲ್ಲ..' ಎಂದಿದ್ದಾರೆ ನಟ ರವಿಚಂದ್ರನ್.