ಇದು ಪೌರಾಣಿಕ.. ಭಾವನೆಗಳಲ್ಲಿ ಹೊಂದಿಕೊಂಡು ಹೋಗುವಂತ ಮನುಷ್ಯರೇ ಮನುಷ್ಯರು.. ಇದು ಶೋ ಬಿಸಿನೆಸ್ ಅಲ್ಲ.. ರಿಯಲ್ ಫಾಕ್ಟ್ ಆಪ್ ದಿ ಲೈಫ್.. ನಾವು ಹೇಗೆ ಲೈಫನ್ನ ಅರ್ಥ ಮಾಡ್ಕೊಂಡಿದೀವಿ, ಹೇಗೆ ಜೀವನವನ್ನ ನಾವು ತಗೊಂಡ್ ಹೋಗ್ತೀವಿ ಅನ್ನೋ..

'ನಿಮ್ಮಿಬ್ಬರ ಸ್ಪೆಷಲ್ ಮಮೆಂಟ್ಸ್‌ ಏನಾದ್ರೂ ಇದ್ಯಾ? ಎಲ್ಲೂ ಇನ್ನೂ ತನಕ ಹಂಚಿಕೊಳ್ಳದೇ ಇರೋದು..' ಅಂತ ನಿರೂಪಕರು ನಟ ಹಾಗೂ ಲೀಲಾವತಿ (Leelavathi) ಮಗ ವಿನೋದ್‌ ರಾಜ್ ಅವರಿಗೆ ಪ್ರಶ್ನೆ ಕೇಳಿದ್ದಾರೆ. ಅದಕ್ಕೆ ವಿನೋದ್ ರಾಜ್ (Vinod Raj) ಅವರು 'ನಾನು ಮತ್ತೆ ಅಮ್ಮ ಆವತ್ತು 'ಅಪ್ಪಾಜಿ ಲೋಕಾರ್ಪಣೆ' ದಿನ ಹೋದ್ವಿ ಅಲ್ಲಿಗೆ.. ನಮ್ಮನ್ನು ನೋಡಿದ ತಕ್ಷಣ ಶಿವಣ್ಣ ಅವರು ಓಡಿ ಬಂದ್ಬಿಟ್ರು.. ಆದ್ರೆ ತಕ್ಷಣ ನಮ್ಮಮ್ಮ ಹೇಳ್ಬಿಟ್ರು, ಇಲ್ಲೀಗ ಸ್ಮಾರಕದ ಹತ್ರ ಬೇಡ, ನಾವು ಪ್ಯಾಲೇಸ್ ಹತ್ರ ಹೋಗ್ತೀವಿ.. ' ಅಂತ ಹೇಳಿ ಅಲ್ಲಿಗೆ ಹೋದ್ವಿ.. 

ಇದು ಪೌರಾಣಿಕ.. ಭಾವನೆಗಳಲ್ಲಿ ಹೊಂದಿಕೊಂಡು ಹೋಗುವಂತ ಮನುಷ್ಯರೇ ಮನುಷ್ಯರು.. ಇದು ಶೋ ಬಿಸಿನೆಸ್ ಅಲ್ಲ.. ರಿಯಲ್ ಫಾಕ್ಟ್ ಆಪ್ ದಿ ಲೈಫ್.. ನಾವು ಹೇಗೆ ಲೈಫನ್ನ ಅರ್ಥ ಮಾಡ್ಕೊಂಡಿದೀವಿ, ಹೇಗೆ ಜೀವನವನ್ನ ನಾವು ತಗೊಂಡ್ ಹೋಗ್ತೀವಿ ಅನ್ನೋದ್ರಲ್ಲೇ ಇರೋದು.. ಜಗಳ ಮಾಡ್ಕೊಂಡು, ಮತ್ತೊಂದು ಮಾಡ್ಕೊಂಡು ನಾವು ಹೋಗಬಾರ್ದು.. 

'ರಾಜ್‌ ಲೀಲಾ ವಿನೋದ' ಬಗ್ಗೆ ನೇರವಾಗಿ ಶಿವಣ್ಣಗೇ ಪ್ರಶ್ನೆ: ಸಿಕ್ಕ ಉತ್ತರವೇ ಅಂತಿಮ ಸತ್ಯ, ದೂಸ್ರಾ ಮಾತಿಲ್ಲ!

ನಮ್ಮ ತಾಯಿಯವ್ರು ಯಾವತ್ತೂ ನಂಬಿಕೆ ಮೇಲೆ ಜೀವನ ಮಾಡಿರೋರು.. ಅದೇ ನಮ್ಮ ತಾಯಿಯವ್ರ ಜೀವನಪರ್ಯಂತ ಕೈ ಹಿಡಿದಿರೋದು ಅದೇ ನಂಬಿಕೆ. ಯಾವತ್ತೂ ಅಮ್ಮ ಎಲ್ಲೂ ಜಗಳ ಮಾಡೋಕೆ ತರಕಾರು ಮಾಡೋಕೆ ಹೋಗ್ತಾ ಇರ್ಲಿಲ್ಲ. ನಂಬಿಕೆ ಮೇಲೆ ವಿಶ್ವಾಸ ಇಡೋರು, ಬೇರೆಯವ್ರಿಗೆ ತೊಂದ್ರೆ ಆಗ್ಬಾರ್ದು ಅನ್ನೋರು.. ಮನೆಲ್ಲಿ, ಹೊರಗಡೆ ಎಲ್ಲಾ ಕಡೆ ಹಾಗೇ ಇರೋರು..' ಎಂದಿದ್ದಾರೆ ನಟ ವಿನೋದ್ ರಾಜ್. 

ಡಾ ರಾಜ್‌ಕುಮಾರ್ ಸ್ಮಾರಕದ ಲೋಕಾರ್ಪಣೆ ದಿನ ನಡೆದ ಘಟನೆ ಇದು. ಅಂದ್ರೆ, 'ಡಾ ರಾಜ್‌ಕುಮಾರ್ ಸ್ಮಾರಕ ಲೋಕಾರ್ಪಣೆ' ದಿನ ಅಮ್ಮ ಲೀಲಾವತಿ ಹಾಗೂ ಮಗ ವಿನೋದ್ ರಾಜ್ ಅಲ್ಲಿಗೆ ಹೋಗಿದ್ದಾರೆ. ಅವರನ್ನು ನೋಡಿದವರೇ ನಟ ಶಿವಣ್ಣ ಓಡೋಡಿ ಬಂದಿದ್ದಾರೆ. ಅದನ್ನು ನೋಡಿದ ಲೀಲಾವತಿಯವರು 'ನಾವು ಇಲ್ಲಿ ಹೋಗೋದು ಬೇಡ, ಪ್ಯಾಲೇಸ್‌ ಗ್ರೌಂಡ್ ಹತ್ತಿರ ಪಂಕ್ಷನ್ ನಡೆಯುತ್ತಿರುವಲ್ಲಿಗೆ ಹೋಗೋಣ' ಎಂದು ಹೇಳಿ ಅಲ್ಲಿಗೆ ಹೊರಟಿದ್ದಾರೆ ಎಂದ ಹಾಗಾಯ್ತು. ಸತ್ಯ ಗೊತ್ತಿಲ್ಲದ ಅದೆಷ್ಟೋ ಜನರು ಅಂದು ಬಾಯಿಗೆ ಬಂದಂತೆ ಮಾತನಾಡಿದ್ದರು.

'ರಾಜ್ ಲೀಲಾ ವಿನೋದ' ಇಶ್ಯೂ ಬಳಿಕ ಭಾವನಾ ಬೆಳಗೆರೆ-ಶಿವಣ್ಣ ಭೇಟಿ: ಹ್ಯಾಟ್ರಿಕ್ ಹೀರೋ ನೇರವಾಗಿ ಏನಂದ್ರು?