ಸ್ಯಾಂಡಲ್‌ವುಡ್‌ ಕ್ರೇಜಿ ಕ್ವೀನ್ ರಕ್ಷಿತಾ ಮತ್ತೊಮ್ಮೆ ತೆರೆಯ ಮೇಲೆ ಕಾಣಿಸಿಕೊಳ್ತಿದ್ದಾರೆ. ವಿವಾಹದ ನಂತರ ನಟನೆಯಿಂದ ದೂರ ಉಳಿದಿದ್ದ ರಕ್ಷಿತಾ ಎಣ್ಣೆ ಬಾಟಲಿ ಕೈಯಲ್ಲಿ ಹಿಡಿದು ಸಖತ್ ಸ್ಟೆಪ್ ಹಾಕಿದ್ದಾರೆ.

ಡೈರೆಕ್ಟರ್ ಜೋಗಿ ಪ್ರೇಮ್ ನಿರ್ದೇಶನದ 'ಏಕ್ ಲವ್ ಯಾ' ಸಿನಿಮಾದಲ್ಲಿ ಕ್ರೇಜಿ ಕ್ವೀನ್ ರಕ್ಷಿತಾ ಕಮ್ ಬ್ಯಾಕ್ ಆಗಿದೆ. ಹಿಂದೆ ಸ್ಯಾಂಡಲ್‌ವುಡ್‌ನಲ್ಲಿ ಸೌಂಡ್ ಮಾಡಿದ್ದ ಕ್ಯೂಟ್ ನಟಿ ಈಗ ಮತ್ತೊಮ್ಮರ ರೀ ಎಂಟ್ರಿ ಕೊಟ್ಟಿದ್ದಾರೆ.

ಪತಿಯ ಹುಟ್ಟಹಬ್ಬದಂದು ಟೇಬಲ್ ಮೇಲೆ ಕುಣಿದು ಕುಪ್ಪಳಿಸಿದ ರಕ್ಷಿತಾ!

'ಏಕ್ ಲವ್ ಯಾ' ಚಿತ್ರದ ಎಣ್ಣೆ ಸಾಂಗ್‌ಅಲ್ಲಿ ಗೆಸ್ಟ್ ಅಪಿಯರನ್ಸ್ ಮಾಡ್ತಿದ್ದಾರೆ ರಕ್ಷಿತಾ. ಪ್ರೇಮ್ ಸಹೋದರ ರಾಣಾ ಅಭಿನಯದ 'ಏಕ್ ಲವ್ ಯಾ' ಚಿತ್ರದ ಪ್ರಮೋಷನ್ ಪೋಸ್ಟರ್ ಅಲ್ಲಿ ಎಣ್ಣೆ ಬಾಟಲ್ ಹಿಡಿದ ರಕ್ಷಿತಾ ಸಖತ್ ಮಿಂಚಿದ್ದಾರೆ.

ಮಾಧ್ಯಮಗಳ ಮೇಲೆ ರಕ್ಷಿತಾ ಪ್ರೇಮ್ ಸಿಡುಕಿದ್ಯಾಕೆ?

ಪ್ರೇಮಿಗಳ ದಿನ ಫೆ.14 ರಂದು ಚಿತ್ರದ ಟೀಸರ್ ರಿಲೀಸ್ ಬಿಡುಗಡೆಯಾಗಲಿದ್ದು, ರಕ್ಷಿತಾ ಫ್ಯಾನ್ಸ್‌ ಟೀಸರ್‌ಗಾಗಿ ಕಾತುರರಾಗಿದ್ದಾರೆ. ಸುಂಟರಗಾಳಿ, ನೀನಿಲ್ಲೋ ನಾನಲ್ಲೇ, ಅಪ್ಪು, ಕಲಾಸಿಪಾಳ್ಯ, ತನನಂ ತನನಂ ಸೇರಿ ಹಲವು ಹಿಟ್‌ ಸಿನಿಮಾಗಳಲ್ಲಿ ನಟಿಸಿದ ರಕ್ಷಿತಾ ಮದುವೆ ನಂತರ ನಟನೆಯಿಂದ ದೂರ ಉಳಿದಿದ್ದರು. ನಂತರ ಡ್ಯಾನ್ಸ್‌ ಕರ್ನಾಟಕ ಡ್ಯಾನ್ಸ್‌ ರಿಯಾಲಿಟಿ ಶೋನಲ್ಲಿ ಜಡ್ಜ್ ಆಗಿ ಕಾಣಿಸಿಕೊಂಡಿದ್ದರು.

"