ಬೆಂಗಳೂರು (ಫೆ. 17): ನಟಿ ರಕ್ಷಿತಾ ಪ್ರೇಮ್ ಮಾಧ್ಯಮಗಳ ಮೇಲೆ ಸ್ವಲ್ಪ ಗರಂ ಆಗಿದ್ದಾರೆ. 

ನಿರ್ದೇಶಕ ಪ್ರೇಮ್ ಹೊಸ ಚಿತ್ರದ ಬಗ್ಗೆ ಪ್ರಶ್ನಿಸಿದಾಗ ’ ಸ್ಟುಪಿಡ್ ಥರ ಪ್ರಶ್ನೆಗಳನ್ನು ಕೇಳಬೇಡಿ’ ಎಂದು ಮುನಿಸಿಕೊಂಡು ಹೋಗಿದ್ದಾರೆ. ರಕ್ಷಿತಾರ ಈ ಹೇಳಿಕೆಗೆ ಮಾಧ್ಯಮದಲ್ಲಿ ಸೋಷಿಯಲ್ ಮೀಡಿಯಾದಲ್ಲಿ ಖಂಡನೆ ವ್ಯಕ್ತವಾಗಿದೆ.  

ಮಾಧ್ಯಮಗಳ ವಿರುದ್ಧ ಮಾತನಾಡಿದ್ದಕ್ಕೆ ನನ್ನ ಬಗ್ಗೆ ಸೋಷಿಯಲ್ ಮೀಡಿಯಾಗಳಲ್ಲಿ ಕೆಟ್ಟದಾಗಿ ಕಮೆಂಟ್ ಮಾಡಿ ನನ್ನನ್ನು ಟ್ಯಾಗ್ ಮಾಡ್ತಿದ್ದಾರೆ. ನನಗೆ ಮಾಧ್ಯಮಗಳ ಮೇಲೆ ಗೌರವವಿದೆ. ನನ್ನನ್ನು ಬೆಳೆಸಿದ್ದು ಹಿರಿಯ ಪತ್ರಕರ್ತರು ಹಾಗೂ ಮಾಧ್ಯಮಗಳು. ನನ್ನ ಸ್ನೇಹಿತರಲ್ಲಿ ಬಹಳಷ್ಟು ಮಂದಿ ಸ್ನೇಹಿತರಿದ್ದಾರೆ. ಮಾಧ್ಯಮಗಳನ್ನು ನಾನು ಗೌರವಿಸುತ್ತೇನೆ ಎಂದಿದ್ದಾರೆ. 

 

’ ದಿ ವಿಲನ್’ ಸಿನಿಮಾ ಬಗ್ಗೆ ಸೋಷಿಯಲ್ ಮೀಡಿಯಾದಲ್ಲಿ ನೆಗೆಟಿವ್ ಕಾಮೆಂಟ್ ಮಾಡಲಾಗಿತ್ತು. ಸಿನಿಮಾ ಚೆನ್ನಾಗಿಲ್ಲ ಎಂಬ ಪ್ರತಿಕ್ರಿಯೆ ವ್ಯಕ್ತವಾಗಿತ್ತು. ಇದರಿಂದ ನೊಂದ ಪ್ರೇಮ್ ದಂಪತಿ ಪೊಲೀಸ್ ದೂರು ನೀಡಿದ್ದಾರೆ. ಇದೇ ಸಂದರ್ಭದಲ್ಲಿ ಪ್ರೇಮ್ ಆರು ಜನರ ಸಿನಿಮಾ ಮಾಡುವ ಪ್ಲಾನ್ ಇದೆ ಎಂದಿದ್ದರು. ಈ ಸಿನಿಮಾದ ಬಗ್ಗೆ ಪ್ರಶ್ನಿಸಿದಾಗ ರಕ್ಷಿತಾ ಮಾಧ್ಯಮಗಳ ಮೇಲೆ ರೇಗಾಡಿದ್ರು.