Asianet Suvarna News Asianet Suvarna News

6 ಮರಿಗಳಿಗೆ ಜನ್ಮ ನೀಡಿದ ಚಾರ್ಲಿ 777, ಮೈಸೂರಿಗೆ ಓಡೋಡಿ ಬಂದ ರಕ್ಷಿತ್ ಶೆಟ್ಟಿ!

ರಕ್ಷಿತ್ ಶೆಟ್ಟಿ ಅಭಿನಯದ ಚಾರ್ಲಿ 777 ಚಿತ್ರದಲ್ಲಿ ಸೆಂಟರ್ ಆಫ್ ಅಟ್ರಾಕ್ಷನ್ ಮುದ್ದಿನ ನಾಯಿ. ಇದೀಗ ನಾಯಿ ಚಾರ್ಲಿ 6 ಮುದ್ದಾದ ಮರಿಗಳಿಗೆ ಜನ್ಮ ನೀಡಿದೆ.ಚಾರ್ಲಿ ಹಾಗೂ ಮರಿಗಳನ್ನು ನೋಡಲು ರಕ್ಷಿತ್ ಶೆಟ್ಟಿ ಮೈಸೂರಿಗೆ ಓಡೋಡಿ ಬಂದಿದ್ದಾರೆ. ಚಾರ್ಲಿ ಹಾಗೂ 6 ಮರಿಗಳ ಕುರಿತು ಲೈವ್ ವಿಡಿಯೋ ಪೋಸ್ಟ್ ಮಾಡಿದ್ದಾರೆ.
 

Sandalwood charlie 777 fame Dog gives birth to 6 puppies Kannada Actor rakshit shetty reveals in Video ckm
Author
First Published May 15, 2024, 8:21 PM IST

ಮೈಸೂರು(ಮೇ.15) ಸ್ಯಾಂಡಲ್‌ವುಡ್‌ನ ಚಾರ್ಲಿ 777 ಚಿತ್ರ ದೇಶಾದ್ಯಂತ ಭಾರಿ ಸಂಚಲನ ಸೃಷ್ಟಿಸಿತ್ತು. ಈ ಚಿತ್ರ ನಾಯಿ ಮೇಲಿನ ಪ್ರೀತಿಯನ್ನು ದುಪ್ಪಟ್ಟು ಮಾಡಿತ್ತು. ಚಿತ್ರ ನೋಡಿದ ಬಹುತೇಕರು ಭಾವುಕರಾಗಿದ್ದರು. ಚಾರ್ಲಿ 777 ಚಿತ್ರದ ಮೂಲಕ ಪ್ರೇಕ್ಷಕರ ಮನಗೆದ್ದಿರುವ ಮುದ್ದಿನ ನಾಯಿ ಚಾರ್ಲಿ ಇದೀಗ ಗುಡ್ ನ್ಯೂಸ್ ನೀಡಿದೆ. ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಮುದ್ದಿನ ಚಾರ್ಲಿ ಹಾಗೂ ಮರಿಗಳನ್ನು ನೋಡಲು ನಟ ರಕ್ಷಿತ್ ಶೆಟ್ಟಿ ತಮ್ಮೆಲ್ಲಾ ಕೆಲಸಗಳನ್ನು ಬದಿಗೊತ್ತಿ ಮೈಸೂರಿಗೆ ಆಗಮಿಸಿದ್ದಾರೆ. ಚಾರ್ಲಿ ಜೊತೆ ಕೆಲ ಹೊತ್ತು ಕಳೆದಿದ್ದಾರೆ. ಈ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಲೈವ್ ವಿಡಿಯೋ ಮೂಲಕ ಎಲ್ಲರಿಗೂ ಸಿಹಿ ಹಂಚಿದ್ದಾರೆ.

ಮೈಸೂರಿನಲ್ಲಿರುವ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಚಾರ್ಲಿ ಹಾಗೂ 6 ಮರಿಗಳೂ ಆರೋಗ್ಯವಾಗಿದೆ. ಈ ಸಿಹಿ ಸುದ್ದಿ ಸಿಕ್ಕ ಬೆನ್ನಲ್ಲೈ ಮೈಸೂರಿಗೆ ತೆರಳಿದ ರಕ್ಷಿತ್ ಶೆಟ್ಟಿ ಚಾರ್ಲಿ ಬೇಟಿ ಮಾಡಿದ್ದಾರೆ. ಇದೇ ವೇಳೆ ಚಾರ್ಲಿ ಹಾಗೂ ಚಾರ್ಲಿಯ ಮರಿಗಳನ್ನು ಲೈವ್ ವಿಡಿಯೋ ಪೋಸ್ಟ್ ಮಾಡಿದ್ದಾರೆ. ದಿಢೀರ್ ಲೈವ್ ಬಂದಿದ್ದೇನೆ. ಇದು ಪ್ಲಾನ್ ಮಾಡಿ ಬಂದಿರುವ ಲೈವ್ ಅಲ್ಲ. ಚಾರ್ಲಿ 777 ಚಿತ್ರ ಬಿಡುಗಡೆಯಾಗಿ ಸರಿಸುಮಾರು 2 ವರ್ಷ ಉರುಳಿದೆ. ಚಿತ್ರ ಬಿಡುಗಡೆಯಾದ ಬಳಿಕ, ಚಾರ್ಲಿ ತಾಯಿಯಾದರೆ ಈ ಪಯಣ ಸಂಪೂರ್ಣವಾಗಲಿದೆ ಎಂದು ನಾನು ಯಾವತ್ತೂ ಎಂದುಕೊಳ್ಳುತ್ತಿದ್ದೆ ಎಂದು ರಕ್ಷಿತ್ ಶೆಟ್ಟಿ ಲೈವ್ ವಿಡಿಯೋ ಆರಂಭಿಸಿದ್ದಾರೆ.

National Film Awards: ಕನ್ನಡದ 'ಚಾರ್ಲಿ 777' ಪಡೆದ ಮೊತ್ತವೆಷ್ಟು? ಉಳಿದ ಚಿತ್ರಗಳಿಗೆ ಸಿಕ್ಕಿದ್ದೆಷ್ಟು?

ನನಗೆ ಹಾಗೂ ಇಡೀ ಚಿತ್ರ ತಂಡಕ್ಕೆ ಚಾರ್ಲಿ ತಾಯಿಯಾಗಬೇಕು ಅನ್ನೋ ಆಲೋಚನೆಯಿತ್ತು. ಕಿರಣ್ ರಾಜ್ ಕೂಡ ಇದೇ ಮಾತನ್ನೇ ಹೇಳುತ್ತಿದ್ದರು. ಚಾರ್ಲಿ ಮೈಸೂರಿನಲ್ಲಿ ನಲೆಸಿದೆ. ಈ ಕುರಿತು ನಾನು ಚಾರ್ಲಿಗೆ ತರಬೇತಿ ನೀಡಿದ ಟ್ರೈನರ್ ಪ್ರಮೋದ್‌ಗೆ ಪದೇ ಪದೇ ಕೇಳುತ್ತಿದ್ದೆ. ಆದರೆ ಉತ್ತರ ಕೊಂಚ ನಿರಾಸೆಯಾಗಿತ್ತು. ಚಾರ್ಲಿಗೆ ವಯಸ್ಸಾಗಿದೆ. ಹೀಗಾಗಿ ಸಾಧ್ಯತೆಗಳು ಕಡಿಮೆ ಅನ್ನೋ ಉತ್ತರ ಯಾವತ್ತೂ ಬರುತ್ತಿತ್ತು. ಆದರೆ ಅಚ್ಚರಿ ಎಂಬಂತೆ ಮೇ.09ರಂದು ಚಾರ್ಲಿ ಮುದ್ದಾಗ 6 ಮರಿಗಳಿಗೆ ಜನ್ಮ ನೀಡಿದ್ದಾಳೆ. ಇದಕ್ಕೊಸ್ಕರ ನಾನು ಮೈಸೂರಿಗೆ ಬಂದಿದ್ದೇನೆ. ಚಾರ್ಲಿ ಹಾಗೂ 6 ಮರಿಗಳನ್ನು ನೋಡಬೇಕೆಂದು ಮೈಸೂರಿಗೆ ಬಂದಿದ್ದೇನೆ ಎಂದು ರಕ್ಷಿತ್ ಶೆಟ್ಟಿ ವಿಡಿಯೋದಲ್ಲಿ ಹೇಳಿದ್ದಾರೆ.

 

 

ಮೈಸೂರಿನಲ್ಲಿರುವ ಪ್ರಮೋದ್ ಮನೆಯಲ್ಲಿ ಚಾರ್ಲಿ 6 ಮರಿಗಳಿಗೆ ಜನ್ಮ ನೀಡಿದೆ. ಇದೇ ವೇಳೆ ಚಾರ್ಲಿಯನ್ನು ತೋರಿಸಿದ ರಕ್ಷಿತ್ ಶೆಟ್ಟಿ, ಮರಿಗಳನ್ನು ತೋರಿಸಿದ್ದಾರೆ. ಇದೇ ವೇಳೆ ಚಾರ್ಲಿ ರಕ್ಷಿತ್ ಶೆಟ್ಟಿ ಕ್ಯಾಮೆರಾಗೆ ಫೋಸ್ ನೀಡಲು ಹಿಂದೇಟು ಹಾಕಿದೆ. ಚಾರ್ಲಿ ಅದೆಷ್ಟೆ ಕ್ಯಾಮೆರಾ ಎದುರಿಸಿದ್ದಾಳೆ ಎಂದರೆ, ಇದೀಗ ಕ್ಯಾಮೆರಾ ನೋಡಲು ಇಷ್ಟಪಡುತ್ತಿಲ್ಲ ಎಂದು ರಕ್ಷಿತ್ ಶೆಟ್ಟಿ ಹೇಳಿದ್ದಾರೆ.

ರಕ್ಷಿತ್ ಜನ್ಮದಿನಕ್ಕೂ ಚಾರ್ಲಿಗೂ ಇದೆ ಲಿಂಕ್.! ಏನದು..?

6 ಮರಿಗಳ ಪೈಕಿ 5 ಹೆಣ್ಣು ನಾಯಿ ಮರಿ ಹಾಗೂ 1 ಗಂಡು ನಾಯಿ ಮರಿ ಎಂದು ರಕ್ಷಿತ್ ಶೆಟ್ಟಿ ಸಂಪೂರ್ಣ ವಿವರ ನೀಡಿದ್ದಾರೆ. ಇದೀಗ ರಕ್ಷಿತ್ ಶೆಟ್ಟಿ ವಿಡಿಯೋ ಭಾರಿ ವೈರಲ್ ಆಗಿದೆ. 
 

Follow Us:
Download App:
  • android
  • ios