- ಇಷ್ಟುಹೇಳಿದಾಕ್ಷಣ ರಮ್ಯಾ ಅಂತ ಇನ್ಯಾರನ್ನೋ ಕಲ್ಪಿಸಿಕೊಳ್ಳಬೇಕಿಲ್ಲ. ಇವಳು ‘ಆಮ್ಲೆಟ್‌’ ರಮ್ಯಾ. ಅಂದ್ರೆ ‘ಕೆಂಪಿರ್ವೆ’ ಖ್ಯಾತಿಯ ನಿರ್ದೇಶಕ ವೆಂಕಟ್‌ ಭಾರದ್ವಾಜ್‌ ನಿರ್ದೇಶನದ ಹೊಸ ಚಿತ್ರ ‘ಆಮ್ಲೆಟ್‌’ನ ಕಥಾ ನಾಯಕಿ. ಈ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿರುವವರು ನಟಿ ಸಂಯುಕ್ತ ಹೊರನಾಡು. ಆಮ್ಲೆಟ್‌ ಚಿತ್ರದ ಚಿತ್ರೀಕರಣ ಶುರುವಾಗಿದೆ.

ಕಿರಿಕ್ ಬೆಡಗಿಯ ಲಿಪ್ ಲಾಕ್ ವೈರಲ್, ರಶ್ಮಿಕಾ ಅಲ್ಲ ಸಂಯುಕ್ತಾ!

‘ಪಾತ್ರದ ಹೆಸರು ರಮ್ಯಾ. ವಿದ್ಯಾವಂತೆ. ವೃತ್ತಿಯಲ್ಲಿ ಸಾಫ್ಟ್‌ವೇರ್‌ ಇಂಜಿನಿಯರ್‌. ಇದುವರೆಗೂ ನಾನು ಅಭಿನಯಿಸಿದ ಪಾತ್ರಗಳಿಗಿಂತ ಇದು ಡಿಫರೆಂಟ್‌. ತಾನಾಯಿತು , ತನ್ನ ಪಾಡಾಯಿತು ಎನ್ನುವ ಹುಡುಗಿ. ತುಂಬಾ ಕೋಪಿಷ್ಟೆ. ತಾನೊಬ್ಬಳೇ ಇರಬೇಕೆಂದು ಬಯಸುವ ವಿಚಿತ್ರ ಸ್ವಭಾವ. ಆದರೂ ಆಕೆಯದ್ದು ಅಸಾಧ್ಯಎನಿಸುವುದನ್ನು ಸಾಧಿಸಿ ತೋರಿಸುವ ಛಲ. ಸಾಕಷ್ಟುಕನಸು ಕಟ್ಟಿಕೊಂಡವಳು. ಸದಾ ತನ್ನ ಕೆರಿಯರ್‌ ಬಗ್ಗೆಯೇ ಆಲೋಚಿಸುವ ಹುಡುಗಿ. ಆಕೆಯ ಬದುಕಿನ ಸುತ್ತಲ ಘಟನೆಗಳ ಕತೆಯಿದು. ನನ್ನ ವ್ಯಕ್ತಿತ್ವಕ್ಕೆ ಕೊಂಚ ವಿರುದ್ಧವಾದದ್ದು ಈ ಪಾತ್ರ’ ಎನ್ನುತ್ತಾರೆ ಸಂಯುಕ್ತ ಹೊರನಾಡು.

ಸಂಯುಕ್ತಾ ಹೆಗ್ಡೆ ಹೀಗೂ ಇದ್ದಾರಾ? ಹೇಳ್ತಾರೆ ಕೇಳಿ ಬಾಯ್‌ಫ್ರೆಂಡ್!

ವಿಭಿನ್ನ ಸಿನಿಮಾ ಹೊಂದಿಸಿ ಬರೆಯಿರಿ

ಈ ನಡುವೆ ಸಂಯುಕ್ತ ಹೊರನಾಡು ಮತ್ತೊಂದು ಚಿತ್ರ ಒಪ್ಪಿಕೊಂಡಿದ್ದಾರೆ. ‘ಹೊಂದಿಸಿ ಬರೆಯಿರಿ’ ಎನ್ನುವುದು ಆ ಚಿತ್ರದ ಹೆಸರು. ಜಗನ್ನಾಥ್‌ ಅದರ ನಿರ್ದೇಶಕ. ಅಲ್ಲೂ ಸಂಯುಕ್ತ ಅವರದ್ದು ವಿಭಿನ್ನವಾದ ಪಾತ್ರವಂತೆ. ‘ಪರಿಸರದ ಬಗ್ಗೆ ಅಪಾರ ಪ್ರೀತಿ ಇರುವಂತಹ ಹುಡುಗಿ.ಅನಾಥರು, ಅನಾಥಶ್ರಮಗಳ ಬಗ್ಗೆ ತುಂಬಾ ಕಾಳಜಿ ಹೊಂದಿದವಳು. ಹಾಗೆ ನೋಡಿದರೆ ನಟನೆಯ ಜತೆಗೆ ನಿತ್ಯ ನಾನು ಮಾಡುತ್ತಾ ಬರುವ ಚಟುವಟಿಕೆಗಳೇ ಆ ಪಾತ್ರದಲ್ಲೂ ಕಾಣುತ್ತಿವೆ’ ಎನ್ನುತ್ತಾರೆ ಸಂಯುಕ್ತ ಹೊರನಾಡು.