ಕಿರಿಕ್ ಪಾರ್ಟಿ ಚಿತ್ರದಲ್ಲಿ ಕಾಣಿಸಿಕೊಂಡು ಕನ್ನಡಿಗರ ಗಮನ ಸೆಳೆದು ನಂತರ ವಿದೇಶದ ಬೀಚ್ ಸುತ್ತಿ ರಿಯಾಲಿಟಿ ಶೋಗಳಲ್ಲಿ ಕಾಣಿಸಿಕೊಳ್ಳುತ್ತಿದ್ದ ನಟಿ ಸಂಯುಕ್ತಾ ಹೆಗ್ಡೆ ಇದೀಗ ಲಿಪ್ ಲಾಕ್ ಸೀನ್ ಮೂಲಕ ಸುದ್ದಿ ಮಾಡಿದ್ದಾರೆ.

ತಮಿಳು ಚಿತ್ರರಂಗದಲ್ಲಿ ಬ್ಯುಸಿಯಾಗಿರುವ ಸಂಯುಕ್ತಾ ಅಭಿನಯದ ಪಪ್ಪಿ ಸಿನಿಮಾದ ಟ್ರೇಲರ್ ಬಿಡುಗಡೆಯಾಗಿದ್ದು ಸೋಶಿಯಲ್ ಮೀಡಿಯಾದಲ್ಲಿ ಸದ್ದು ಮಾಡುತ್ತಿದೆ.

ಮತ್ತೆ ಬಿಕಿನಿ ತೊಟ್ಟು ಮೋಡಿ ಮಾಡಿದ ಕಿರಿಕ್ ಬೆಡಗಿ!...

ಪಪ್ಪಿ ಚಿತ್ರದಲ್ಲಿ ಸಂಯುಕ್ತಾ ಹೆಗ್ಡೆ ಮೈ ಚಳಿ ಬಿಟ್ಟು ಅಭಿನಯಿಸಿದ್ದು ಹೀರೋ ಜೊತೆ ಬೈಕ್ ನಲ್ಲಿ ಹೋಗುವಾಗ ತುಟಿಗೆ ಮುತ್ತಿಕ್ಕುವ ದೃಶ್ಯಗಳು ವೈರಲ್ ಆಗಿವೆ.  ಯು ಟ್ಯೂಬ್ ನಲ್ಲಿ ಸಾಕಷ್ಟು ವೀವ್ ಗಳನ್ನು ಕಾಣುತ್ತಿದೆ.

ಮೈ ನೇಮ್ ಇಸ್ ರಾಜ್ ಎನ್ನುವ ಚಿತ್ರದಲ್ಲಿ ಸಂಯುಕ್ತಾ ಕಾಣಿಸಿಕೊಳ್ಳಬೇಕಾಗಿತ್ತು. ಆದರೆ ಲಿಪ್ ಲಾಕ್ ದೃಶ್ಯವಿದೆ ಎಂಬ ಕಾರಣಕ್ಕೆ ಇದನ್ನು ತಿರಸ್ಕರಿಸಿದ್ದರು ಎಂಬ ಮಾತಿದೆ. ಆದರೆ ಈಗ ಪಪ್ಪಿಯಲ್ಲಿ ತುಟಿಗೆ ತುಟಿ ನೀಡಿದ್ದಾರೆ.

ಕಿರಿಕ್ ಪಾರ್ಟಿ ಕನ್ನಡ ಚಿತ್ರದ ಮೂಲಕ ಬಂದ ಸಂಯುಕ್ತಾ ಹೆಗ್ಡೆ ಮತ್ತು ರಶ್ಮಿಕಾ ಮಂದಣ್ಣ ಇದೀಗ ತೆಲುಗು ಮತ್ತು ತಮಿಳು ಚಿತ್ರರಂಗದಲ್ಲಿ ಫುಲ್ ಬ್ಯುಸಿಯಾಗಿದ್ದಾರೆ. ರಶ್ಮಿಕಾ ಅಭಿನಯದ ಡಿಯರ್ ಕಾಮ್ರೇಡ್ ಚಿತ್ರದಲ್ಲಿಯೂ ಲಿಪ್ ಲಾಕ್ ಸೀನ್ ಗಳು ಇದ್ದವು.