ಕಿರಿಕ್ ಪಾರ್ಟಿ ಹುಡುಗಿ ಸಂಯುಕ್ತಾ ಹೆಗಡೆ ಸಿನಿಮಾಗಳಿಗಿಂತ ಹೆಚ್ಚಾಗಿ ವಿವಾದಗಳಿಂದಲೇ ಹೆಸರಾದವರು. ಇವರು ಹೋದಲ್ಲೆಲ್ಲಾ ಏನಾದರೊಂದು ಕಿರಿಕ್ ಇದೆ ಅಂತಾನೇ ಅರ್ಥ ಅನ್ನುವಷ್ಟರ ಮಟ್ಟಿಗೆ ಕಿರಿಕ್ ಮಾಡೋದ್ರಲ್ಲಿ ಫೇಮಸ್. ಇವರು ಚೆರಿಸ್ ಎನ್ನುವ ಫಾರಿನ್ ಹುಡುಗನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ. ಡೇಟಿಂಗ್ ಫೋಟೋಗಳನ್ನು ಆಗಾಗ ಶೇರ್ ಮಾಡುತ್ತಿರುತ್ತಾರೆ. 

ಇದೀಗ ಚೆರಿಸ್ ಇನ್ಸ್ಟಾಗ್ರಾಮ್ ಪ್ರಶ್ನೋತ್ತರದಲ್ಲಿ ಸಂಯುಕ್ತಾ ಬಗ್ಗೆ ಉತ್ತರಿಸಿದ್ದಾರೆ. 

ನೀವಿಬ್ಬರು ಪರ್ಫೆಕ್ಟ್ ಜೋಡಿಯಂತೆ ಕಾಣಿಸುತ್ತೀರಿ? 

ಹೌದು. ಒಪ್ಪಿಕೊಳ್ಳುತ್ತೇನೆ. ಥ್ಯಾಂಕ್ಸ್!

ಭಾರತ, ಭಾರತೀಯ ಸಂಸ್ಕೃತಿ ಬಗ್ಗೆ ಏನೆನಿಸುತ್ತದೆ? 
ತಿಳಿದುಕೊಳ್ಳಲು ಉತ್ಸುಕನಾಗಿದ್ದೇನೆ. ಇಲ್ಲಿನ ಫುಡ್ ಅಂತೂ ಅಮೇಜಿಂಗ್! 

ಬೆಂಗಳೂರಿಗೆ ಬರಲು ಎಕ್ಸೈಟ್ ಆಗಿದ್ದೀರಾ? 
ಮೊದಲಿಗೆ ಸಂಯುಕ್ತಾಳನ್ನು ಮತ್ತೊಮ್ಮೆ ನೋಡಲು ಎಕ್ಸೈಟ್ ಆಗಿದ್ದೇನೆ. ಭಾರತ ನನಗೊಂದು ಸಾಹಸ! 

ಎಲ್ಲಿದ್ದೀರಿ? 
ಸದ್ಯಕ್ಕೆ ಜರ್ಮನಿಯಲ್ಲಿದ್ದೇನೆ. ಕೆಲವು ದಿನಗಳ ಮಟ್ಟಿಗೆ ಬೆಂಗಳೂರಿಗೆ ಬರಲಿದ್ದೇನೆ. 

ನಿಮ್ಮ ಲವ್ ಸ್ಟೋರಿ ಬಗ್ಗೆ ಚಿಕ್ಕದಾಗಿ ಹೇಳಿ. 
ಸಾಧ್ಯವಿಲ್ಲ! ಅದು ದೊಡ್ಡ ಕಥೆ! 

 

ನೀವು ಭಾರತೀಯ ಅಡುಗೆಯನ್ನು ಟ್ರೈ ಮಾಡಿದ್ದೀರಾ? 
ಸಂಯುಕ್ತಾ  ಆಗಾಗ ಟ್ರೈ ಮಾಡುತ್ತಿದ್ದಾರೆ. ಚಿಕನ್ ಟಿಕ್ಕಾ ಮಸಾಲಾ ನನ್ನ ಫೇವರೇಟ್.