Asianet Suvarna News

ರಾಹುಲ್‌ ಗಾಂಧಿಗೆ ನಿಮ್ಮಂತೆ ಯಾರೂ ಇಲ್ಲ ಅಂದ್ರು ರಮ್ಯಾ! ಇದಕ್ಕೆ ಬೇರೆ ಅರ್ಥ ಇದೆಯಾ..

ದಿವ್ಯ ಸ್ಪಂದನ ರಮ್ಯಾ ಅವರು ರಾಹುಲ್‌ ಗಾಂಧಿ ಅವರ ಬರ್ತ್‌ ಡೇಗೆ ಡಿಫರೆಂಟಾಗಿ ಶುಭ ಹಾರೈಸಿದ್ದಾರೆ. ಅವರು ರಾಹುಲ್‌ಗೆ ನಿಮ್ಮಂತೆ ಬೇರೆ ಯಾರೂ ಇಲ್ಲ ಅಂದಿದ್ಯಾಕೆ..

 

Sandalwood actress Ramya wishes Congress Rahul Gandhi in a special way
Author
Bengaluru, First Published Jun 19, 2021, 7:20 PM IST
  • Facebook
  • Twitter
  • Whatsapp

ದಿವ್ಯ ಸ್ಪಂದನ ರಮ್ಯಾ ಅವರು ರಾಹುಲ್‌ ಗಾಂಧಿ ಅವರ ಬರ್ತ್‌ ಡೇಗೆ ಡಿಫರೆಂಟಾಗಿ ಶುಭ ಹಾರೈಸಿದ್ದಾರೆ. ಅವರು ರಾಹುಲ್‌ಗೆ ನಿಮ್ಮಂತೆ ಬೇರೆ ಯಾರೂ ಇಲ್ಲ ಅಂದಿದ್ಯಾಕೆ..
ಕಾಂಗ್ರೆಸ್‌ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಜನ್ಮದಿನಕ್ಕೆ ಹಲವು ಗಣ್ಯರು ಶುಭ ಹಾರೈಸಿದ್ದಾರೆ. ೫೧ ರ ಹರೆಯದ ಅವಿವಾಹಿತ ರಾಹುಲ್‌ ಗಾಂಧಿ ಅವರಿಗೆ ದಿವ್ಯ ಸ್ಪಂದನ ರಮ್ಯಾ ಅವರ ಶುಭ ಹಾರೈಕೆ ಡಿಫರೆಂಟಾಗಿದೆ. ಇದು ಹಲವರ ಹುಬ್ಬೇರುವಂತೆ ಮಾಡಿದೆ. ಇನ್‌ಸ್ಟಾಗ್ರಾಂನ ತನ್ನ ಸ್ಟೇಟಸ್‌ನಲ್ಲಿ 'ನಿಮ್ಮಂತೆ ಬೇರೆ ಯಾರೂ ಇಲ್ಲ, ಜಗತ್ತನ್ನೇ ಉತ್ತಮಗೊಳಿಸಬಲ್ಲ ಅದ್ಭುತ ವ್ಯಕ್ತಿ ನೀವು. ನಿಮಗೆ ಹ್ಯಾಪಿ ಬರ್ತ್‌ ಡೇ'ಎಂದು ರಮ್ಯಾ ಶುಭ ಹಾರೈಸಿದ್ದಾರೆ. ರಮ್ಯಾ ಅವರ ಈ ಮಾತನ್ನು ಕೆಲವೊಬ್ಬರು ಬೇರೆ ಥರ ಅರ್ಥೈಸಿಕೊಂಡಿದ್ದಾರೆ. 

ಪದೇ ಪದೇ ಸ್ಯಾಂಡಲ್‌ವುಡ್‌ ಪದ್ಮಾವತಿಗೆ ಕಾಡುತ್ತಿದೆ ಅದೇ ಪ್ರಶ್ನೆ! ...

ಸ್ಯಾಂಡಲ್‌ವುಡ್‌ನ ಮೋಹಕ ತಾರೆಯಾಗಿ ಗುರುತಿಸಿಕೊಂಡಿದ್ದ ರಮ್ಯಾ ದಶಕಗಳ ಕಾಲ ಇಲ್ಲಿ ಅನಭಿಷಿಕ್ತ ರಾಣಿಯಂತೆ ಮೆರೆದವರು. ಬಹುಶಃ ರಾಜಕೀಯಕ್ಕೆ ಎಂಟ್ರಿ ಕೊಡದೇ ಹೋಗಿದ್ದರೆ ಇನ್ನೂ ಸಿನಿಮಾ ರಂಗದಲ್ಲಿ ಮಿಂಚುತ್ತಿರುತ್ತಿದ್ದರೇನೋ.. ಆದರೆ ಸದ್ಯಕ್ಕೀಗ ರಾಜಕೀಯದಲ್ಲೂ ಇಲ್ಲ, ಸಿನಿಮಾದಲ್ಲೂ ಇಲ್ಲ ಅನ್ನುವ ಹಾಗೆ ಸಿಂಪಲ್ಲಾಗಿ ಬದುಕುತ್ತಿದ್ದಾರೆ. ರಮ್ಯಾ ಅವರ ಈ ನಡೆ ಹಲವರಿಗೆ ಒಗಟಿನ ಹಾಗೆ ಕಂಡಿದೆ. ತಿಂಗಳ ಕೆಳಗೆ ಅವರು ಇನ್‌ಸ್ಟಾದಲ್ಲಿ ಕಾಣಿಸಿಕೊಂಡಿದ್ದಾಗಲೂ ಜನ ಅವರ ವಯುಕ್ತಿಕ ಬದುಕಿನ ಬಗ್ಗೆ ಕೆದಕುವ ಪ್ರಯತ್ನ ಮಾಡಿದರು. ಇನ್‌ಸ್ಟಾದಲ್ಲಿ 'ಆಸ್ಕ್ ಮಿ ಎನಿಥಿಂಗ್‌' ಅಂತ ಕೇಳಿ ಸಂವಾದಕ್ಕೆ ಇಳಿದಿದ್ರು. ಒಬ್ಬ ಅಭಿಮಾನಿ 'ಸಿನಿಮಾದಲ್ಲಿ ಮತ್ತೆ ಯಾವಾಗ ಕಾಣಿಸಿಕೊಳ್ತೀರಿ?' ಅಂತ ಕೇಳಿದ್ರೆ, 'ಈ ಚಿತ್ರರಂಗ ಅನ್ನೋದು ನನ್ನ ಪಾಲಿಗೆ ಮುಳುಗಿದ ಹಡಗು. ಅಲ್ಲಿಗೆ ಗುಡ್‌ ಬೈ ಹೇಳಿ ಯಾವುದೋ ಕಾಲ ಆಯ್ತು' ಅಂತ ಹೇಳಿ ಕೇಳಿದವರ ಎದೆ ನಡುಗಿಸಿದರು. ಅವರ ಈ ಸ್ಟೇಟ್‌ಮೆಂಟ್ ಅಭಿಮಾನಿಗಳಿಗೆ ಮಾತ್ರವಲ್ಲ, ಸ್ಯಾಂಡಲ್‌ವುಡ್ ಮಂದಿಗೂ ಶಾಕಿಂಗ್ ಆಗಿತ್ತು. ರಾಜಕೀಯದಿಂದ ಹೇಗಿದ್ದರೂ ಹೊರಬಂದಿದ್ದಾರೆ. ಇನ್ನೇನು ಸ್ವಲ್ಪ ದಿನದಲ್ಲಿ ಸಿನಿಮಾಗೆ ಮರಳುತ್ತಾರೆ ಅಂದುಕೊಂಡವರಿಗೆ ಅವರ ಈ ಮಾತು ತಂದ ನಿರಾಸೆ ಅಂತಿಂಥದ್ದಲ್ಲ. ವಯಸ್ಸು ಮೂವತ್ತೈದರ ಮೇಲೆ ಮೂರು ವರ್ಷಗಳಾದರೂ ಅವರ ಚೆಲುವು ಕುಂದಿರಲಿಲ್ಲ. ಜೊತೆಗೆ ಅವರ ನಂತರ ಸಿನಿಮಾ ರಂಗಕ್ಕೆ ಅಡಿ ಇಟ್ಟ ರಕ್ಷಿತಾ, ರಾಧಿಕಾ ಪಂಡಿತ್ ಮತ್ತಿತರರು ಸಾಂಸಾರಿಕ ಬದುಕಿಗೆ ಅಡಿಯಿಟ್ಟು ಎಷ್ಟೋ ಕಾಲ ಕಳೆದಿದೆ. ಆದರೆ ಈಕೆ ಮಾತ್ರ ಇನ್ನೂ ಅವಿವಾಹಿತೆ. 

ಮತ್ತೆ ಚರ್ಚೆಗೆ ಬಂತು ನಟಿ ರಮ್ಯಾ ಮದುವೆ ವಿಚಾರ; ಮೋಹಕ ತಾರೆ ಕೊಟ್ಟ ಉತ್ತರವಿದು! ...

ಮದುವೆ ಅಂದರೆ ಬೋರಿಂಗ್, ನಾನು ಮದುವೆ ಆಗಲ್ಲ ಅಂತಲೇ ಹೇಳುತ್ತಿರುತ್ತಾರೆ ರಮ್ಯಾ. ಯಾರು ಜೊತೆಗಾದರೂ ರಿಲೇಶನ್‌ನಲ್ಲಿದ್ದೀರಾ ಅಂತ ಕೇಳಿದರೂ ನೋ ಅಂತಲೇ ಉತ್ತರಿಸಿದ್ದಾರೆ. ನಾಯಿಗಳ ಜೊತೆ ಆಟ, ಓದು, ಸಿನಿಮಾ ವೀಕ್ಷಣೆ, ಧ್ಯಾನ ಎಲ್ಲ ಮಾಡ್ಕೊಂಡು ಆರಾಮವಾಗಿದ್ದೀನಿ. ಸದ್ಯಕ್ಕೆ ಏನೂ ಮಾಡ್ತಿಲ್ಲ ಅಂದಿದ್ದಾರೆ. ಇನ್ನೊಂದು ಕಡೆ ಅವರಿಗೆ ರಾಹುಲ್‌ ಜೊತೆಗೆ ಏನೋ ಸಂಥಿಂಗ್ ಸಂಥಿಂಗ್ ಇದೆ ಅನ್ನೋ ಗುಸು ಗುಸು ಬಹಳ ಹಿಂದಿನ ದಿನಗಳಿಂದಲೇ ಕೇಳಿಬರುತ್ತಿರುವ ಸುದ್ದಿ. ಮಂಡ್ಯದ ಎಂಪಿಯಾಗಿ ಅವರು ಪಾರ್ಲಿಮೆಂಟ್‌ಗೆ ಕಾಲಿಟ್ಟ ಸ್ವಲ್ಪ ದಿನಗಳಿಂದಲೇ ರಮ್ಯಾ, ರಾಹುಲ್ ಹೆಚ್ಚು ಕ್ಲೋಸ್ ಇದ್ದಾರೆ ಅನ್ನುವ ಮಾತು ಕೇಳಿ ಬಂತು. ಆಮೇಲಾಮೇಲೆ ಈ ಕ್ಲೋಸ್ ನೆಸ್‌ಗೆ ಒಂದಿಷ್ಟು ರೆಕ್ಕೆ ಪುಕ್ಕಗಳೂ ಹುಟ್ಟಿಕೊಂಡವು. ರಮ್ಯಾ ನೆಹರೂ ಕುಟುಂಬಕ್ಕೆ ಹೆಚ್ಚು ಹತ್ತಿರದವರು ಎಂಬ ಮಾತು ತೀರಾ ಕಾಮನ್ ಆಯ್ತು. ಜೊತೆಗೆ ರಾಹುಲ್, ರಮ್ಯಾ ಅವಿವಾಹಿತರಾಗಿಯೇ ಉಳಿದದ್ದು ಅವರ ಮಾತಿಗೆ ಪುಷ್ಠಿ ಕೊಡುವ ಹಾಗಿತ್ತು. ಈ ಇಬ್ಬರಿಗೂ ಮದುವೆಯ ಬಗ್ಗೆ ಅಂಥಾ ಒಲವು ಇದ್ದ ಹಾಗಿಲ್ಲ. ಮದುವೆಯ ಬಂಧನಕ್ಕೆ ಸಿಲುಕದೇ ಬದುಕನ್ನು ಎನ್ ಜಾಯ್ ಮಾಡಬೇಕು ಎಂದು ತೀರ್ಮಾನಿಸಿದ ಹಾಗೆ. ಈಗ ನಾನು ರಾಜಕೀಯದಿಂದ ಹೊರ ಬಂದಿದ್ದೇನೆ ಎಂಬ ಮಾತನ್ನ ರಮ್ಯಾ ಹೇಳುತ್ತಿರುತ್ತಾರೆ. ಆದರೆ ರಾಹುಲ್ ಜೊತೆಗಿನ ಗೆಳೆತನ ಮುಂದುವರಿದ ಹಾಗಿದೆ. ಜೊತೆಗೆ ರಾಹುಲ್ ಗೆ ವಿಶ್ ಮಾಡಿ ಅವರು ಹಾಕಿರುವ ಸ್ಟೇಟಸ್ ನಲ್ಲಿ ಮಾಮೂಲಿ ಹಾರೈಕೆಗಿಂತ ಭಿನ್ನವಾಗಿ ಧ್ವನಿ ಇದ್ದಂತಿದೆ. ಜೊತೆಗೆ ಇವರಿಬ್ಬರ ಸಂಬಂಧದ ಬಗೆಗಿನ ಗುಲ್ಲುಗಳಿಗೆ ನೀರೆರೆಯೋ ಹಾಗಿದೆ. 

ರಮ್ಯಾಗೆ ರಕ್ಷಿತ್ ಶೆಟ್ಟಿಯನ್ನು ಮದುವೆಯಾಗಿ ಎಂದ ಅಭಿಮಾನಿಗಳು; ಏನೆಲ್ಲಾ ಪ್ರಶ್ನೆಗಳಿತ್ತು ನೋಡಿ! ...

Follow Us:
Download App:
  • android
  • ios