ಮತ್ತೆ ನಿಮ್ಮನ್ನು ಸಿನಿಮಾದಲ್ಲಿ ಯಾವಾಗ ನೋಡೋದು?

ನನ್ನ ಸಿನಿಮಾ ಜರ್ನಿ ಮುಗಿದು ಬಹಳ ಕಾಲವಾಯ್ತು. ಆ ನಾವೆ ನನ್ನಿಂದ ಬಹುದೂರ ಸಾಗಿದೆ.

ನಿಮ್ಮಲ್ಲಿ ನೀವು ದ್ವೇಷಿಸುವ ಗುಣ?

ಭಾವನೆಗಳನ್ನು ನಿಭಾಯಿಸಲಾಗದಿರುವುದು.

RCB ನನ್ನ ಫೆವರೇಟ್, ಸಿನಿಮಾ ಮತ್ತು ರಾಜಕಾರಣಕ್ಕೆ ರಮ್ಯಾ ಗುಡ್‌ ಬೈ!?

ನೀವು ಈ ವಾರ ಓದಿದ ಇಂಟೆರೆಸ್ಟಿಂಗ್‌ ಪುಸ್ತಕ ಅಥವಾ ಗಮನಿಸಿದ ವಿಚಾರ?

ದ ಪ್ರಾಬ್ಲೆಂ ಆಫ್‌ ಅದರ್‌ ಮೈಂಡ್ಸ್‌ ಪುಸ್ತಕ. ಬಹಳ ಇಂಟೆರೆಸ್ಟಿಂಗ್‌ ಆಗಿದೆ.

ಹೇ, ಪ್ಲೀಸ್‌, ಮದ್ವೆಯಾಗಿ?

(ನಗುವ ನಾಯಿಯ ಇಮೋಜಿ)

ರಾಜಕೀಯದಲ್ಲಿ ಫುಲ್‌ ಟೈಮ್‌ ತೊಡಗಿಸಿಕೊಳ್ಳುವ ಯೋಚನೆ ಇದೆಯಾ?

ಇಲ್ಲ. ರಾಜಕೀಯದಲ್ಲಿರೋದಿಲ್ಲ.

ನಿಮ್ಮ ಫೇವರಿಟ್‌ ಸ್ಟೋರಿ ಬುಕ್‌?

ಸೋಫೀಸ್‌ ವಲ್ಡ್‌ರ್‍

ರೀಸೆಂಟಾಗಿ ನೋಡಿದ ಕನ್ನಡ ಸಿನಿಮಾ?

ಗಂಟುಮೂಟೆ. ಸ್ವಲ್ಪ ಸಮಯದ ಹಿಂದೆ ನೋಡಿದ್ದು, ಬಹಳ ಇಷ್ಟಆಯ್ತು.

ರಕ್ಷಿತಾ ಹುಟ್ಟುಹಬ್ಬಕ್ಕೆ ಸ್ಪೆಷಲ್‌ ಗಿಫ್ಟ್‌ ಕೊಟ್ಟ ರಮ್ಯಾ: ಬೆಸ್ಟ್‌ ಫ್ರೆಂಡ್ಸ್‌ ಬಗ್ಗೆ ಚರ್ಚೆ ಶುರು! 

ನಿಮ್ಮ ಹೊಳೆಯುವ ಮೈಕಾಂತಿಯ ರಹಸ್ಯ ಹೇಳುವಿರಾ?

ನನ್ನದು ಹೊಳೆಯುವ ಚರ್ಮ ಅಲ್ಲ. ಆದರೆ ನನಗೆ ನನ್ನ ಮೈ ಕಾಂತಿ ಇಷ್ಟ. ಚರ್ಮದಲ್ಲಿ ಆದ್ರ್ರತೆ ಇರಬೇಕು ಅಂದರೆ ಚೆನ್ನಾಗಿ ನೀರು ಕುಡಿಯಬೇಕು.

ನೀವು ಮದುವೆಯಾಗುವ ಹುಡುಗನಲ್ಲಿ ಇರಬೇಕಾದ ಗುಣ?

ಫನ್ನಿ ಪ್ರಶ್ನೆ. ಸಹಾನುಭೂತಿ, ಸ್ನೇಹ ಮತ್ತು ಓಪನ್‌ ಮೈಂಡ್‌

ಅಭಿ ಚಿತ್ರದ ಮೂಲಕ ನೀವು ಸ್ಯಾಂಡಲ್‌ವುಡ್‌ಗೆ ಕಾಲಿಟ್ಟು ಇಂದಿಗೆ 18 ವರ್ಷ. ಈ ಸಂದರ್ಭ ಏನಾದರೂ ಹೇಳಲು ಇಷ್ಟಪಡುತ್ತೀರಾ?

ವಾವ್‌, ಹೌದಾ? ಇದು ನಿಜಕ್ಕೂ ಗ್ರೇಟ್‌. ಕನ್ನಡ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದ ನಾನು ಸಾಕಷ್ಟುಕಲಿತಿದ್ದೇನೆ, ಚಿತ್ರರಂಗ ನನ್ನನ್ನು ಬಹಳಷ್ಟುತಿದ್ದಿದೆ, ವ್ಯಕ್ತಿತ್ವ ರೂಪಿಸಿದೆ. ಇವತ್ತು ನಾನು ಏನಾಗಿದ್ದೇನೋ ಅದೆಲ್ಲ ಸಾಧ್ಯವಾದದ್ದು ಸ್ಯಾಂಡಲ್‌ವುಡ್‌ನಿಂದ. ಪ್ರಸಿದ್ಧಿ ಮತ್ತು ಹಣ ಗ್ರೇಟ್‌ ಟೀಚರ್‌ಗಳು. ನನ್ನ ಸಿನಿಮಾ ಜರ್ನಿಯನ್ನು ಮಾನವೀಯತೆ ಮತ್ತು ಕೃತಜ್ಞತೆಯಿಂದ ಅವಲೋಕನ ಮಾಡಿಕೊಳ್ಳಲು ಇಷ್ಟಪಡುತ್ತೇನೆ.

ನಿಮ್ಮ ದಿನಚರಿ ಹೇಗಿರುತ್ತೆ?

ನನ್ನ ನಾಯಿಗಳ ಜೊತೆಗೆ ಆಟ, ಎಕ್ಸರ್‌ಸೈಸ್‌, ಮೂವಿ ನೋಡೋದು, ಓದು, ಕ್ಲೀನಿಂಗ್‌ ಅಂತ ದಿನ ಕಳೆಯುತ್ತಿದ್ದೇನೆ.

ಸೌಂಡ್‌ ಇಲ್ಲದೆ ಸೀಟಿ ಹೊಡೆದ ರಮ್ಯಾ.. ಇಷ್ಟೊಂದು ಖುಷಿಗೆ ಏನ್ ಕಾರಣ? 

ನೀವು ಸಿನಿಮಾ, ರಾಜಕೀಯದಲ್ಲಿ ಇಲ್ಲ ಅಂತೀರಿ. ಹಾಗಿದ್ರೆ ಮತ್ತೇನು ಮಾಡ್ತಿದ್ದೀರಿ ಅನ್ನುವ ಬಗ್ಗೆ ಕುತೂಹಲ.

ನಥಿಂಗ್‌ ರಿಯಲೀ. ಸಾಮಾನ್ಯ ಬದುಕು ಬದುಕುತ್ತಿರುವೆ. ಎಲ್ಲರೂ ಮಾಡುವಂಥ ಸಾಮಾನ್ಯ ಕೆಲಸ ಮಾಡುತ್ತಿದ್ದೇನೆ.

ನಿಮಗೆ ಉದ್ವೇಗದ ಸಮಸ್ಯೆ ಇದೆಯಾ?

ಹೌದು. ಧ್ಯಾನ, ವ್ಯಾಯಾಮ, ಇತರರ ಜೊತೆ ಮಾತಾಡೋದರಿಂದ ಈ ಸಮಸ್ಯೆಯಿಂದ ಹೊರಬರೋಕೆ ಸಾಧ್ಯ ಆಗ್ತಿದೆ. ಪ್ರಾಣಿಗಳ ಜೊತೆಗೆ ಇರೋದು, ಪ್ರಕೃತಿಯನ್ನು ಆಸ್ವಾದಿಸುತ್ತಾ ನಡೆಯೋದು ಎಲ್ಲ ಸಹಕಾರಿ.

ನೀವು ಸಿನಿಮಾಕ್ಕೆ ವಾಪಾಸ್‌ ಬರ್ತಿಲ್ಲ ಅನ್ನೋದು ಕೇಳಿ ನನ್ನ ಹೃದಯ ಒಡೆದು ಚೂರಾಗಿದೆ. ಯಾಕಿಂಥಾ ನಿರ್ಧಾರ?

ನಿಮ್ಮನ್ನು ನಿರಾಸೆ ಮಾಡಿದ್ದಕ್ಕೆ ಕ್ಷಮೆ ಇರಲಿ. ನಾನು ಸಿನಿಮಾದಲ್ಲಿ ಆಸಕ್ತಿ ಕಳೆದುಕೊಂಡಿದ್ದೇನೆ.

ನಿಮಗೆ ಮದ್ವೆ ಆಗಿದೆಯಾ?

ಹ್ಹ ಹ್ಹ ಹ್ಹಾ, ಖಂಡಿತಾ ಇಲ್ಲ. ವಿಚಿತ್ರ ಪ್ರಶ್ನೆ

ಡೇಟಿಂಗ್‌ ಮಾಡ್ತಿದ್ದೀರಾ?

ಇಲ್ಲ.

ನೀವು ಪದೇ ಪದೇ ಪ್ರೀತಿಯಲ್ಲಿ ಬೀಳೋದನ್ನು ಹೇಗೆ ತಡೆಯುತ್ತೀರಿ?

ಪ್ರೀತಿ ನಿರಂತರ ಹರಿವು.

ನಿಮ್ಮ ನೆಕ್ಸ್ಟ್‌ಪ್ಲಾನ್‌ ಏನು, ಮದುವೆ ಯಾವಾಗ?

ಮದುವೆ, ಮದುವೆ! ಗಾಡ್‌, ಲೈಫ್‌ನಲ್ಲಿ ಮಾಡೋಕೆ ಅದೊಂದೇ ಕೆಲ್ಸ ಇರೋದಾ? ಮದ್ವೆ ಆದೋರು ಖುಷಿಯಾಗಿರಲ್ಲ ಗೊತ್ತಾ! (ಸ್ಮೈಲಿ)

ನೀವು ಸಿನಿಮಾದ ನಾವೆ ಬಹಳ ದೂರ ಹೋಗಿದೆ ಅಂತ ಅಂದ್ರಿ. ಅದನ್ನು ಮರಳಿ ತನ್ನಿ, ಮತ್ತೆ ಸಿನಿಮಾಗೆ ಬನ್ನಿ ಪ್ಲೀಸ್‌..

ಹ್ಹ ಹ್ಹಾ, ಹಡಗು ಮುಳುಗಿ ಹೋಗಿದೆ!

ನೀವು ರಕ್ಷಿತ್‌ ಶೆಟ್ಟಿಅವ್ರನ್ನ ಯಾಕೆ ಮದ್ವೆ ಆಗ್ಬಾರ್ದು?

(ರಕ್ಷಿತ್‌ ಶೆಟ್ಟಿಟ್ಯಾಗ್‌ ಮಾಡಿ ನಗುವ ಇಮೋಜಿ)