ಡಾಲಿ ಧನಂಜಯ್‌ ಸಿನಿಮಾದಲ್ಲಿ ರಮ್ಯಾ, ಶಿವರಾಜ್‌ ಕುಮಾರ್; ಯಾರಿಗೆ ಜೋಡಿಯಾಗ್ತಾರೆ ಸ್ಯಾಂಡಲ್‌ವುಡ್ ಕ್ವೀನ್?

ಪದ್ಮಾವತಿ ಖ್ಯಾತಿಯ ರಮ್ಯಾ ಬಣ್ಣದ ಜಗತ್ತಲ್ಲಿ ಮತ್ತೆ ತಮ್ಮ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಫುಲ್ ಫ್ಲೆಡ್ಜ್ ಹೀರೋಯಿನ್ ಆಗಿ ಸ್ಕ್ರೀನ್ ಮೇಲೆ ಬರಬೇಕು ಅಂತ ಪ್ಲಾನ್ ಮಾಡಿರೋ ರಮ್ಯಾ ಅದಕ್ಕಾಗಿ ಉತ್ತರಕಾಂಡದ ರಕ್ತಸಿಕ್ತ ಕತೆಗೆ ನಾಯಕಿಯಾಗಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಜೊತೆ ರಮ್ಯಾ ನಟಿಸೋ ಬ್ಯಾಂಗ್ ಬ್ಯಾಂಗ್ ಸುದ್ದಿಯೊಂದು ಕನ್ಫರ್ಮ್ ಆಗಿದೆ. 

Sandalwood actress Ramya starts second innings in movie Uttarakanda srb

ಸ್ಯಾಂಡಲ್‌ವುಡ್ ಕ್ವೀನ್ ಖ್ಯಾತಿಯ ನಟಿ ರಮ್ಯಾ ಮತ್ತೆ ಸಿನಿಮಾಗೆ ಕಮ್‌ಬ್ಯಾಕ್ ಆಗುತ್ತಿದ್ದಾರೆ. ನಟ ಧನಂಜಯ್ ನಾಯಕತ್ವದ 'ಉತ್ತರಕಾಂಡ' ಚಿತ್ರದ ಮೂಲಕ ನಟಿ ರಮ್ಯಾ  ಕನ್ನಡದಲ್ಲಿ ಮತ್ತೊಂದು ಇನ್ನಿಂಗ್ಸ್ ಶುರುಮಾಡುವುದು ಕನ್ಫರ್ಮ್ ಆಗಿದೆ. ಸ್ವಲ್ಪ ಕಾಲದ ಹಿಂದೆ ತೆರೆಗೆ ಬಂದಿದ್ದ 'ಹಾಸ್ಟೆಲ್ ಹುಡುಗರು' ಸಿನಿಮಾದಲ್ಲಿ ಹಾಟ್ ಲೆಕ್ಚರ್ ಆಗಿ ಗೆಸ್ಟ್ ರೋಲ್‌ನಲ್ಲಿ ನಟಿಸಿದ್ದ ರಮ್ಯಾ, ಇದೀಗ ಉತ್ತರಕಾಂಡದಲ್ಲಿ ಯಾವ ರೋಲ್ ಮಾಡಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ. 

ಪದ್ಮಾವತಿ ಖ್ಯಾತಿಯ ರಮ್ಯಾ ಬಣ್ಣದ ಜಗತ್ತಲ್ಲಿ ಮತ್ತೆ ತಮ್ಮ ಹೊಸ ಇನ್ನಿಂಗ್ಸ್ ಶುರು ಮಾಡಿದ್ದಾರೆ. ಫುಲ್ ಫ್ಲೆಡ್ಜ್ ಹೀರೋಯಿನ್ ಆಗಿ ಸ್ಕ್ರೀನ್ ಮೇಲೆ ಬರಬೇಕು ಅಂತ ಪ್ಲಾನ್ ಮಾಡಿರೋ ರಮ್ಯಾ ಅದಕ್ಕಾಗಿ ಉತ್ತರಕಾಂಡದ ರಕ್ತಸಿಕ್ತ ಕತೆಗೆ ನಾಯಕಿಯಾಗಿದ್ದಾರೆ. ಇದೀಗ ಹ್ಯಾಟ್ರಿಕ್ ಹೀರೋ ಡಾಕ್ಟರ್ ಶಿವರಾಜ್ ಕುಮಾರ್ ಜೊತೆ ರಮ್ಯಾ ನಟಿಸೋ ಬ್ಯಾಂಗ್ ಬ್ಯಾಂಗ್ ಸುದ್ದಿಯೊಂದು ಕನ್ಫರ್ಮ್ ಆಗಿದೆ. ಸೆಂಚುರಿ ಸ್ಟಾರ್ ಶಿವರಾಜ್ ಕುಮಾರ್ ಹಾಗು ರಮ್ಯಾ ಕಾಂಬಿನೇಷನ್‌ಲ್ಲಿ ಇದಕ್ಕೂ ಮೊದಲು 'ಆರ್ಯನ್' ಸಿನಿಮಾ ಬಂದಿತ್ತು. ಈ ಮೂವಿ ಹೇಳಿಕೊಳ್ಳುವಷ್ಟು ಹಿಟ್ ಆಗದೇ ಇದ್ರೂ ಶಿವಣ್ಣನ ಸಿನಿಮಾದಲ್ಲಿ ರಮ್ಯಾ ಫಸ್ಟ್ ಟೈಂ ನಾಯಕಿಯಾಗಿದ್ದು ಅವರ ಫ್ಯಾನ್ಸ್‌ಗೆ ಸಖತ್ ಖುಷಿ ಕೊಟ್ಟಿತ್ತು. 

ಈಗ ಮತ್ತೊಮ್ಮೆ ರಮ್ಯಾ ಶಿವಣ್ಣ ಜೊತೆಯಾಗುತ್ತಿದ್ದಾರೆ. ಕ್ವೀನ್ ರಮ್ಯಾ ಶಿವರಾಜ್ ಕುಮಾರ್ ಒಟ್ಟಿಗೆ ನಟಿಸೋ ಸಿನಿಮಾ ಯಾವುದು ಎಂದರೆ, ಅದಕ್ಕುತ್ತರ 'ಉತ್ತರಕಾಂಡ' ಸಿನಿಮಾ. ಕ್ವೀನ್ ರಮ್ಯಾ ಹೀರೋಯಿನ್ ಆಗಿ ಮಿಂಚಲಿರೋ ಸಿನಿಮಾ ಉತ್ತರಕಾಂಡ. ಈ ಸಿನಿಮಾದಲ್ಲಿ ಡಾಲಿ ಧನಂಜಯ್ ಹೀರೋ. ಈಗ ಈ ಉತ್ತರಕಾಂಡದಲ್ಲಿ ಶಿವಣ್ಣ ನಟಿಸೋದು ಪಕ್ಕಾ ಆಗಿದೆ. ಆದ್ರೆ ಶಿವಣ್ಣನ ರೋಲ್ ಹೇಗಿರುತ್ತೆ ಅನ್ನ ಗುಟ್ಟು ಮಾತ್ರ ರಿವೀಲ್ ಆಗಿಲ್ಲ.

ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ! 

ನಟಿ ರಮ್ಯಾ ತಮ್ಮದೇ ನಿರ್ಮಾಣದ ಮೊದಲ ಸಿನಿಮಾ 'ಸ್ವಾತಿ ಮುತ್ತಿನ ಮಳೆ ಹನಿಯೇ' ಸಿನಿಮಾದ ಟ್ರೈಲರ್ ರಿಲೀಸ್ ಕಾರ್ಯಕ್ರಮಕ್ಕೂ ಬಂದಿಲ್ಲ. ಯಾಕಂದ್ರೆ ರಮ್ಯಾ ಕಮ್ ಬ್ಯಾಕ್ ಆಗ್ತಿರೋ ಉತ್ತರ ಕಾಂಡ ಸಿನಿಮಾದಿಂದಲೇ ಎಲ್ಲರ ಮುಂದೆ ಪ್ರತ್ಯಕ್ಷ ಆಗಬೇಕು ಅಂತ ಡಿಸೈಟ್ ಮಾಡಿದ್ದಾರೆ ಎನ್ನಲಾಗಿದೆ.  ಹೀಗಾಗಿ ತಮ್ಮ ಸ್ವಂತ ನಿರ್ಮಾಣದ ಸಿನಿಮಾ ತಂಡದಿಂದಲೇ ರಮ್ಯಾ ದೂರ ಉಳಿದುಕೊಂಡಿದ್ದಾರೆ ಎನ್ನಲಾಗುತ್ತಿದೆ.

ಬರ್ತಾ ಬರ್ತಾ ಸಂಗೀತಾ ದೊಡ್ಡ 'ಚಮಚಾ ಗ್ಯಾಂಗ್' ಜತೆ ಸೇರಿ ಫೇಕ್ ಆಗ್ತಿದಾಳೆ ಅಂತಿದಾರೆ ನೆಟ್ಟಿಗರು! 

ಈ ಉತ್ತರಕಾಂಡ ಚಿತ್ರವನ್ನು ರೋಹಿತ್ ಪದಕಿ ನಿರ್ದೇಶನ ಮಾಡಲಿದ್ದಾರೆ. ಚಿತ್ರಕ್ಕೆ ಕೆಆರ್‌ಜಿ' ಸಂಸ್ಥೆ ಬಂಡವಾಳ ಹೂಡುತ್ತಿದ್ದು, ಸಧ್ಯದಲ್ಲೇ ಈ ಸಿನಿಮಾ ಶೂಟಿಂಗ್ ಸೆಟ್‌ಗೆ ನಟ ಶಿವಣ್ಣ ಎಂಟ್ರಿ ಕೊಡುತ್ತಾರೆ. ಅಲ್ಲಿಗೆ ಮತ್ತೊಮ್ಮೆ ಶಿವಣ್ಣ ರಮ್ಯಾ ಕಾಂಬಿನೇಷನ್ಅನ್ನ ಸ್ಕ್ರೀನ್ ಮೇಲೆ ನೋಡೋ ಚಾನ್ಸ್ ಅವರವರ ಫ್ಯಾನ್ಸ್‌ಗೆ ಸಿಗಲಿದೆ. 

Latest Videos
Follow Us:
Download App:
  • android
  • ios