Asianet Suvarna News Asianet Suvarna News

ಕ್ರಿಕೆಟ್ ಕ್ಯಾಪ್ಟನ್ ಆಗಿದ್ದವ ಸಿನಿಮಾಕ್ಕೆ ಬಂದು ಹೀರೋ ಚಾನ್ಸ್‌ಗೆ ಕಾಯುತ್ತಲೇ ಕಾಲ ಕಳೆಯುತ್ತಿರುವ ನಟ!

ಈಗ ಯಾವುದೇ ಸಿನಿರಂಗದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವೇ ಆಗಿದೆ ಎನ್ನಬಹುದು. ಅದರಲ್ಲೂ ಲೀಡ್ ರೋಲ್ ಪಡೆಯುವುದು ತೀರಾ ಕಷ್ಟ ಎನ್ನಬಹುದು. ಅದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್‌ನಲ್ಲಿ ಈಗ ಮಿಂಚುತ್ತಿರುವ ನಾಯಕನಟನ ತಮ್ಮನೊಬ್ಬನ ರಿಯಲ್ ಸ್ಟೋರಿ ಗಮನಸೆಳೆಯುತ್ತಿದೆ. 

Captain of cricket team Aparshakti Khurrana yet to bag a lead role in Bollywood srb
Author
First Published Nov 20, 2023, 2:36 PM IST

ಬಾಲಿವುಡ್ ಚಿತ್ರರಂಗವೆಂದರೆ ಅದೊಂದು ಸಮುದ್ರದಂತೆ, ಅಲ್ಲಿ ನಟನೆಗೆ ಚಾನ್ಸ್ ಪಡೆಯುವುದು ಕಷ್ಟ ಎಂಬ ಮಾತಿದ್ದ ಕಾಲವಿತ್ತು. ಆದರೆ, ಈಗ ಹಲವು ಚಿತ್ರರಂಗಗಳು ಬಾಲಿವುಡ್‌ ಮೀರಿಯೂ ಬೆಳೆದಿವೆ ಎನ್ನಬಹುದು. ಅದರಲ್ಲೂ ಸದ್ಯ ಕನ್ನಡ, ತೆಲುಗು ಹಾಗು ತಮಿಳು ಚಿತ್ರರಂಗಗಳೂ ಕೂಡ ಬಹಳಷ್ಟು ಬೆಳೆದಿವೆ. ಈಗ ಯಾವುದೇ ಸಿನಿರಂಗದಲ್ಲಿ ಅವಕಾಶ ಪಡೆಯುವುದು ತುಂಬಾ ಕಷ್ಟವೇ ಆಗಿದೆ ಎನ್ನಬಹುದು. ಅದರಲ್ಲೂ ಲೀಡ್ ರೋಲ್ ಪಡೆಯುವುದು ತೀರಾ ಕಷ್ಟ ಎನ್ನಬಹುದು. ಅದಕ್ಕೆ ಉದಾಹರಣೆ ಎಂಬಂತೆ ಬಾಲಿವುಡ್‌ನಲ್ಲಿ ಈಗ ಮಿಂಚುತ್ತಿರುವ ನಾಯಕನಟನ ತಮ್ಮನೊಬ್ಬನ ರಿಯಲ್ ಸ್ಟೋರಿ ಗಮನಸೆಳೆಯುತ್ತಿದೆ. 

ನಟಿ ಶ್ರೀದೇವಿ ಸಡನ್ನಾಗಿ ನಟನೆ ನಿಲ್ಲಿಸಿದ್ದು ಯಾಕೆ, ಕೆರಿಯರ್‌ಗೆ ಮೇನ್ ವಿಲನ್‌ ಆಗಿದ್ದು ಇವರೇ ನೋಡಿ!

ಹೌದು, ಈ ನಟ, ನಿಜವಾಗಿ ಹೇಳಬೇಕೆಂದರೆ ನಟನ ತಮ್ಮ, 19 ವರ್ಷದೊಳಗಿನ ಹರಿಯಾಣದ ಕ್ರಿಕೆಟ್ ಟೀಮ್‌ನಲ್ಲಿ ಕ್ಯಾಪ್ಟನ್‌ ಆಗಿದ್ದವರು. ಆದರೆ, ಅಣ್ಣ ಬಾಲಿವುಡ್‌ ಸಿನಿಮಾ ನಟನಾಗಿ ಎಂಟ್ರಿ ಕೊಟ್ಟು ಸಕ್ಸಸ್ ಪಡೆಯುತ್ತಿದ್ದಂತೆ, ಈ ತಮ್ಮನಿಗೆ ಕ್ರಿಕೆಟ್ ಬಗೆಗಿನ ಆಸಕ್ತಿ ಹೊರಟೇಹೋಯ್ತು. ಆತ ತಾನು ಕೂಡ ಅಣ್ಣನಂತೆ ಸಿನಿಮಾ ನಟನಾಗಿ ಮಿಂಚಬೇಕೆಂದು ನಿರ್ಧಾರ ಮಾಡಿದ. ನಟನಾಗಲು ಬೇಕಾದ ಸಿದ್ಧತೆ ಶುರುಮಾಡಿಕೊಂಡು '2016'ರಲ್ಲಿ ನಟನೂ ಆದ. ಆದರೆ, ಆತನ ಗುರಿ ನಟನಾಗುವುದಲ್ಲ, ಅಣ್ಣನಂತೆ ನಾಯಕನಟ ಆಗುವುದು. ಆದರೆ, ಅದಿನ್ನೂ ಸಾಧ್ಯವಾಗಿಲ್ಲ. 

ಸಕ್ಸಸ್ ಗುಟ್ಟು ರಟ್ಟು ಮಾಡಿದ ನಟಿ ಪ್ರಿಯಾಂಕಾ ಚೋಪ್ರಾ; ಬಾಲಿವುಡ್ ಬಿಟ್ಟ ಕಾರಣ ಬಹಿರಂಗ!

ಅಮಿರ್ ಖಾನ್ ನಟನೆಯ 'ದಂಗಲ್' ಚಿತ್ರದಲ್ಲಿ ಈ ನಟ ಚಿಕ್ಕದೊಂದು ಪಾತ್ರವನ್ನು ತುಂಬಾ ಚೊಕ್ಕವಾಗಿ ನಿರ್ವಹಿಸಿದ್ದ. ಅಮೀರ್ ಖಾನ್ ಸೋದರಳಿಯ ಪಾತ್ರದಲ್ಲಿ ನಟಿಸಿದ್ದ ಈ ನಟ, ತನ್ನ ಅಮೋಘ ನಟನೆಗೆ ಹಲವರಿಂದ ಮೆಚ್ಚುಗೆ ಕೂಡ ಪಡೆದಿದ್ದ. ಆದರೆ, ಆ ಸಿನಿಮಾ ಬಳಿಕ ನಾಯಕನಾಗಲು ವಿಫಲನಾದ. ಬಳಿಕ ಆತ 'ಬದ್ರಿನಾಥ್‌ ಕೀ ದುಲ್ಹನಿಯಾ' ಚಿತ್ರದಲ್ಲಿ ಮತ್ತೊಂದು ಪಾತ್ರ ಮಾಡಿದ, ಆದರೆ ನಾಯಕನಾಗಲು ಮಾತ್ರ ಸಾಧ್ಯವಾಗಲಿಲ್ಲ. ಅದಾದ ಬಳಿಕ 'ಹಾರರ್-ಕಾಮಿಡಿ' ಚಿತ್ರ 'ಸ್ರೀ'ದಲ್ಲಿ ಗಮನಸೆಳೆಯುವ ಪಾತ್ರವೊಂದರಲ್ಲಿ ನಟಿಸಿದ್ದಾನೆ.

Captain of cricket team Aparshakti Khurrana yet to bag a lead role in Bollywood srb

ಅಣ್ಣ ಆಯುಷ್ಮಾನ್ ಖುರಾನಾರ ತಮ್ಮ ಅಪರಶಕ್ತಿ ಖುರಾನಾ ಕಥೆಯಿದು. ಆಯುಷ್ಮಾನ್ ಖುರಾನಾ ಅವರು ಸದ್ಯ ಬಾಲಿವುಡ್‌ನಲ್ಲಿ ಓಡುತ್ತಿರುವ ಕುದುರೆ. ಅವರು ಈಗಾಗಲೇ ತಾವೊಬ್ಬರು ಸಮರ್ಥ ನಟ ಎಂದು ಪ್ರೂವ್ ಮಾಡಿಕೊಂಡಿದ್ದಾರೆ, ಕೈ ಖಾಲಿಯಾಗದಂತೆ ಹಲವು ಅವಕಾಶಗಳನ್ನು ಪಡೆಯುತ್ತಿದ್ದಾರೆ. ಆದರೆ, ಅವರ ಸಹೋದರನಾಗಿ ಬಂದ ಅಪರಶಕ್ತಿ ಖುರಾನಾಗೆ ಮಾತ್ರ ಇನ್ನೂ 'ಹೀರೋ' ಆಗಿ ಚಾನ್ಸ್ ಗಿಟ್ಟಿಸಲು ಸಾಧ್ಯವಾಗಿಲ್ಲ. ಆದರೆ, 'ಮತ್ತೆ ಮತ್ತೆ ಪ್ರಯತ್ನಿಸು' ಎಂಬ ಮಾತಿನಂತೆ 'ಅಪರಶಕ್ತಿ' ತಮ್ಮ ಪ್ರಯತ್ನ ಕಂಟಿನ್ಯೂ ಮಾಡಿದ್ದಾರೆ. ಮುಂದೇನು ಎಂಬುದನ್ನು ಕಾದು ನೋಡಬೇಕು. 

ನಾನು ಮನೆಗೆ ಬಂದಾಗ ವಿಕ್ಕಿ ಹೊರ ಹೋಗ್ತಾನೆ, ಒಟ್ಟಿಗೆ ರಾತ್ರಿ ಕಳೆಯೋಲ್ಲ: ಕತ್ರೀನಾ ಹಿಂಗಾದ್ರೆ ಮಗು ಆಗೋದ್ಹೇಗೆ ಕೇಳಿದ ಫ್ಯಾನ್ಸ್

Follow Us:
Download App:
  • android
  • ios