* ಪ್ರೀತಿಯ ಪಾರಿವಾಳ ಹಾರಿಹೋಯ್ತು ಗೆಳೆಯ!* ನಟಿ ಅದಿತಿ ಪ್ರಭುದೇವ ಎಂಗೆಂಜ್ ಮೆಂಟ್* ಸೋಶಿಯಲ್ ಮೀಡಿಯಾದಲ್ಲಿ ಪೋಟೋ ಶೇರ್* ನಿಮ್ಮ ಮನಗೆದ್ದ ಹುಡುಗ ಯಾರು ಎಂದು ಪ್ರಶ್ನೆ
ಬೆಂಗಳೂರು(ಡಿ. 27) ಶಾನೆ ಟಾಪಾಗವಳೆ ಎಂದು ಕನ್ನಡಿಗರನ (Sandalwood) ನ ಗೆದ್ದಿದ್ದ ದಾವಣಗೆರೆಯ ಸುಂದರಿ ಅದಿತಿ ಪ್ರಭುದೇವ (Aditi Prabhudeva ) ಎಂಗೇಜ್ ಆಗಿದ್ದಾರೆ!.. ಸೋಶಿಯಲ್ ಮೀಡಿಯಾದಲ್ಲೆ (Social Media) ಅದೇ ಸುದ್ದಿ... ಕನ್ನಡದ ನಟಿ ಹಸೆಮಣೆ ಏರುವುದು ಫಿಕ್ಸ್ ಆಯ್ತಾ? ಹುಡುಗ ಯಾರು? ಯಾವಾಗ ಮದುವೆ? ಅಭಿಮಾನಿಗಳಿಂದ ನೂರಾರು ಪ್ರಶ್ನೆ.
Old Monk Movie: ಫೆಬ್ರವರಿಗೆ ಶ್ರೀನಿ-ಅದಿತಿ ಪ್ರಭುದೇವ ಜೋಡಿಯ ಸಿನಿಮಾ ರಿಲೀಸ್
ಹುಡುಗನೊಬ್ಬನ ಜೊತೆಗೆ ಇರುವ ಒಂದು ಫೋಟೋವನ್ನು ಅದಿತಿ ಶೇರ್ ಮಾಡಿಕೊಂಡಿದ್ದು ಎಂಗೇಜ್ ಮೆಂಟ್ ಆಗಿದೆ ಎನ್ನುವಂತೆ ತೋರುತ್ತಿದೆ. ಕನಸೊಂದು ಕನಸಿನಂತೆ ನನಸಾಯಿತು ಎಂಬ ಕ್ಯಾಪ್ಷನ್ ಕೊಟ್ಟಿದ್ದು ಅಭಿಮಾನಿಗಳು ಅಭಿನಂದನೆ ಸಲ್ಲಿಸಿದ್ದಾರೆ.
"
ಹುಡುಗ ಯಾರು? ಚಿಕ್ಕಮಗಳೂರು ಮೂಲದ ರೈತರೊಬ್ಬರ ಜತೆ ಎಂಗೆಜ್ ಮೆಂಟ್ ಮಾಡಿಕೊಂಡಿದ್ದಾರೆ. ಡಿ.26ರ ಭಾನುವಾರ ಎಂಗೇಜ್‌ಮೆಂಟ್ ಆಗಿದ್ದು ಆಪ್ತರಿಗಷ್ಟೆ ಅವಕಾಶ ಇತ್ತು. ಈ ಸುದ್ದಿ ಎಲ್ಲಿಯೂ ಹೊರಗೆ ಬಾರದಂತೆ ನೋಡಿಕೊಂಡಿದ್ದರು. ಅದಿತಿ ಮದುವೆಯಾಗುತ್ತಿರುವ ಹುಡುಗನ ಹೆಸರು ಯಶಸ್. ಯಶಸ್ ಮತ್ತು ಅದಿತಿ ಹಲವು ವರ್ಷಗಳಿಂದ ಪ್ತೀತಿಯಲ್ಲಿದ್ದರು. ಚಿಕ್ಕಮಗಳೂರಿನ ಕಾಫಿ ತೋಟದ ಮಾಲೀಕರಾಗಿರುವ ಯಶಸ್ ಅವರನ್ನು ನಟಿ ಮದುವೆಯಾಗುತ್ತಿದ್ದಾರೆ.
ಸಿನಿಮಾ ಪ್ರಚಾರವೊಂದರ ವೇಳೆ ಮಾತನಾಡಿದ್ದ ನಟಿ, ಹುಡುಗರ ತರಹ ನಮಗೆ ಬ್ರೇಕ್ ಅಪ್ ಸಾಂಗ್ ಬೇಕಿಲ್ಲ ಎಂದು ಹೇಳುತ್ತ ನಾನೇನಿದ್ದರೂ ಡೈರೆಕ್ಟ್ ಆಗಿಯೇ ಮದುವೆ ಆಗುತ್ತೇನೆ ಎಂದಿದ್ದರು. ಪ್ರೀತಿ ಮೇಲೆ ನಂಬಿಕೆ ಇದೆ ಎಂದಿದ್ದರು. ಇತ್ತಿಚೆಗೆ ಅದಿತಿ ಅಭಿನಯದ ಆನ ಸಿನಿಮಾ ರಿಲೀಸ್ ಆಗಿತ್ತು. ನಟಿ ಸಿನಿಮಾಕ್ಕೆ ಥಿಯೇಟರ್ ಸಮಸ್ಯೆ ಎದುರಿಸಬೇಕಾಗಿ ಬಂದಿತ್ತು.
ನಟಿ ಅದಿತಿ ಸದಾ ಕನ್ನಡ ಚಿತ್ರಗಳನ್ನು ಬೆಂಬಲಿಸಿಕೊಂಡು ಬಂದವರು, ಬೆಳಗಾವಿಯಲ್ಲಿ ಎಂಇಎಸ್ ಪುಂಟಾಟಕ್ಕೂ ವಿರೋಧ ವ್ಯಕ್ತಪಡಿಸಿದ್ದರು . ಕನ್ನಡಕ್ಕೆ ಅವಮಾನ ಆಗುತ್ತಿದ್ದರೆ ಸಹಿಸಲು ಸಾಧ್ಯವಿಲ್ಲ ಎಂದು ಗುಡುಗಿದ್ದರು.
ತುಂಬಾ ಪ್ರೀತಿ ಮಾಡೋರು, ಜವಾಬ್ದಾರಿ ಇದೋರು ಬೇಕು; ಪತಿಗಾಗಿ ಗಣೇಶನನ್ನ ಬೇಡಿಕೊಂಡ ಅದಿತಿ!
ಬಾಲಿವುಡ್ ಸಂಭ್ರಮ: ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. ಮುಂದಿನ ವರ್ಷದಲ್ಲಿ ಮಲೈಕಾ ಅರೋರಾ ಮತ್ತು ಅರ್ಜುನ್ ಕಪೂರ್ ಹಾಗೂ ಆಲಿಯಾ ಭಟ್ ಮತ್ತು ರಣಬೀರ್ ಕಪೂರ್ ಮದುವೆ ಮಾತುಕತೆಯೂ ಜೋರಾಗಿ ನಡೆಯುತ್ತಿದೆ. ಈ ಎಲ್ಲದರ ನಡುವೆ ಸ್ಯಾಂಡಲ್ ವುಡ್ ನಟಿ ದಿಢೀರ್ ಎಂದು ಇಂಥ ಸುದ್ದಿ ಕೊಟ್ಟಿದ್ದಾರೆ.
