ಬಾಲಿವುಡ್ ನಟಿ ರಿಯಾ ಚಕ್ರವರ್ತಿ ವಿರುದ್ಧ ಡ್ರಗ್ಸ್ ನಿಯಂತ್ರಣ ದಳ(NCB) ಕೇಸು ದಾಖಲಿಸಿದ ಬೆನ್ನಲ್ಲೇ ಇದೀಗ ಸ್ಯಾಂಡಲ್‌ವುಡ್ ಸೆಲೆಬ್ರಿಟಿ ಹಾಗೂ ಗಾಯಕರ ಮೇಲೆಯೂ ನಿಗಾ ಇರಿಸಿದೆ. ರಾಜ್ಯದಲ್ಲಿ ಇತ್ತೀಚೆಗಷ್ಟೇ ಡ್ರಗ್ಸ್ ಟ್ರಾಫಿಕಿಂಗ್ ರಾಕೆಟನ್ನು ಬೇಧಿಸಿದ ಬೆನ್ನಲ್ಲೇ ಎನ್‌ಸಿಬಿ ಅಧಿಕಾರಿಗಳು ಕರ್ನಾಟಕದ ಪ್ರಮುಖ ಸಿನಿಮಾ ಸೆಲೆಬ್ರಿಟಿಗಳ ಹಾಗೂ ಗಾಯಕರ ಮೇಲೆ ನಿಗಾ ವಹಿಸಿದೆ.

"

ಡ್ರಗ್ಸ್ ಡೀಲಿಂಗ್: ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ವಿರುದ್ಧ ಕೇಸ್

ಆಗಸ್ಟ್ 21ರಂದು ಎನ್‌ಸಿಬಿ ತಂಡ ಬೆಂಗಳೂರಿನ ಕಲ್ಯಾಣ ನಗರದ ರಾಯಲ್ ಸೂಟ್ಸ್ ಹೋಟೆಲ್ ಅಪಾರ್ಟ್‌ಮೆಂಟ್‌ನಿಂದ 145 ಡ್ರಗ್ಸ್ ಪಿಲ್ಸ್ ಹಾಗೂ 2.20 ಲಕ್ಷ ನಗದು ಸೀಜ್ ಮಾಡಿದ್ದರು.

ನಂತರ ಬೆಂಗಳೂರಿನ ನಿಕೂ ಹೋಮ್ಸ್‌ನಿಂದ 96 ಡ್ರಗ್ಸ್ ಪಿಲ್ಸ್ ಹಾಗೂ 180 ಎಲ್‌ಎಸ್‌ಡಿ ಬ್ಲಾಟ್ ವಶಪಡಿಸಿತ್ತು ಎಂದು ಎನ್‌ಸಿಬಿ ಉಪನಿರ್ದೇಶಕ ಕೆಪಿಎಸ್ ಮಲ್ಹೋತ್ರಾ ತಿಳಿಸಿದ್ದಾರೆ.

ನಶೆ ಏರಿಸುವ ಆಯಿಲ್ ಬೆಂಗಳೂರಲ್ಲಿ, ಸಿಕ್ಕಿದ್ದು ಬರೋಬ್ಬರಿ 40 ಲಕ್ಷದ ಮಾಲು!

ನಂತರದಲ್ಲಿ ಬೆಂಗಳೂರಿನ ದೊಡ್ಡಗುಬ್ಬಿಯಲ್ಲಿ ಲೇಡಿ ಡ್ರಗ್ಸ್ ಸಪ್ಲೈಯರನ್ನು ತಡೆಯಲಾಗಿದೆ. ಆಕೆಯ ಮನೆಯಿಂದ 270 ಡ್ರಗ್ಸ್ ಪಿಲ್ಸ್‌ಗಳನ್ನು ಸೀಜ್ ಮಾಡಲಾಗಿದೆ ಎಂದು ಅವರು ಹೇಳಿದ್ದಾರೆ. ಈ ರೈಡ್ ಸಂದರ್ಭ ಎಂ ಅನೂಪ್, ಆರ್ ರವೀಂದ್ರನ್, ಅನಿಖಾ ಡಿಯನ್ನು ಬಂಧಿಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

ಈಗ ಸಿಕ್ಕಿರುವ ಆರೋಪಿಗಳು ಸಮಾಜದ ಪ್ರಮುಖ ಶ್ರೀಮಂತ ವರ್ಗಕ್ಕೆ ಡ್ರಗ್ಸ್ ಸಪ್ಲೈ ಮಾಡುತ್ತಿರುವುದು ತಿಳಿದು ಬಂದಿದೆ. ಪ್ರಮುಖ ಗಾಯಕರೂ, ನಟರೂ, ಕಾಲೇಜು ವಿದ್ಯಾರ್ಥಿಗಳಿಗೂ ಡ್ರಗ್ಸ್ ಸಪ್ಲೈ ಮಾಡಲಾಗುತ್ತಿತ್ತು ಎಂಬುದು ಪ್ರಾಥಮಿಕ ತನಿಖೆಯಲ್ಲಿ ತಿಳಿದು ಬಂದಿದೆ ಎಂದು ಮಲ್ಹೋತ್ರಾ ತಿಳಿಸಿದ್ದಾರೆ.