ಸುಶಾಂತ್ ಸಿಂಗ್ ರಜಪೂತ್ ಸಾವಿನ ಪ್ರಕರಣದಲ್ಲಿ ಮಾದಕ ವಸ್ತು ನಿಯಂತ್ರಣ ದಳ(NCB) ರಿಯಾ ಚಕ್ರವರ್ತಿ ವಿರುದ್ಧ ಕೇಸು ದಾಖಲಿಸಿದೆ. ಡ್ರಗ್ಸ್ ಡೀಲಿಂಗ್ ಮತ್ತು ಡ್ರಗ್ಸ್ ಬಳಸಿದ ಸಂಬಂಧ ಬುಧವಾರ ಸಂಜೆ ಸುಶಾಂತ್ ಗರ್ಲ್‌ಫ್ರೆಂಡ್ ರಿಯಾ ಹಾಗೂ ಇತರ ಸ್ನೇಹಿತರ ವಿರುದ್ಧ ಎನ್‌ಸಿಬಿ ಕೇಸು ದಾಖಲಿಸಿದೆ.

ಎನ್‌ಸಿಬಿ ಡಿಜಿ ರಾಕೇಶ್ ಅಸ್ತಾನಾ ಈ ಬಗ್ಗೆ ಪ್ರತಿಕ್ರಿಯಿಸಿ, ಈ ಬಗ್ಗೆ ತನಿಖೆ ಆರಂಭಿಸಲಾಗಿದ್ದು, ಇದಕ್ಕಾಗಿ 5 ಜನ ಸದಸ್ಯರ ವಿಶೇಷ ತನಿಖಾ ತಂಡವನ್ನು ರಚಿಸಲಾಗಿದೆ ಎಂದಿದ್ದಾರೆ.

ಸುಶಾಂತ್ ಮನೆ ಬಿಡುವ ಮುನ್ನ 8 ಹಾರ್ಡ್‌ ಡ್ರೈವ್ ನಾಶ ಮಾಡಿದ್ದ ರಿಯಾ

ವಾಟ್ಸಾಪ್ ಚಾಟ್ ಸ್ಕ್ರೀನ್ ಶಾಟ್, ಎನ್‌ಸಿಬಿಗೆ ಜಾರಿ ನಿರ್ದೇಶನಾಲಯ ಕಳುಹಿಸಿದ ವಿನಂತಿ ಪತ್ರವನ್ನು ಆಧರಿಸಿ ಕೇಸು ದಾಖಲಿಸಲಾಗಿದೆ. ಜಾರಿ ನಿರ್ದೇಶನಾಲಯದ ನಿರ್ದೇಶಕ ಸಂಜಯ್ ಮಿಶ್ರಾ ಅವರು ಅಸ್ತಾನಾ ಅವರಿಗೆ ಪತ್ರ ಬರೆದಿದ್ದು, ಪ್ರಕರಣದಲ್ಲಿ ಡ್ರಗ್ಸ್ ಸಂಬಂಧ ವಿಚಾರವನ್ನು ತನಿಖೆ ಮಾಡಬೇಕಾಗಿ ಕೇಳಿಕೊಂಡಿದ್ದಾರೆ. ಅಕ್ರಮ ಹಣ ವರ್ಗಾವಣೆ ಸಂಬಂಧ ಜಾರಿ ನಿರ್ದೇಶನಾಲಯ ತನಿಖೆ ನಡೆಸುತ್ತಿದೆ.

ರಿಯಾ ಚಕ್ರವರ್ತಿ ಲಾಯ್ ಸತೀಶ್ ಮಾನ್‌ಶಿಂಧೆ ಪ್ರತಿಕ್ರಿಯಿಸಿ, ಸಿಬಿಐ ಹಾಗೂ ಇಡಿ ಈಗಾಗಲೇ ತನಿಖೆ ನಡೆಸುತ್ತಿದ್ದು, ಎನ್‌ಸಿಬಿಯೂ ತನಿಖೆಗೆ ಮುಂದಾಗಿರುವುದು ಆಶ್ಚರ್ಯವಾಗುತ್ತಿದೆ. ಯಾವುದೇ ಹೊತ್ತಲ್ಲಿ ರಕ್ತ ಪರೀಕ್ಷೆ ನಡೆಸಲು ರಿಯಾ ಸಿದ್ಧ ಎಂದಿದ್ದಾರೆ.