ನಶೆ ಏರಿಸುವ ಆಯಿಲ್ ಬೆಂಗಳೂರಲ್ಲಿ, ಸಿಕ್ಕಿದ್ದು ಬರೋಬ್ಬರಿ  40 ಲಕ್ಷದ ಮಾಲು!

ರಾಜಧಾನಿಯ‌ ಕಾಳಸಂತೆಯಲ್ಲಿ ಕಾಲಿಟ್ಟಿದೆ ಮಾದಕ ಜಾಲ/ ಇದರ ಬೆಲೆ ಕೇಳಿದರೆ ಎಂತಹವರಿಗೂ ಆಚ್ಚರಿ!/ ಡ್ರಗ್ಸ್, ಅಫೀಮು, ಗಾಂಜಾ,‌ ಕೊಕೈನ್ ಗಿಂತ ಹೆಚ್ಚು ನಶೆಯಲೇರಿಸುವ ದ್ರವ್ಯ/ ಹೊರರಾಜ್ಯದಲ್ಲಿ ತಯಾರಿ ಸಿಲಿಕಾನ್ ಸಿಟಿಯಲ್ಲಿ ಮಾರಾಟ ದಂಧೆ/ ಸದ್ದಿಲ್ಲದೆ ಬಸ್ ನಲ್ಲಿ ಸರಬರಾಜು ಐಟಿಬಿಟಿ ಉದ್ಯೋಗಿಗಳೇ ಇವರ ಟಾರ್ಗೆಟ್

Bengaluru Police Arrested two with Hashish oil worth RS 40 Lakh

ಬೆಂಗಳೂರು(ಆ. 23)  ರಾಜಧಾನಿಯ‌ ಕಾಳಸಂತೆಯಲ್ಲಿ ಕಾಲಿಟ್ಟಿದೆ ಮಾದಕ ಜಾಲ... ಹೌದು ಈ ಸುದ್ದಿ ನೋಡಿದರೆ ನಿಮಗೆ ಎಲ್ಲವೂ ಅರ್ಥವಾಗುತ್ತದೆ.  ನಶೆಏರಿಸುವ ಆಯಿಲ್ ಮುಕ್ತ ಮಾರಾಟವಾಗುತ್ತಿದೆ! ಬೆಲೆ ಕೇಳಿದರೆ ಅಬ್ಬಬ್ಬಾ!

ಡ್ರಗ್ಸ್, ಅಫೀಮು, ಗಾಂಜಾ,‌ ಕೊಕೈನ್ ಗಿಂತ ಹೆಚ್ಚು ನಶೆಯಲೇರಿಸುವ ದ್ರವ್ಯ ಇದು. ಹೊರರಾಜ್ಯದಲ್ಲಿ ತಯಾರಾಗಿ ಸಿಲಿಕಾನ್ ಸಿಟಿಯಲ್ಲಿ ಮಾರಾಟವಾಗುತ್ತಿದೆ. ಸದ್ದಿಲ್ಲದೆ ಬಸ್ ನಲ್ಲಿ ಸರಬರಾಜು  ಆಗುವ ಮಾದಕ ವಸ್ತುವಿಗೆ ಐಟಿಬಿಟಿ ಉದ್ಯೋಗಿಗಳೇ ಟಾರ್ಗೆಟ್.

ಆಯುರ್ವೇದ ಔಷಧ ಹೆಸರಿನಲ್ಲಿ ಸಾವಿರ ಕೋಟಿ ಹೆರಾಯಿನ್

ಮಾದಕ  ಆಶ್ಯಿಸ್  ಆಯಿಲ್ ಜಾಲವನ್ನು ಪೊಲೀಸರು ಪತ್ತೆ ಮಾಡಿದ್ದಾರೆ. ಒಂದು ಗ್ರಾಂನ ಆ್ಯಶಿಸ್ ಬೆಲೆ ಬರೋಬ್ಬರಿ 3ರಿಂದ 5 ಸಾವಿರ ರೂ. ಇದೆ. ವಿಶಾಖಪಟ್ಟಣದಲ್ಲಿ ತಯಾರಾಗುವ ಈ ಮಾದಕದ್ರವ್ಯಕ್ಕೆ ರಾಜಧಾನಿಯಲ್ಲಿ ಬಹುಬೇಡಿಕೆಯಿದೆ. ಸುದ್ದುಗುಂಟೆಪಾಳ್ಯ ಪೊಲೀಸರ ಕಾರ್ಯಾಚಣೆಯಲ್ಲಿ ಜಾಲ ಬಯಲಾಗಿದೆ.

ಸುದ್ದುಗುಂಟೆ ಪೊಲೀಸರು ಸುರಕತ್ತಿ ಪ್ರಭಾಕರ್, ಕೊರಳ ಕಾಮರಾಜ್  ಎಂಬುವರನ್ನು ಬಂಧಿಸಿ 950 ಗ್ರಾಂ‌ ಆಯಿಲ್, 3 ಕೆ.ಜಿ. ಗಾಂಜಾ ಜಪ್ತಿ ಮಾಡಿದ್ದಾರೆ.

 

Latest Videos
Follow Us:
Download App:
  • android
  • ios