ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ 70ನೇ ಹುಟ್ಟುಹಬ್ಬ. ವಿಷ್ಣು 70ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಅನ್ನುವುದು ಡಾ.ವಿಷ್ಣು ಸೇನಾ ಸಮಿತಿ ಆಶಯವಾಗಿತ್ತು. ಆದರೆ ಕೊರೋನಾ ಕಾರಣದಿಂದ ಜಾಸ್ತಿ ಜನ ಸೇರುವಂತಿಲ್ಲವಾದ್ದರಿಂದ ವಿಶಿಷ್ಟರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲು ಸಮಿತಿ ಮುಂದಾಗಿದೆ.
ಸೆಪ್ಟೆಂಬರ್ 18ರಂದು ಡಾ.ವಿಷ್ಣುವರ್ಧನ್ 70ನೇ ಹುಟ್ಟುಹಬ್ಬ. ವಿಷ್ಣು 70ನೇ ಹುಟ್ಟುಹಬ್ಬವನ್ನು ಅದ್ದೂರಿಯಾಗಿ ಆಚರಿಸಬೇಕು ಅನ್ನುವುದು ಡಾ.ವಿಷ್ಣು ಸೇನಾ ಸಮಿತಿ ಆಶಯವಾಗಿತ್ತು. ಆದರೆ ಕೊರೋನಾ ಕಾರಣದಿಂದ ಜಾಸ್ತಿ ಜನ ಸೇರುವಂತಿಲ್ಲವಾದ್ದರಿಂದ ವಿಶಿಷ್ಟರೀತಿಯಲ್ಲಿ ಹುಟ್ಟುಹಬ್ಬ ಆಚರಿಸಲು ಸಮಿತಿ ಮುಂದಾಗಿದೆ.
ಆ.17ರಿಂದ ಸೆ.18ರವರೆಗೆ ಅನೇಕ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರ ಮೂಲಕ ಡಾ.ವಿಷ್ಣುವರ್ಧನ್ ಜಯಂತೋತ್ಸವ ಆಚರಿಸುವುದಾಗಿ ಡಾ.ವಿಷ್ಣು ಸೇನಾ ಸಮಿತಿ ಅಧ್ಯಕ್ಷ ವೀರಕಪುತ್ರ ಶ್ರೀನಿವಾಸ ತಿಳಿಸಿದ್ದಾರೆ.
ವಿಷ್ಣು ಸೇವಾ ಸಮಿತಿ ಹಮ್ಮಿಕೊಂಡಿರುವ ಕಾರ್ಯಕ್ರಮಗಳು
1. ಶಿಕ್ಷೆ ಮುಗಿದರೂ ದಂಡ ಪಾವತಿಸದೆ ಜೈಲಿನಲ್ಲಿಯೇ ಉಳಿದಿರುವ 10 ಖೈದಿಗಳನ್ನು ಗುರುತಿಸಿ ಅವನ ದಂಡವನ್ನು ಸಮಿತಿ ಪಾವತಿಸಿ ಡಾ.ವಿಷ್ಣು ಹುಟ್ಟುಹಬ್ಬದಂದು ಆ ಖೈದಿಗಳನ್ನು ಬಿಡುಗಡೆಗೊಳಿಸಿ ಹೊಸ ಜೀವನ ನಡೆಸಲು ಅನುವು ಮಾಡಲಾಗುವುದು.
2. ಆ.17ರಿಂದ ಆ.17ರಿಂದ ಸೆ.18ರವರೆಗೆ ಎಪ್ಪತ್ತು ಸಾವಿರ ಸಸಿ ನೆಡಲಾಗುವುದು. ಅಭಿಮಾನಿ ತಮ್ಮ ಜಾಗದಲ್ಲಿಯೇ ಬಂಧುಬಳಗದ ಜತೆ ಕನಿಷ್ಠ 25 ಗಿಡಗಳನ್ನು ನೆಡುತ್ತಾರೆ. ಈ ಗಿಡಗಳ ಪಾಲನೆ ಪೋಷಣೆ ಮೇಲೆ ಕಣ್ಣಿಡಲು ಸಮಿತಿ ಗಣ್ಗಾವಲು ತಂಡ ರಚಿಸಿದೆ.
ಶುಗರ್‌ಲೆಸ್ ಚಿತ್ರದಲ್ಲಿ ಪೃಥ್ವಿ ಅಂಬಾರ್
3. ಒಂದರಿಂದ ಹತ್ತನೇ ತರಗತಿಯ ಮಕ್ಕಳಿಗಾಗಿ ಡಾ.ವಿಷ್ಣುವರ್ಧನ್ ವೇಷಭೂಷಣ, ಅಭಿನಯ, ಗಾಯನ ಸ್ಪರ್ಧೆ ಆಯೋಜಿಸಲಾಗಿದೆ. ಅದಕ್ಕಾಗಿ ಮಕ್ಕಳು ವಿಷ್ಣುವರ್ಧನ್‌ರಂತೆ ದಿರಿಸು ಧರಿಸಿ ನಟಿಸಿ ಅಥವಾ ಹಾಡು ಹಾಡಿ ಆ ವಿಡಿಯೋವನ್ನು ಸೆ.10ರೊಳಗೆ 99722 19267ಗೆ ಕಳುಹಿಸಬಹುದು. ಮೂರು ಮಕ್ಕಳಿಗೆ ಕ್ರಮವಾಗಿ 20 ಸಾವಿರ, 15 ಸಾವಿರ ಮತ್ತು 10 ಸಾವಿರ ಬಹುಮಾನ ನೀಡಲಾಗುವುದು.
4. ರಾಜ್ಯದಾದ್ಯಂತ ಇರುವ ಡಾ.ವಿಷ್ಣು ಅಭಿಮಾನಿಗಳಿಂದ ಕನಿಷ್ಠ 700 ರಿಂದ ಗರಿಷ್ಠ 7000 ಯುನಿಟ್ ರಕ್ತದಾನ ಮಾಡುವ ಯೋಜನೆ ಜಾರಿಯಲ್ಲಿದೆ.
ಜೋಗಿ ಸಿನಿಮಾಗೆ 15 ವರ್ಷ..! ಸಿನಿಮಾ ಬರೆದ ದಾಖಲೆಗಳಿವು
5. ಈಗಾಗಲೇ ಕೇಂದ್ರ ಸರ್ಕಾರವು ಪದ್ಮಭೂಷಣ ಪ್ರಶಸ್ತಿಗೆ ಅರ್ಹವ್ಯಕ್ತಿಗಳನ್ನು ನಾಮಿನೇಟ್ ಮಾಡಲು ಕರೆ ನೀಡಿದೆ. ಡಾ.ವಿಷ್ಣುವರ್ಧನ್ ಹೆಸರನ್ನು ಪದ್ಮಭೂಷಣ ಪ್ರಶಸ್ತಿಗೆ ಸೂಚಿಸಲು ಆ.19ರಿಂದ ಅಭಿಯಾನ ಶುರುವಾಗಲಿದೆ.
6. ಡಾ.ವಿಷ್ಣುವರ್ಧನ್ ಅವರಿಗೆ ಸಂಬಂಧಿಸಿದ ಪೋಸ್ಟ್‌ಗಳಿಗೆ 70ಠಿhಆಈayO್ಛಔಛಿಜಛ್ಞಿdಈ್ಟ್ಖಜಿsh್ಞ್ಠva್ಟdha್ಞ ್ಠಹ್ಯಾಶ್‌ಟ್ಯಾಗ್ ಕ್ರಿಯೇಟ್ ಮಾಡಲಾಗಿದೆ. ಸೆಪ್ಟೆಂಬರ್ 18ರಂದು ಸುಮಾರು 5 ಲಕ್ಷ ಹುಟ್ಟುಹಬ್ಬದ ಟ್ವೀಟ್ಸ್ ಮಾಡಿಸುವ ಗುರಿಯನ್ನು ಡಾ.ವಿಷ್ಣು ಸೇನಾ ಸಮಿತಿ ಹಮ್ಮಿಕೊಂಡಿದೆ.
