ದಿಯಾ ಚಿತ್ರದ ಮೂಲಕ ಗಮನ ಸೆಳೆದು ಯಶಸ್ಸು ಕಂಡ ನಟ ಪೃಥ್ವಿ ಅಂಬಾರ್‌ ಈಗ ಪುಷ್ಕರ್‌ ಮಲ್ಲಿಕಾರ್ಜುನಯ್ಯ ಕ್ಯಾಂಪ್‌ಗೆ ಜತೆಯಾಗಿದ್ದಾರೆ. ಪುಷ್ಕರ್‌ ಬ್ಯಾನರ್‌ನಲ್ಲಿ, ಶಶಿಧರ್‌ ನಿರ್ದೇಶನದಲ್ಲಿ ಸಿದ್ಧವಾಗುತ್ತಿರುವ ‘ಶುಗರ್‌ಲೆಸ್‌’ ಚಿತ್ರಕ್ಕೆ ನಾಯಕನಾಗಿ ಪೃಥ್ವಿ ಆಗಮಿಸಿದ್ದಾರೆ.

ದರ್ಶನ್‌ ಅಪೂರ್ವ ನಿರ್ದೇಶನದ ಚಿತ್ರವೊಂದನ್ನು ಒಪ್ಪಿಕೊಂಡಿರುವ ಪೃಥ್ವಿ ಕೈಗೆ ಈಗ ಶುಗರ್‌ಲೆಸ್‌ ಕಪ್‌ ಬಂದಿದೆ. ಶಶಿಧರ್‌ ಕೆ ಎಂ ಅವರ ನಿರ್ದೇಶನದ ಈ ಚಿತ್ರದ ಕತೆ ಸಾಮಾನ್ಯ ಜನರಿಗೆ ತೀರಾ ಹತ್ತಿರವಾಗುವ ವಿಷಯವನ್ನು ಒಳಗೊಂಡಿದೆ ಎನ್ನಲಾಗಿದೆ. ಸದ್ಯದಲ್ಲೇ ಸಿನಿಮಾ ಚಿತ್ರೀಕರಣಕ್ಕೆ ತೆರಳಲಿದೆ.

ವೈವಾಹಿಕ ಜೀವನಕ್ಕೆ ಕಾಲಿಟ್ಟ 'ರಾಧಾ ಕಲ್ಯಾಣ' ನಟ ಪೃಥ್ವಿ ಅಂಬಾರ್!

ಗಾಂಧಿ ನಗರದಲ್ಲಿ ಹೆಚ್ಚು ಸೌಂಡ್‌ ಮಾಡಿದ ಸಿನಿಮಾ 'ದಿಯಾ'ದಲ್ಲಿ ಪೃಥ್ವಿ ಹೀರೋ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ವಿಭಿನ್ನ ಕಥೆಯ ನಾಯಕನಿಗೆ ಅಭಿಮಾನಿಗಳು ಫಿದಾ ಆಗಿದ್ದಾರೆ. ಇದೀಗ ಪೃಥ್ವಿ ಇನ್ನೊಂದು ಸಿನಿಮಾದಲ್ಲಿ ಕಾಣಿಸಿಕೊಳ್ಳಲಿರುವುದು ಇನ್ನಷ್ಟು ಕುತೂಹಲ ಮೂಡಿಸಿದೆ.