Spandana Passed Away: ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ಹೃದಯಾಘಾತದಿಂದ ನಿಧನ
ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ.
ಬೆಂಗಳೂರು (ಆ.7): ಸ್ಯಾಂಡಲ್‌ವುಡ್ ನಟ ವಿಜಯರಾಘವೇಂದ್ರ ಪತ್ನಿ ಸ್ಪಂದನಾ ವಿಜಯರಾಘವೇಂದ್ರ ಅವರು ಹೃದಯಾಘಾತದಿಂಧ ನಿಧನರಾಗಿದ್ದಾರೆ. ಸ್ನೇಹಿತರು ಮತ್ತು ಕುಟುಂಬದವರ ಜೊತೆ ತೆರಳಿದ್ದಾಗ ಹಾರ್ಟ್ ಅಟ್ಯಾಕ್ ಆಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಸುದ್ದಿ ಇಡೀ ಕನ್ನಡ ಚಿತ್ರರಂಗಕ್ಕೆ ಆಘಾತಕಾರಿಯಾಗಿದೆ. ನಿವೃತ್ತ ಪೊಲೀಸ್ ಅಧಿಕಾರಿ ಶಿವರಾಂ ಅವರ ಪುತ್ರಿಯಾಗಿರುವ ಸ್ಪಂದನಾ ಅವರನ್ನು ವಿಜಯ ರಾಘವೇಂದ್ರ 2007, ಆಗಸ್ಟ್ 26 ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇವರ 16ನೇ ವಿವಾಹ ವಾರ್ಷಿಕೋತ್ಸವಕ್ಕೆ ಕೇವಲ 19 ದಿನಗಳು ಬಾಕಿ ಇರುವಂತೆ ಈ ದುರಂತ ನಡೆದಿದೆ. 2016ರಲ್ಲಿ ಬಿಡುಗಡೆಯಾದ ಅಪೂರ್ವ ಸಿನೆಮಾದಲ್ಲಿ ಅತಿಥಿ ಪಾತ್ರದಲ್ಲಿ ಸ್ಪಂದನಾ ನಟಿಸಿದ್ದರು. ದಂಪತಿಗೆ ಶೌರ್ಯ ಎಂಬ ಓರ್ವ ಪುತ್ರನಿದ್ದಾನೆ. ಸ್ಪಂದನಾ ಅವರ ಸಹೋದರ ರಕ್ಷಿತ್ ಶಿವರಾಂ ಇತ್ತೀಚೆಗೆ ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆಗ ಸ್ಪಂದನಾ ಸಹೋದರನ ಪರ ಪ್ರಚಾರ ನಡೆಸಿದ್ದರು.
ಥೈಲ್ಯಾಂಡ್ ನಲ್ಲಿ ನಿನ್ನೆ ಸಂಜೆ ಶಾಪಿಂಗ್ ಮುಗಿಸಿ ರೂಂಗೆ ಬರುವಾಗ ಈ ಘಟನೆ ನಡೆದಿದೆ. ಹೃದಯಾಘಾತಕ್ಕೆ ಒಳಗಾಗಿದ್ದ ಸ್ಪಂದನಾರನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ. ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಸಾವನ್ನಪ್ಪಿರುವುದಾಗಿ ವೈದ್ಯರು ಘೋಷಣೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.
ನಾಳೆ ಬೆಂಗಳೂರಿಗೆ ಸ್ಪಂದನಾ ವಿಜಯರಾಘವೇಂದ್ರ ಅವರ ಪಾರ್ಥಿವ ಶರೀರವನ್ನು ಬೆಂಗಳೂರಿಗೆ ತರಲಾಗುತ್ತದೆ ಎಂದು ವಿಜಯರಾಘವೇಂದ್ರ ಅವರ ಕುಟುಂಬ ಮಾಹಿತಿ ನೀಡಿದೆ. ಮೂರು ದಿನಗಳ ಹಿಂದೆ ಸ್ಪಂದನಾ ಅವರು ಬ್ಯಾಂಕಾಕ್ ಗೆ ತೆರಳಿದ್ದರು. ನಿನ್ನೆ ಬ್ಯಾಂಕಾಕ್ ನಲ್ಲಿ ಹೃದಯಾಘಾತವಾಗಿ, ಆಸ್ಪತ್ರೆಯಲ್ಲಿ ಸಾವನ್ನಪ್ಪಿದ್ದಾರೆ. ಲೋ ಬಿಪಿ ಹಾಗು ಹೃದಯಾಘಾತ ಆಗಿತ್ತು ಎನ್ನಲಾಗಿದೆ. ವಿಷಯ ತಿಳಿಯುತ್ತಿದ್ದಂತೆ ವಿಜಯರಾಘವೇಂದ್ರ ಕುಟುಂಬದವರು ಬ್ಯಾಂಕಾಕ್ ಗೆ ತೆರಳಿದ್ದಾರೆ.
ಚಿನ್ನಾರಿಮುತ್ತನ ಚಿನ್ನದಂಥ ಕುಟುಂಬಕ್ಕೆ ಬರಸಿಡಿಲು, ಸ್ಪಂದನಾ-ವಿಜಯ್ ಜೋಡಿಯ ಸುಂದರ ಚಿತ್ರಗಳು!
ಪ್ರೀತಿಸಿ ಮದುವೆಯಾಗಿದ್ದ ಜೋಡಿ
ವಿಜಯರಾಘವೇಂದ್ರ-ಸ್ಪಂದನಾ ಒಬ್ಬರಿಗೊಬ್ಬರು ಪ್ರೀತಿಸಿ ಮದುವೆಯಾಗಿದ್ದರು. ಮಾತ್ರವಲ್ಲ ಮದುವೆ ಬಳಿಕವೂ ಇಬ್ಬರು ಪ್ರೇಮಿಗಳಂತೆಯೇ ಇದ್ದರು. ಮೊದಲಿಗೆ ಸ್ಪಂದನ ಅವರ ಪರಿಚಯವಾಗಿದ್ದು ಮಲ್ಲೇಶ್ವರಂನ ಕಾಫಿ ಡೇಯಲ್ಲಿ. ಸ್ವಂದನ ಅವರನ್ನು ನೋಡುತ್ತಿದ್ದ ಹಾಗೆ ವಿಜಯರಾಘವೇಂದ್ರ ಅವರು ಅಲ್ಲೇ ಕಳೆದು ಹೋಗುತ್ತಾರೆ. ಅವರನ್ನು ನೋಡಿದ ಕೂಡಲೇ ಆಕಸ್ಮಿಕವಾಗಿ ಮಾತನಾಡಲು ಶುರು ಮಾಡುತ್ತಾರೆ ವಿಜಯ ರಾಘವೇಂದ್ರ. ಇದಾದ ನಂತರ 2007ರಲ್ಲಿ ಮತ್ತೊಮ್ಮೆ ಶೇಷಾದ್ರಿಪುರಂನ ಕಾಫಿ ಡೇಯಲ್ಲಿ ವಿಜಯರಾಘವೇಂದ್ರ ಹಾಗೂ ಸ್ಪಂದನ ಭೇಟಿಯಾಗುತ್ತಾರೆ.
ಆನೆ ನೋಡಿಕೊಳ್ಳುತ್ತಿರುವ ಬೊಮ್ಮನ್- ಬೆಳ್ಳಿ ಚಿತ್ರತಂಡದಿಂದ ಮಹಾ ಮೋಸ; 2 ಕೋಟಿ ರೂ.
ಎರಡನೇ ಬಾರಿ ಭೇಟಿಯಾದ ನಂತರ ಏನಾದರೂ ಮಾಡಿ ಅವರ ಬಳಿ ಪ್ರೀತಿಯನ್ನು ಹೇಳಿಕೊಳ್ಳಬೇಕು ಎಂದು ನಿರ್ಧರಿಸಿ ಕೆಲವೇ ದಿನಗಳಲ್ಲಿ ಅವರ ಪ್ರೀತಿಯನ್ನು ಸ್ಪಂದನ ಅವರ ಬಳಿ ಹೇಳಿಕೊಳ್ಳುತ್ತಾರೆ. ವಿಜಯ ರಾಘವೇಂದ್ರ ಅವರ ಪ್ರೀತಿಯನ್ನು ಸ್ಪಂದನ ಅವರು ಕೂಡ ಒಪ್ಪಿಕೊಳ್ಳುತ್ತಾರೆ, ತದನಂತರ ವಿಜಯ ರಾಘವೇಂದ್ರ ಅವರಿಗೆ ತಿಳಿಯುತ್ತದೆ ಸ್ಪಂದನಾ ಅವರ ತಂದೆ ಎಸಿಪಿ ಆಗಿದ್ದ ಬಿಕೆ ಶಿವರಾಂ ಅವರ ಮಗಳು ಎಂದು. ಕರ್ನಾಟಕದಲ್ಲಿ ಒಳ್ಳೆ ಹೆಸರನ್ನು ಮಾಡಿದ್ದ ಅಧಿಕಾರಿ. ಬಿಕೆ ಶಿವರಂ ಹಾಗೂ ಚನ್ನೇಗೌಡರ ನಡುವೆ ಉತ್ತಮ ಬಾಂಧವ್ಯವಿತ್ತು, ಹಾಗೂ ಇದೇ ಸಂದರ್ಭದಲ್ಲಿ ಇವರಿಬ್ಬರ ಮನೆಯಲ್ಲಿ ಮದುವೆಗಾಗಿ ಹುಡುಗ ಹುಡುಗಿಯನ್ನು ಹುಡುಕುತ್ತಿದ್ದರು. ಆ ಸಂದರ್ಭದಲ್ಲಿ ಇವರಿಬ್ಬರ ಪ್ರೀತಿ ಇಬ್ಬರ ಮನೆಯವರಿಗೂ ತಿಳಿದು ಇವರಿಬ್ಬರ ಮದುವೆಗೆ ಒಪ್ಪಿಕೊಳ್ಳುತ್ತಾರೆ.