ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ; ಹೀಗಂದ್ರಲ್ಲ ವಸಿಷ್ಠ ಸಿಂಹ!
ಕನ್ನಡದ ಕಲಾವಿದ ವಸಿಷ್ಠ ಸಿಂಹ ಅವರನ್ನು ರಾಪಿಡ್ ರಶ್ಮಿ ಅವರು ಸಂದರ್ಶನ ಮಾಡಿದ್ದಾರೆ, ರಶ್ಮಿ ಜೊತೆಗಿನ ಸಂದರ್ಶನದಲ್ಲಿ ನಟ ವಸಿಷ್ಠ ಸಿಂಹ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ..
ಸ್ಯಾಂಡಲ್‌ವುಡ್ ಸಿನಿಮಾರಂಗದಲ್ಲಿ ನಟ ವಸಿಷ್ಠ ಸಿಂಹ (Vasishta Simha) ತಮ್ಮದೇ ಆದ ಛಾಪು ಮೂಡಿಸಿರೋ ನಟ. ಅದರಲ್ಲಿ ಸಂಶಯವೇ ಇಲ್ಲ. ಕಂಚಿನ ಕಂಠದ ಕಲಾವಿದ ವಸಿಷ್ಠ ಸಿಂಹ ಅವರ ಡೈಲಾಹಗ ಡೆಲಿವರಿ ಶೈಲಿಗೆ ಫಿದಾ ಆಗದವರೇ ಇಲ್ಲ ಎನ್ನಬಹುದು. ಕೆಲವೊಮ್ಮೆ ಹೀರೋ ಕೆಲವೊಮ್ಮೆ ವಿಲನ್ ಪಾತ್ರ ಪೋಷಿಸುತ್ತ ಅಪ್ಪಟ ಕಲಾವಿದ ಎಂಬ ಹಣೆಪಟ್ಟಿ ಹೊತ್ತು ಸಾಗುತ್ತಿದ್ದಾರೆ ನಟ ವಸಿಷ್ಠ ಸಿಂಹ. ಸದ್ಯ ಅವರ ಅಭಿನಯದ 'ಲವ್ಲೀ' ಸಿನಿಮಾ ತೆರೆಕಂಡು ಯಶಸ್ವಿಯಾಗಿ ಪ್ರದರ್ಶನ ಕಾಣುತ್ತಿದೆ.
ಇಂಥ ನಟ, ಕನ್ನಡದ ಕಲಾವಿದ ವಸಿಷ್ಠ ಸಿಂಹ ಅವರನ್ನು ರ್‍ಯಾಪಿಡ್ ರಶ್ಮಿ (Rapid Rashmi) ಅವರು ಸಂದರ್ಶನ ಮಾಡಿದ್ದಾರೆ, ರಶ್ಮಿ ಜೊತೆಗಿನ ಸಂದರ್ಶನದಲ್ಲಿ ನಟ ವಸಿಷ್ಠ ಸಿಂಹ ತಮ್ಮ ವೃತ್ತಿ ಹಾಗೂ ವೈಯಕ್ತಿಕ ಜೀವನದ ಹಲವಾರು ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಅವರು ಅದೇನು ಹೇಳಿದ್ದಾರೆ? 'ಎಲ್ಲರೂ ಹೀರೋ ಆಗೋಕೆ ಆಗುತ್ತಾ? ವಿಲನ್ ಇದ್ರೆನೇ ಹೀರೋಗೆ ಮರ್ಯಾದೆ, ಈ ತರ ಎಲ್ಲಾ ನಂಬಿಕೆಗಳ ಮಧ್ಯೆನೂ ವಸಿಷ್ಠ ಅವ್ರು ಮೆಂಟಲಿ ಏನೇನು ಪ್ರಿಪೇರ್ ಮಾಡ್ಕೊತೀರಾ? ಎಂದು ಪ್ರಶ್ನೆ ಕೇಳಿದ್ದಾರೆ ರ್‍ಯಾಪಿಡ್ ರಶ್ಮಿ.
ಕೊನೆಯ ಸಂದರ್ಶನದಲ್ಲಿ ಪುನೀತ್ ನಟರಾದ ದರ್ಶನ್-ಸುದೀಪ್ ಬಗ್ಗೆ ಏನ್ ಹೇಳಿದ್ರು? ನಂಬೋದಕ್ಕೇ ಆಗಲ್ಲ!
ಅದಕ್ಕೆ ನಟ ವಸಿಷ್ಠ ಸಿಂಹ 'ನಾನು ಹೀರೋನೂ ಅಲ್ಲ, ವಿಲನ್ನೂ ಅಲ್ಲ. ನಾನೊಬ್ಬ ಕಲಾವಿದ. ನಾನೊಬ್ಬ ನಟ. ನನಗೆ ಯಾವ ಪಾತ್ರ ಕೊಟ್ರೂ, ನಾನು ಯಾವ ಪಾತ್ರ ಆಯ್ಕೆ ಮಾಡ್ಕೊಂಡ್ರೂ ನಾನು ಆ ಪಾತ್ರಾನ ಜಸ್ಟಿಫೈ ಮಾಡಿದ್ನಾ ಇಲ್ವಾ ಅನ್ನೋದಷ್ಟೆ ನನ್ನ ಟಾಸ್ಕ್. ಯಾರೂ ಕೂಡ ಹುಟ್ಟುವಾಗ್ಲೇ ಹೀರೋನೂ ಅಲ್ಲ ವಿಲನ್ನೂ ಅಲ್ಲ. ತೆರೆ ಮೇಲೆ ನೋಡೋ ಪಾತ್ರಗಳು ಅಭಿನಯದಿಂದ ಆಗೋದು. ನಾನು ನೆಗೆಟಿವ್ ಶೇಡ್ ಮಾಡಿ ವೀಕ್ ಆಗಿ ಕಾಣಿಸಿಕೊಂಡ್ರೆ ಹೋಯ್ತು..
ಭವಿಷ್ಯ ಮೊದಲೇ ಗೊತ್ತಿತ್ತಾ? ಹೇಗಿದ್ರೂ ಇಲ್ಲಿ ಏನ್ ಬೇಕಾದ್ರೂ ಆಗ್ಬಹುದು ಅಂದಿದ್ರು ಧನಂಜಯ್!
ಪೊಸೆಟಿವ್ ಪಾತ್ರ ಮಾಡಿ ಅಲ್ಲಿ ಡಲ್ ಹೊಡೆದ್ರೆ, ನೆಗೆಟಿವ್ ಅನ್ನಿಸಿದ್ರೆ ಅಲ್ಲೂ ಹೋಯ್ತ. ಪಾತ್ರವನ್ನು ಜಸ್ಟಿಫೈ ಮಾಡ್ಬೇಕು. ಪಾತ್ರ ಒಂದು ಪಾತ್ರೆ ಆದ್ರೆ, ನಾವು ಅದಕ್ಕೆ ತುಂಬೋ ನೀರು ಆದ್ರೆ ಸಾಕು ಅನ್ಸುತ್ತೆ' ಎಂದಿದ್ದಾರೆ ಅಚ್ಚಗನ್ನಡದ ಅಪ್ಪಟ ಕಲಾವಿದ ವಸಿಷ್ಠ ಸಿಂಹ. ತಮ್ಮ ಕಂಚಿನ ಕಂಠದ ಮೂಲಕವೇ ಸ್ಯಾಂಡಲ್‌ವುಡ್‌ನಲ್ಲಿ ವಿಶಿಷ್ಟ ಸ್ಥಾನ ಪಡೆದಿರುವ ನಟ ವಸಿಷ್ಠ, ಹಲವಾರು ಸಂಗತಿಗಳನ್ನು ರ್‍ಯಾಪಿಡ್ ರಶ್ಮಿ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ. ಅದರಲ್ಲಿ ಒಂದು ಸಂಗತಿಯನ್ನಷ್ಟೇ ಇಲ್ಲಿ ಹೇಳಲಾಗಿದೆ.
ಮಧ್ಯರಾತ್ರಿ ಕೋಣೆ ಬಾಗಿಲು ತಟ್ಟಿದ್ರು ಡಾ ರಾಜ್‌ಕುಮಾರ್; ಶಾಕ್ ಆಗಿ ಪ್ರೊಡ್ಯೂಸರ್ ಮಾಡಿದ್ದೇನು?