Asianet Suvarna News Asianet Suvarna News

ಪ್ರೇಮಿಗಳ ದಿನಕ್ಕೆ 'UI' ಹಾಡಿನ ದಿಬ್ಬಣ: ಟೀಸರ್ ಬಳಿಕ ಶುರುವಾಯ್ತು ಉಪೇಂದ್ರ ಹಾಡು ಹಬ್ಬ!

ಉಪ್ಪಿ ಅಭಿಮಾನಿಗಳು ಟೀಸರ್ ನೋಡಿಯೇ ಯುಐ ವರ್ಲ್ಡ್ನಲ್ಲಿ ಒಂದು ರೌಂಡ್ ಹೋಗಿ ಬಂದಿದ್ದಾರೆ. AI ಯುಗದಲ್ಲಿ ಉಪ್ಪಿ 'UI' ಪ್ರಪಂಚ ತೆರೆದಿಟ್ಟಿದ್ದಾರೆ ಅಂತ ಫ್ಯಾನ್ಸ್ ಹೆಮ್ಮೆ ಪಡುತ್ತಿದ್ದಾರೆ.  ಈ ಹೆಮ್ಮೆಯನ್ನ ಹೆಚ್ಚು ಮಾಡೋಕೆ ಈಗ ಯುಐನ ಮೊದಲ ಹಾಡು ರಿಲೀಸ್ ಆಗುತ್ತಿದೆ. 

Sandalwood Actor Upendra going to give Special Surprise on Valentines Day gvd
Author
First Published Feb 14, 2024, 8:23 PM IST

ರಿಯಲ್ ಸ್ಟಾರ್ ಉಪೇಂದ್ರ ಡೈರೆಕ್ಷನ್ನಲ್ಲಿ ಮ್ಯಾಜಿಕ್ ಮಾಡ್ತಾರೆ. ಉಪ್ಪಿ ಡೈರೆಕ್ಷನ್ ಸ್ಟೈಲು ವೆರಿ ವೇರಿ ಡಿಫರೆಂಟು ಅಂತ ಹೊಸದಾಗೇನು ಹೇಳ್ಬೇಕಿಲ್ಲ. ಹೊಸ ಪ್ರಪಂಚ ಸೃಷ್ಟಿಸೋದ್ರಲ್ಲಿ ಉಪ್ಪಿ ಟಾಪರ್. ಈಗ ಉಪೇಂದ್ರ ತನ್ನ ಮೆದುಳಿಗೆ ಸಿಕ್ಕಾಪಟ್ಟೆ ಕೆಲಸ ಕೊಟ್ಟು ಸೃಷ್ಟಿಸಿರೋ ಸಿನಿಮಾ ಯುಐ.. ಈ ಸಿನಿಮಾದ ಟೀಸರ್ಅನ್ನ ರಿಯಲ್ ಸ್ಟಾರ್ ರಾಯಲ್ ಫ್ಯಾನ್ಸ್ ವೆಲ್ಕಮ್ ಮಾಡಿ ಆಗಿದೆ. ಉಪೇಂದ್ರ ಏಳು ವರ್ಷದ ಬಳಿಕ ಡೈರೆಕ್ಷನ್ ಕ್ಯಾಪ್ ತೊಟ್ಟಿರೋ ಸಿನಿಮಾ ಯುಐ. 

ಉಪ್ಪಿ ಅಭಿಮಾನಿಗಳು ಟೀಸರ್ ನೋಡಿಯೇ ಯುಐ ವರ್ಲ್ಡ್ನಲ್ಲಿ ಒಂದು ರೌಂಡ್ ಹೋಗಿ ಬಂದಿದ್ದಾರೆ. AI ಯುಗದಲ್ಲಿ ಉಪ್ಪಿ 'UI' ಪ್ರಪಂಚ ತೆರೆದಿಟ್ಟಿದ್ದಾರೆ ಅಂತ ಫ್ಯಾನ್ಸ್ ಹೆಮ್ಮೆ ಪಡುತ್ತಿದ್ದಾರೆ.  ಈ ಹೆಮ್ಮೆಯನ್ನ ಹೆಚ್ಚು ಮಾಡೋಕೆ ಈಗ ಯುಐನ ಮೊದಲ ಹಾಡು ರಿಲೀಸ್ ಆಗುತ್ತಿದೆ. ಅದಕ್ಕಾಗಿ ಡೇಟು ಟೈಮು ಫಿಕ್ಸ್ ಮಾಡಿದ್ದಾರೆ ಉಪೇಂದ್ರ. ನಟ ಉಪೇಂದ್ರ ಈ ಬಾರಿ ಪಕ್ಕಾ ಮ್ಯಾಜಿಕ್ ಮಾಡ್ತಾರೆ ಅನ್ನೋದನ್ನ ಟೀಸರ್ ಹೇಳಿದೆ. ಇದೀಗ ಯುಐ ಸಾಂಗ್ ರಿಲೀಸ್ಗೆ ಕೌಂಟ್ಡೌನ್ ಸ್ಟಾರ್ಸ್ ಆಗಿದೆ. ಪ್ರೇಮಿಗಳ ದಿನಕ್ಕೆ ಅಂದ್ರೆ ಇದೇ ಫೆಬ್ರವರಿ 14ಕ್ಕೆ ಬೆಳಗ್ಗೆ 10 ಗಂಟೆಗೆ ಯುಐ ಲವ್ ಟ್ರ್ಯಾಕ್ ಪಂಚ ಭಾಷೆಯಲ್ಲಿ ರಿಲೀಸ್ ಆಗುತ್ತಿದೆ. ರಿಯಲ್ ಸ್ಟಾರ್ ಸಿನಿಮಾಗಳು ಅಂದ್ರೆ ಸಾಂಗ್ಸ್ ಸೂಪರ್ ಆಗಿರುತ್ತೆ. 

ಎಲ್ಲಾ ಕಾಲದಲ್ಲೂ ಟ್ರೆಂಡ್ನಲ್ಲಿರುತ್ತೆ. ಅದಕ್ಕೆ ಬೆಸ್ಟ್ ಎಕ್ಸಾಂಪಲ್ಲೇ ಈಗ ಸಿಕ್ಕಾಪಟ್ಟೆ ಟ್ರೆಂಡ್ನಲ್ಲಿರೋ ಉಪೇಂದ್ರ ಸಿನಿಮಾದ ಕರಿಮಣಿ ಮಾಲೀಕ ಹಾಡು. UI ಅಪ್ಡೇಟ್ಗಾಗಿ ಆದ ಗಲಾಟೆಗಳು ಒಂದೆರಡಲ್ಲ. ಅಭಿಮಾನಿಗಳು ಯುಐ ಅಪ್ಡೇಟ್ಗಾಗಿ ಉಪ್ಪಿ ಮನೆ ಮುಂದೆ ಪ್ರೊಟೆಸ್ಟ್ ಮಾಡಿದ್ರು. ಯುಐ ಸಿನಿಮಾ ನಿರ್ಮಾಪಕರು ಟೀಸರ್ ಕೊಡಿ ಬಾಸ್ ಅಂತ ಉಪ್ಪಿ ಜೊತೆ ಪರಿ ಪರಿಯಾಗಿ ಕೇಳಿಕೊಂಡಿದ್ರು. ಈಗ ರಿಯಲ್ ಸ್ಟಾರ್ ಉಪೇಂದ್ರ ರಾಯಲ್ ಆಗಿ ಯುಐ ಸಿನಿಮಾದ ಒಂದೊಂದೇ ಅಪ್ಡೇಟ್ ಕೊಡುತ್ತಿದ್ದಾರೆ. 

ನಟ ದರ್ಶನ್ ಚಿತ್ರರಂಗದ ಪಯಣಕ್ಕೆ 25 ವರ್ಷ: ಯಜಮಾನನ ಬೆಸ್ಟ್ 10 ಚಿತ್ರಗಳು ಯಾವ್ದು?

ಟೀಸರ್ ಬಳಿಕ ಈಗ ಸಾಂಗ್ ರಿಲೀಸ್ ಮಾಡುತ್ತಿದ್ದಾರೆ. ಈ ಯುಐ ಸಾಂಗ್ ಹೇಗಿರಬಹುದು ಅಂತ ನೋಡೋ ಎಕ್ಸೈಟ್ಮೆಂಟ್ನಲ್ಲಿ ಉಪೇಂದ್ರ ಫ್ಯಾನ್ಸ್ ಇದ್ದಾರೆ. ಜಿ. ಮನೋಹರನ್ ಹಾಗೂ ಕೆ. ಪಿ ಶ್ರೀಕಾಂತ್ 'UI' ಚಿತ್ರವನ್ನು ನಿರ್ಮಿಸಿದ್ದಾರೆ. ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸಿನಿಮಾ ಪ್ರೇಕ್ಷಕರ ಮುಂದೆ ಬರಲಿದೆ. ಅಜನೀಶ್ ಲೋಕನಾಥ್ ಸಂಗೀತ, ಹೆಚ್‌. ಸಿ ವೇಣು ಛಾಯಾಗ್ರಹಣ ಚಿತ್ರಕ್ಕಿದೆ. ಅಚ್ಯುತ್‌ ಕುಮಾರ್, ಆರ್ಮುಗ ರವಿಶಂಕರ್, ಸಾಧು ಕೋಕಿಲ ಸೇರಿದಂತೆ ದೊಡ್ಡ ತಾರಾಗಣ ಚಿತ್ರದಲ್ಲಿದೆ.

Follow Us:
Download App:
  • android
  • ios