ಸೆಪ್ಟೆಂಬರ್ 2ರಂದು ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಬರ್ತ್ ಡೇ. ಕಿಚ್ಚ ಸುದೀಪ್ ಹುಟ್ಟುಹಬ್ಬಕ್ಕೆ ಇನ್ನೂ ನೂರು ದಿನಗಳು ಬಾಕಿ ಇವೆ. ಆಗಲೇ ಬರ್ತ್ ಡೇ ಕಿಚ್ಚೊತ್ಸವ ಸಂಭ್ರಮ ಎಲ್ಲೆಡೆ ಜೋರಾಗಿದೆ.

ಹೌದು...ಅಭಿಮಾನಿಗಳು ಅಭಿನಯ ಚಕ್ರವರ್ತಿಯ 47 ನೇ ಜನ್ಮ ದಿನ ಆಚರಣೆಯ್ನು ಅದ್ಧೂರಿಯಾಗಿ ಆಚರಿಸಲು ಭರ್ಜರಿ ಪ್ಲಾನ್​ ಮಾಡಿಕೊಂಡಿದ್ದಾರೆ. ಇದರ ಪೂರಕವೆಂಬಂತೆ ಟ್ರಲರ್ ರೀತಿಯಲ್ಲಿ ಶನಿವಾರದಂದು ಕಿಚ್ಚೋತ್ಸವ ಸಂಭ್ರಮಕ್ಕೆ ಚಾಲನೆ ಸಿಕ್ಕಿದೆ. 

16 ವರ್ಷದ ಮಗಳಿಗೆ ಕಿಚ್ಚ ಸುದೀಪ್‌ ಕೊಟ್ಟ ಬಂಪರ್ ಗಿಫ್ಟ್!

‘ಕಿಚ್ಚೋತ್ಸವ 2020‘ ಬಿಡುಗಡೆ

ನಿರೂಪ್​ ಭಂಡಾರಿ ಅವರು ನಟ ಸುದೀಪ್​​ ಜನ್ಮ ದಿನದ ಅಂಗವಾಗಿ ವಿನ್ಯಾಸಗೊಳಿಸಿರುವ ‘ಕಿಚ್ಚೋತ್ಸವ 2020‘ ವಿಶೇಷ ಸಿಡಿಪಿಯನ್ನು ಮತ್ತು #100daysForKicchotsava ​ ಹ್ಯಾಶ್​ ಟ್ಯಾಗ್​ ಅನ್ನು ಬಿಡುಗಡೆ ಮಾಡಿದರು.

ಕಿಚ್ಚೋತ್ಸವಕ್ಕೆ ಚಾಲನೆ ದೊರೆತ ಕೆಲವೇ ಗಂಟೆಗಳಲ್ಲಿ #100daysForKicchotsava ಎಂಬ ಹ್ಯಾಶ್​ಟ್ಯಾಗ್​ ಅಡಿಯಲ್ಲಿ ಒಂದು ಮಿಲಿಯನ್​ಗೂ ಅಧಿಕ ಟ್ವೀಟ್​ಗಳನ್ನ ಮಾಡಲಾಗಿದೆ.  ಅಲ್ಲದೇ ಟ್ವಿಟ್ಟರ್​​ನಲ್ಲಿ #100daysForKicchotsava ಹ್ಯಾಶ್​ ಟ್ಯಾಗ್​ ಟ್ರೆಂಡಿಂಗ್​ನಲ್ಲಿದೆ.

ನಮ್ಮ ಕಡೆಯಿಂದಲೂ ಅಡ್ವಾನ್ಸ್ ಹ್ಯಾಪಿ  ಬರ್ತ್ ಡೇ ಕಿಚ್ಚ ಸುದೀಪ್