ಬೆಂಗಳೂರು(ಜು. 07)  ಕೊರೋನಾ ಕಂಟಕ ಸ್ಯಾಂಡಲ್ ವುಡ್ ನ್ನು ಬಿಟ್ಟಿಲ್ಲ. ಕೊರೋನಾದಿಂದ ನಟ ಶ್ರೀನಗರ ಕಿಟ್ಟಿ ಸಹೋದರ ನಿಧನರಾಗಿದ್ದಾರೆ.

ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.  ಕಳೆದ ಬುಧವಾರ ಹೃದಯಾಘಾತದಿಂದ ಕಿಟ್ಟಿ ಸಹೋದರ  ನಿಧನರಾಗಿದ್ದರು. ನಂತರ ಕೋವಿಡ್ ಟೆಸ್ಟ್ ನಲ್ಲಿ ಪಾಸಿಟಿವ್  ಬಂದಿದೆ.  ಶ್ರೀನಗರ ಕಿಟ್ಟಿ ಸಹೋದರ ಶಿವಶಂಕರ್ ಕೋವಿಡ್ ನಿಂದ ಸಾವನ್ನಪ್ಪಿರುವುದು ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ. 

ಸ್ಯಾಂಡಲ್ ವುಡ್‌ ನಿಂದ ಮರೆಯಾದ ಚಿರಂಜೀವಿ

ಕೊರೋನಾ ಕಾರಣಕ್ಕೆ ಲಾಕ್ ಡೌನ್  ಘೋಷಣೆ ಮಾಡಲಾಗಿತ್ತು. ಪರಿಣಾಮ ಶೂಟಿಂಗ್ ಸಹ ಸ್ಥಗಿತವಾಗಿದ್ದು. ರಾಜ್ಯ ಸರ್ಕಾರ ಒಂದಿಷ್ಟು ಮಾರ್ಗದರ್ಶಿ ಸೂತ್ರ ನೀಡಿ ಶೂಟಿಂಗ್ ಗೆ ಅವಕಾಶ ಮಾಡಿಕೊಟ್ಟಿದೆ.

ಮಂಗಳೂರಿನ ಶಾಸಕ ಭರತ್ ಶೆಟ್ಟಿ, ಮಂಡ್ಯ ಸಂಸದೆ ಸುಮಲತಾ ಅವರಿಗೂ ಕೊರೋನಾ ಪಾಸಿಟಿವ್ ಕಾಣಿಸಿಕೊಂಡು ಚಿಕಿತ್ಸೆಯಲ್ಲಿದ್ದಾರೆ. ಅದೆಲ್ಲದರ ನಡುವೆ ಇದೊಂದು ಆಘಾತಕಾರಿ ಸುದ್ದಿ ಬೆಳಕಿಗೆ ಬಂದಿದೆ.