Asianet Suvarna News Asianet Suvarna News

Puneeth Rajkumar: ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದ ಅಪ್ಪು ಪತ್ನಿ ಅಶ್ವಿನಿ

  • Puneeth Rajkumar: ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿದ ಪುನೀತ್‌ರಾಜ್‌ಕುಮಾರ್‌ ಪತ್ನಿ
  • ನೋವಿನ ಸಂದರ್ಭ ತಮ್ಮೊಂದಿಗೆ ನಿಂತ ಅಭಿಮಾನಿಗಳಿಗೆ ಧನ್ಯವಾದ ತಿಳಿಸಿದ್ದು ಹೀಗೆ
Sandalwood actor Puneeth Rajkumars wife Ashwini thanks people of Karnataka dpl
Author
Bangalore, First Published Nov 17, 2021, 9:32 AM IST

ಪುನೀತ್‌ ನಮನ ಕಾರ್ಯಕ್ರಮ ನಡೆದ ಬಳಿಕ ಅಶ್ವಿನಿ ಪುನೀತ್‌ ರಾಜ್‌ಕುಮಾರ್‌(Ashwini Puneeth Rajkumar) ಅವರು ರಾಜ್ಯದ ಜನತೆಗೆ ಧನ್ಯವಾದ ಸಲ್ಲಿಸಿ ಪತ್ರ ಬರೆದಿದ್ದಾರೆ. ‘ಪುನೀತ್‌ ಅವರ ಅಕಾಲಿಕ ಅಗಲಿಕೆಯ ಶೋಕವನ್ನು ಹಂಚಿಕೊಂಡು ಬೆಂಬಲಕ್ಕೆ ನಿಂತ ಎಲ್ಲಾ ಸಹೃದಯಿ ಅಭಿಮಾನಿ ದೇವರುಗಳು ಮತ್ತು ಸಾರ್ವಜನಿಕರಿಗೆ ನಮ್ಮ ಇಡೀ ಕುಟುಂಬದ ಪರವಾಗಿ ಧನ್ಯವಾದಗಳು’ ಎಂದು ಅವರು ಹೇಳಿದ್ದಾರೆ.

‘ಪುನೀತ್‌ ಅಗಲಿಕೆ ಸಂದರ್ಭದಲ್ಲಿ ನೀವು ಎಲ್ಲಿಯೂ ಸಂಯಮ ಕಳೆದುಕೊಳ್ಳದೇ, ಅಹಿತಕರ ಘಟನೆಗಳು ನಡೆಯಲು ಬಿಡದೇ ಅವರಿಗೊಂದು ಅತ್ಯಂತ ಗೌರವಯುತ ಬೀಳ್ಕೊಡುಗೆ ನೀಡುವಲ್ಲಿ ಸಹಕರಿಸಿದ್ದೀರಿ. ನೀವು ಮಾಡುವ ಸತ್ಕಾರ್ಯಗಳಲ್ಲಿ, ಅವರ ನೆನಪುಗಳು ನಿಮ್ಮಲ್ಲಿ ಮೂಡಿಸುವ ಉತ್ಸಾಹದಲ್ಲಿ ಅವರೆಂದಿಗೂ ಜೀವಂತವಾಗಿರುತ್ತಾರೆ’ ಎಂದು ಅವರು ಪತ್ರದಲ್ಲಿ ಬರೆದಿದ್ದಾರೆ.

Puneeth Namana: ಕರ್ನಾಟಕ ರತ್ನ ಪಡೆದ ಸಿನಿಮಾ ರಂಗದ 2ನೇ ವ್ಯಕ್ತಿ ಪುನೀತ್‌!

ಅರಮನೆ ಮೈದಾನದಲ್ಲಿ ನಡೆದ ಗೀತನಮನ ಕಾರ್ಯಕ್ರಮದಲ್ಲಿ ಚಿತ್ರರಂಗದ 2000ಕ್ಕೂ ಹೆಚ್ಚು ಗಣ್ಯರು ಭಾಗಿಯಾಗಿದ್ದಾರೆ. ಪುನೀತ್ ರಾಜ್‌ಕುಮಾರ್(Puneeth Rajkumar) ಅಗಲಿ 18 ದಿನಗಳಾಗಿವೆ. ಇವತ್ತಿಗೂ ಅವರ ಸಮಾಧಿ ಬಳಿ ಬಹಳಷ್ಟು ಜನರು ಬಂದು ನಮನ ಸಲ್ಲಿಸುತ್ತಿದ್ದಾರೆ. ಪುನೀತ್ ನಮನ ಕಾರ್ಯಕ್ರಮ ನಡೆಯಲಿದ್ದು ಅರಮನೆ ಮೈದಾನದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.  ನುಡಿನಮನ ಕಾರ್ಯಕ್ರಮದಲ್ಲಿ ಗಣ್ಯರು ಭಾಗಿಯಾಗಿದ್ದಾರೆ. ಅರಮನೆ ಮೈದಾನದಲ್ಲಿರುವ ಗಾಯತ್ರಿ ವಿಹಾರದಲ್ಲಿ ಕಾರ್ಯಕ್ರಮ ನಡೆದಿದ್ದು ಸುಮಾರು 2 ಸಾವಿರ ಗಣ್ಯರು ಇದರಲ್ಲಿ ಭಾಗವಹಿಸಲಿದ್ದಾರೆ ಎನ್ನಲಾಗಿತ್ತು.

ಇದರಲ್ಲಿ ಸ್ಯಾಂಡಲ್‌ವುಡ್ ಸ್ಟಾರ್‌ಗಳು, ರಾಜಕೀಯ ಮುಖಂಡರು ಹಾಗೂ ಪರಭಾಷಾ ನಟರೂ ಭಾಗಿಯಾಗಿದ್ದಾರೆ. ಅಗಲಿದ ಪುನೀತ್ ರಾಜ್‌ಕುಮಾರ್‌ಗೆ ಕನ್ನಡ ಚಿತ್ರರಂಗ ಸೇರಿದಂತೆ ಭಾರತದ ಸಿನಿದಿಗ್ಗಜರು ನಮನ ಸಲ್ಲಿಸಿದ್ದಾರೆ. ಬೆಂಗಳೂರಿನ ಆರಮನೆ ಮೈದಾನದಲ್ಲಿ ನಡೆದ ಪುನೀತ್ ಗೀತ ನಮನ ಕಾರ್ಯಕ್ರಮ ಕನ್ನಡಿಗನ್ನು ಮತ್ತಷ್ಟು ಭಾವುಕರನ್ನಾಗಿಸಿದೆ. ರಾಜ್ ಕುಟುಂಬ ನೋವು ತಡೆದುಕೊಳ್ಳಲಾಗದೆ ಬಿಕ್ಕಿ ಬಿಕ್ಕಿ ಅತ್ತರೆ, ಅಭಿಮಾನಿಗಳು ಇತರ ಸಿನಿಮಾ ರಂಗದ ಗಣ್ಯರು ನೋವಿನಲ್ಲಿ ಕಣ್ಣೀರಾಗಿದ್ದಾರೆ.

 ಕರ್ನಾಟಕ ರತ್ನ ಪುನೀತ್ ರಾಜ್ ಕುಮಾರ್ (Puneeth Rajkumar) ಅವರಿಗೆ ಇಡೀ ಜಗತ್ತು ನಮನ ಸಲ್ಲಿಸಿದೆ. ತಮ್ಮನ ಕುರಿತಾಗಿ ಮಾತನಾಡುತ್ತ ರಾಘವೇಂದ್ರ ರಾಜ್ ಕುಮಾರ್ (Raghavendra Rajkumar) ಕಣ್ಣೀರಾದರು. ಪುನೀತ್ ನಮ್ಮನ್ನು ಅಗಲಿ  ಹದಿನೈದು ದಿನಗಳು ಉರುಳಿದೆ. ಇಷ್ಟು ದಿನ ತಡೆದುಕೊಂಡಿದ್ದೆ ಆದರೆ ಇವತ್ತು ಅತ್ತು ಸ್ವಲ್ಪ ಹಗುರಾಗುತ್ತೇನೆ ಎನ್ನುತ್ತಲೇ ರಾಘವೇಂದ್ರ ರಾಜ್ ಕುಮಾರ್ ಗದ್ಗದಿತರಾದರು. ಪುನೀತ್ ರಾಜ್ ಕುಮಾರ್ ಅವರ ಸಾಮಾಜಿಕ ಕೆಲಸಗಳ ಕಾರಣಕ್ಕೆ ನಮ್ಮ ಜತೆಯೇ  ಇರುತ್ತಾರೆ ಎಂದು ರಾಘವೇಂದ್ರ ರಾಜ್ ಕುಮಾರ್  ಹೇಳಿದರು.

ತಮ್ಮನ ಕುರಿತಾಗಿ ಮಾತನಾಡುತ್ತ ಶಿವರಾಜ್ ಕುಮಾರ್ (Shiva Rajkumar) ಕಣ್ಣೀರಾದರು. ಪುನೀತ್ ಬಗ್ಗೆ ಮಾತನಾಡಿ ಮಾತನಾಡಿ ಅಂದ್ರೆ ಏನು ಹೇಳಲಿ. ನನ್ನ ತಮ್ಮನಿಗೆ ನನ್ನ ದೃಷ್ಟಿಯೇ ಆಗಿಹೋಯ್ತಾ!  ಯಾವುದರಲ್ಲಿ ಆತ ಇರಲಿಲ್ಲ ಹೇಳಿ. ಇದು ಬಹಳ ಕಷ್ಟಕರ ಪರಿಸ್ಥಿತಿ ಎಂದು ಶಿವಣ್ಣ ಹೇಳಿದರು. ಪುನೀತ್ ಆದರ್ಶಗಳನ್ನು ನಾವೆಲ್ಲರೂ ಪಾಲಿಸಿಕೊಂಡು ಹೋಗಬೇಕು ಎಂದು ತಿಳಿಸಿದರು.

ಅಗಲಿದ ಪುನೀತ್ ರಾಜ್ ಕುಮಾರ್  (Puneeth Rajkumar) ಅವರಿಗೆ ನಮನ ಸಲ್ಲಿಸಲಾಗುತ್ತಲೇ ಇದೆ.  ನಟ ಪುನೀತ್‌ ರಾಜ್‌ಕುಮಾರ್‌ ಅವರಿಗೆ ಮರಣೋತ್ತರ ಕರ್ನಾಟಕ ರತ್ನ (Karnataka Ratna) ಪುರಸ್ಕಾರವನ್ನು ಕರ್ನಾಟಕ ರಾಜ್ಯ (Karnataka Govt) ಸರ್ಕಾರ ಘೋಷಿಸಿದೆ.

ಸಿಎಂ ಬಸವರಾಜ ಬೊಮ್ಮಾಯಿ ಟ್ಟೀಟ್‌ ಮಾಡಿ ಘೋಷಣೆ ಅಧಿಕೃತ ಮಾಹಿತಿ ತಿಳಿಸಿದ್ದಾರೆ. ಎಲ್ಲ ನಾಯಕರು ಪುನೀತ್ ಅವರಿಗೆ ಕರ್ನಾಟಕ ರತ್ನ ಸ್ವಾಗತ ಮಾಡಿದ್ದಾರೆ. 'ಕನ್ನಡನಾಡಿನ ಜನಪ್ರಿಯ ಕಲಾವಿದ ದಿವಂಗತ ಶ್ರೀ ಪುನೀತ್ ರಾಜಕುಮಾರ್ ಅವರಿಗೆ ಮರಣೋತ್ತರ ಕರ್ನಾಟಕ ರತ್ನ ಪ್ರಶಸ್ತಿ ನೀಡಿ ಗೌರವಿಸಲು ರಾಜ್ಯ ಸರ್ಕಾರ ತೀರ್ಮಾನಿಸಿದೆ' ಎಂದು ಸಿಎಂ ಟ್ವೀಟ್ ಮಾಡಿದ್ದಾರೆ.

Follow Us:
Download App:
  • android
  • ios