ಬಾಲನಟ ಮಾಸ್ಟರ್ ಆನಂದ್, ಗೌರಿ ಗಣೇಶ ಸೇರಿದಂತೆ ಹಲವು ಚಿತ್ರಗಳಲ್ಲಿ ಮಿಂಚಿದ್ದರು. ನಟನೆಯಿಂದ ದೂರವಾಗುವ ಯೋಚನೆಯಲ್ಲಿದ್ದಾಗ, ತಾಳೆಗರಿ ಜ್ಯೋತಿಷಿಯೊಬ್ಬರು ಅವರ ಭವಿಷ್ಯ ನುಡಿದು ಕಲೆಯಲ್ಲಿ ಮುಂದುವರೆಯಲು ಪ್ರೇರೇಪಿಸಿದರು. ಈಗ ಪುತ್ರಿ ವಂಶಿಕಾಳ ತಂದೆಯಾಗಿರುವ ಆನಂದ್, ನಟನೆಯಲ್ಲಿ ಯಶಸ್ವಿಯಾಗಿ ಮುಂದುವರೆದಿದ್ದಾರೆ.
ಮಾಸ್ಟರ್ ಆನಂದ್ ಅವರ ಬಗ್ಗೆ ಕೇಳಿರದ ಕನ್ನಡಿಗರೇ ಇಲ್ಲ ಎನ್ನಬಹುದು. ಬಾಲ ಕಲಾವಿದನಾಗಿ ಅವರು ಮಾಡಿರುವ ಮೋಡಿ ಅಷ್ಟಿಷ್ಟಲ್ಲ. ಅಬ್ಬಾ ಇಂಥ ಆ್ಯಕ್ಟಿಂಗ್ ಈ ಪುಟಾಣಿಯಿಂದ ಸಾಧ್ಯವೇ ಎನ್ನುವ ರೀತಿಯಲ್ಲಿ ಆನಂದ್ ಅದ್ಭುತವಾಗಿ ನಟಿಸಿದ್ದು ಇದೆ. 1991 ರಲ್ಲಿ ಗೌರಿ ಗಣೇಶದಲ್ಲಿ ಅನಂತ್ ನಾಗ್, ಸಿಹಿ ಕಹಿ ಚಂದ್ರು ಮತ್ತು ರಮೇಶ್ ಭಟ್ ಅವರೊಂದಿಗೆ ಅಭಿನಯಿಸಿದರು. ಕಿಂದರಿಜೋಗಿ ಸೇರಿದಂತೆ ಅನೇಕ ಚಿತ್ರಗಳಲ್ಲಿ ಆನಂದ್ ಬಾಲ ಕಲಾವಿದನಾಗಿ ಅಭಿನಯಿಸಿದ್ದಾರೆ. ಗೌರಿ ಗಣೇಶ ಚಿತ್ರ ನೋಡಿದವರಿಗಂತೂ ಮಾಸ್ಟರ್ ಆನಂದ್ ಇನ್ನೂ ಅದೇ ಪುಟಾಣಿಯಾಗಿಯೇ ಕಾಣಿಸಲಿಕ್ಕೆ ಸಾಕು. ಇನ್ನೊಂದರ್ಥದಲ್ಲಿ ಹೇಳುವುದಾದರೆ, ಈ ಸಿನಿಮಾಕ್ಕೆ ಮಾಸ್ಟರ್ ಆನಂದ್ ಅವರೇ ನಾಯಕ ಎಂದರೂ ತಪ್ಪಾಗಲಿಕ್ಕಿಲ್ಲ. ಹಾಸ್ಯ, ಕೋಪ, ಗಂಭೀರ ಯಾವುದೇ ಪಾತ್ರ ಕೊಟ್ಟರೂ ಸೈ ಎನ್ನಿಸಿಕೊಂಡಿದ್ದ ಬಾಲಕ ಮಾಸ್ಟರ್ ಆನಂದ್ ಇದೀಗ ಅವರದ್ದೇ ರೀತಿಯ ನಟನೆಯಿಂದ ತುಂಬಿರುವ ಪುಟಾಣಿ ವಂಶಿಕಾಳ ತಂದೆಯಾಗಿದ್ದಾರೆ.
ಇದೀಗ ಅವರು ತಮ್ಮ ಜೀವನದ ಹಲವು ವಿಷಯಗಳ ಬಗ್ಗೆ ಮಾಧ್ಯಮವೊಂದಕ್ಕೆ ನೀಡಿರುವ ಸಂದರ್ಶನದಲ್ಲಿ ಬಹಿರಂಗಪಡಿಸಿದ್ದಾರೆ. ಬಾಲ ಕಲಾವಿದನಾದ ಮಿಂಚಿದ ಹಾಗೂ ದೊಡ್ಡವರಾದ ನಡುವಿನ ಅವಧಿಯಲ್ಲಿ ಇದ್ದ ತಲ್ಲಣಗಳ ಬಗ್ಗೆ ಅವರು ಹೇಳಿದ್ದಾರೆ. ನಾಯಕನಾಗಿ ಮಿಂಚುವ ನಡುವಿನ ಅವಧಿಯಲ್ಲಿ ಬಣ್ಣದ ಲೋಕದಿಂದ ಹೊರಕ್ಕೆ ಬರುವ ಮನಸ್ಸು ಮಾಡಿದ್ದೆ. ಏನುಮಾಡಬೇಕು ಎಂದು ತಿಳಿದಿರಲಿಲ್ಲ. ಆಗ ಯಾರೋ ಒಬ್ಬರು ತಮಿಳುನಾಡಿನ ತಾಳೆ ಗರಿ ಜ್ಯೋತಿಷಿ ಬಗ್ಗೆ ಹೇಳಿ ಅಲ್ಲಿ ಕರೆದೊಯ್ದರು. ಅವರು ತಾಳೆ ಗರಿ ನೋಡಿ ನಮ್ಮ ಜೀವನದ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಅವರು ಹೇಳಿದ್ದು ಸರಿ ಎಂದಾದರೆ ಹೌದು ಎನ್ನಬೇಕು, ಇಲ್ಲದಿದ್ದರೆ ಇಲ್ಲ ಎನ್ನಬೇಕು. ಹೀಗೆ ಪ್ರಶ್ನೆಗಳು ಮುಂದುವರೆಯುತ್ತವೆ ಎನ್ನುತ್ತಲೇ ತಾವು ಸುಳ್ಳು ಹೇಳಿದ ಬಗ್ಗೆ ವಿವರಿಸಿದ್ದಾರೆ.
ಡಿವೋರ್ಸ್ ಸುದ್ದಿ ಇಷ್ಟು ದೊಡ್ಡದಾಗಲು ಇವಳೇ ಕಾರಣ: ಪತ್ನಿ ಮೇಲೆ ಕೋಪಗೊಂಡ ಆನಂದ್ ಹೇಳಿದ್ದೇನು?
ಅವರು ನನ್ನ ಹಿಂದಿನ ಎಲ್ಲಾ ವಿಷಯಗಳನ್ನೂ ಸರಿಯಾಗಿ ಹೇಳಿದರು. ಆಮೇಲೆ ನನಗೆ ಭವಿಷ್ಯದ ಬಗ್ಗೆ ಕೇಳಬೇಕಿತ್ತು. ಆಗ ಅವರು ನೀವು ಏನು ಮಾಡಿಕೊಂಡಿರುವುದು ಎಂದು ಪ್ರಶ್ನಿಸಿದರು. ಏಕೆಂದರೆ ಅವರಿಗೆ ನಾನು ನಟ ಎನ್ನುವುದು ಗೊತ್ತಿರಲಿಲ್ಲ. ಆದ್ದರಿಂದ ನಾನು ಸುಳ್ಳು ಹೇಳಿದೆ. ಆ ಇಂಟರ್ವ್ಯೂ, ಈ ಇಂಟರ್ವ್ಯೂ ಅಂತ ಹೋಗುತ್ತಾ ಇದ್ದೇನೆ. ಯಾವುದೂ ಕೈ ಹಿಡಿಯುತ್ತಿಲ್ಲ. ಏನು ಮಾಡಬೇಕು ಎನ್ನುವುದು ತಿಳಿಯುತ್ತಿಲ್ಲ ಎಂದು ಸುಳ್ಳು ಹೇಳಿದೆ. ಆದರೆ ಆಮೇಲೆ ಆದದ್ದೇ ಬೇರೆ ಎಂದು ಮಾಸ್ಟರ್ ಆನಂದ್ ಹೇಳಿದರು.
ಆಗ ಅವರು ನನ್ನ ತಾಳೆಗರಿಯ ಭವಿಷ್ಯ ನೋಡಿ, ನಿಮಗೆ ಕಲೆ ಒಲಿದಿದೆ. ನೀವು ಕಲಾವಿದನಾಗಬಹುದು ಎಂದು ಹೇಳಿಬಿಟ್ಟಾಗ ನನಗೆ ಅಚ್ಚರಿಯೋ ಅಚ್ಚರಿ. ಕೊನೆಗೆ ಇನ್ನು ಸುಳ್ಳು ಹೇಳಿ ಪ್ರಯೋಜನ ಇಲ್ಲ ಎಂದುಕೊಂಡು ನನ್ನ ನಿಜ ಜೀವನದ ಬಗ್ಗೆ ಅವರಿಗೆ ಹೇಳಿದೆ. ಆಗ ಅವರು, ಛೇ ನೀವು ಒಳ್ಳೆಯ ಕಲಾವಿದನಾಗಿಯೇ ಮುಂದುವರೆಯುತ್ತೀರಿ. ಇದನ್ನು ಬಿಟ್ಟು ಆ ಇಂಟರ್ವ್ಯೂ, ಈ ಇಂಟರ್ವ್ಯೂ ಕೊಡುವುದನ್ನು ನಿಲ್ಲಿಸಿ. ನಿಮಗೆ ಕಲೆಯಲ್ಲಿ ಉತ್ತಮ ಭವಿಷ್ಯವಿದೆ ಎಂದರು. ಆಗ ನಾನು ನಟನೆಯಲ್ಲಿಯೇ ಮುಂದುವರೆಯುವ ಮನಸ್ಸು ಮಾಡಿದೆ ಎಂದು ಆನಂದ್ ಹೇಳಿದ್ದಾರೆ.
ಡಿವೋರ್ಸ್ ಸುದ್ದಿ ನಡುವೆಯೇ 'ನನ್ನ ಮುದ್ದಿನ ಗಂಡ' ಎಂದ ಮಾಸ್ಟರ್ ಆನಂದ್ ಪತ್ನಿ- ವಿಡಿಯೋ ವೈರಲ್
