ಬರ್ತ್‌ಡೇ ದಿನ ಕಿಚ್ಚ ಸುದೀಪ್ ಬಯೋಗ್ರಫಿ ಬಿಡುಗಡೆ ಮಾಡ್ತಿದ್ದಾರೆ ಅಪ್ಪು..!
ಅಭಿಮಾನಿಗಳೆಲ್ಲ ಕಾತರದಿಂದ ಕಾಯುತ್ತಿದ್ದ ಕಿಚ್ಚ ಸುದೀಪ್ ಹುಟ್ಟಿದ ಹಬ್ಬದ ದಿನ ಅವರ ಬಯೋಗ್ರಫಿಯೂ ಬಿಡುಗಡೆಯಾಗಲಿದೆ.
ನಟ ಕಿಚ್ಚ ಸುದೀಪ್ ಅವರ ಬಯೋಗ್ರಫಿ ಸೆಪ್ಟೆಂಬರ್ 02ರಂದು ಬಿಡುಗಡೆಯಾಗಲಿದೆ. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಕಿಚ್ಚ ಅವರ ಬಯೋಗ್ರಫಿ ಬಿಡುಗಡೆ ಮಾಡಲಾಗಿದ್ದಾರೆ.
ಸೆ. 02ರಂದು ಪುಸ್ತಕ ಬಿಡುಗಡೆಯಾಗಲಿದ್ದು, 11.30ಕ್ಕೆ ಕಾರ್ಯಕ್ರಮ ನಡೆಯಲಿದೆ. ಅಂದ ಹಾಗೆ ಪುಸ್ತಕದ ಹೆಸರು, ಎಷ್ಟು ದೀರ್ಘವಾದ ಪುಸ್ತಕ, ಏನೇನು ವಿಚಾರಗಳಿವೆ ಎನ್ನುವ ವಿಚಾರ ಸದ್ಯಕ್ಕೆ ಸಸ್ಪೆನ್ಸ್.
ಕಿಚ್ಚ ಸುದೀಪ್ ಬರ್ತಡೇಗೆ ರೆಡಿಯಾಗುತ್ತಿದೆ ಬಿಗ್ ಸರ್ಪ್ರೈಸ್!
ಕಿಚ್ಚ ಬರ್ತ್‌ಡೇ ದಿನವೇ ‘ಕೋಟಿಗೊಬ್ಬ 3’ ಟೀಸರ್ ಲಾಂಚ್ ಮಾಡೋದಾಗಿ ಆನಂದ್ ಆಡಿಯೋ ತಿಳಿಸಿದೆ. ಈಗ ಸುದೀಪ್ ಅವರು ಫ್ಯಾಂಟಮ್ ಚಿತ್ರೀಕರಣದಲ್ಲೂ ಬ್ಯುಸಿಯಾಗಿದ್ದು, ಅದರ ಜೊತೆಗೆ ಕೋಟಿಗೊಬ್ಬ 3 ಚಿತ್ರೀಕರಣವನ್ನೂ ನಿಭಾಯಿಸಲಿದ್ದಾರೆ.
ನಾಳೆ ಕಿಚ್ಚ 47ನೇ ಹುಟ್ಟುಹಬ್ಬ ಆಚರಿಸಲಿದ್ದು, ಈ ಬಾರಿ ಆಚರಣೆ ಸರಳವಾಗಿರಲಿದೆ. ಆದರೆ ಅಭಿಮಾನಿಗಳಿಗಾಗಿ ಟೀಸರ್ ಸಾಂಗ್ ರಿಲೀಸ್ ಮಾಡಲಿದ್ದು, ಫ್ಯಾನ್ಸ್‌ಗೆ ದೊಡ್ಡ ಗಿಫ್ಟ್ ಆಗಲಿದೆ.