ಬಿಗ್ ಬಾಸ್ 11 ಸೀಸನ್‌ನಿಂದ ಕಿಚ್ಚ ಸುದೀಪ್ ಗಳಿಸಿದ್ದೆಷ್ಟು? ಇದು ಪೇಮೆಂಟ್ ವಿಷ್ಯ ಗುರೂ!
ಸುದೀಪ್ ಇಲ್ಲದೇ ಹೋಗಿದ್ದಲ್ಲಿ ಬಹುಶಃ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿ ಇಷ್ಟು ಜನಪ್ರೀಯತೆ ಪಡೆಯೋದು ಸಾಧ್ಯನೇ ಇರಲಿಲ್ಲ. ಸುದೀಪ್ ಬಿಗ್ ಕೇವಲ ಬಾಸ್ ಶೋಗೆ ವಾರಕ್ಕೊಮ್ಮೆ ಬರೋ ವಿಸಿಟಿಂಗ್ ಆಂಕರ್ ಅಲ್ಲ. ಅಥವಾ ಸೆಲೆಬ್ರಿಟಿ ಜಡ್ಜ್ ಅಲ್ಲ. ಇದು ..

ಬಿಗ್ ಬಾಸ್ ಸೀಸನ್ 11 ಫಿನಾಲೆಗೆ ದಿನಗಣನೆ ಶುರುವಾಗಿದೆ. ಇನ್ನೇನು ಇದೇ ವಾರಾಂತ್ಯಕ್ಕೆ ಬಿಗ್ ಬಾಸ್ ಶೋ ಮುಕ್ತಾಯಗೊಳ್ಳಲಿದೆ. ಈ ಸೀಸನ್ ಮೂಲಕ ಬಿಗ್ ಬಾಸ್ ಜೊತೆಗಿನ ಕಿಚ್ಚನ ಸಂಬಂಧವೂ ಮುಕ್ತಾಯ ಆಗ್ತಾ ಇದೆ. ಈ ಬಗ್ಗೆ ಖುದ್ದು ಕಿಚ್ಚ ಸುದೀಪ್ ಅಧಿಕೃತವಾಗಿ ಸ್ಟೇಟ್ಮೆಂಟ್ ಕೊಟ್ಟಾಗಿದೆ. ಹಾಗಾದ್ರೆ ಇಷ್ಟು ವರ್ಷ ಕಿಚ್ಚನ ಬಿಗ್ ಬಾಸ್ ಸಾರಥ್ಯ ಹೇಗಿತ್ತು..? ಈ ಶೋದ ನಿರೂಪಣೆಯಿಂದ ಸುದೀಪ್ ಗಳಿಸಿದ್ದೇಷ್ಟು..? ಆ ಕುರಿತ ಎಕ್ಸ್ ಕ್ಲೂಸಿವ್ ಸ್ಟೋರಿ ಇಲ್ಲಿದೆ ನೋಡಿ.
ಯೆಸ್ ಕಿಚ್ಚ ಸುದೀಪ್ ಈಗಾಗ್ಲೇ ಇದು ನನ್ನ ಕೊನೆಯ ಬಿಗ್ ಬಾಸ್ ಸೀಸನ್ ಅಂತ ಹೇಳಿದ್ರು. ಶೋ ನಡೀತಿರೋವಾಗಲೇ ವಿದಾಯದ ಮಾತನಾಡಿದ್ರು. ಇದೀಗ ಒನ್ಸ್ ಅಗೈನ್ ಫೈನಲ್ಗೆ ಕೆಲವೇ ದಿನ ಬಾಕಿ ಇರೋವಾಗ ಮತ್ತೊಮ್ಮೆ ಕಿಚ್ಚ ಸೋಷಿಯಲ್ ಮಿಡಿಯಾದಲ್ಲಿ ಪೋಸ್ಟ್ ಹಾಕಿ ಬಿಗ್ ಬಾಸ್ಗೆ ಅಧಿಕೃತವಾಗಿ ಗುಡ್ ಬೈ ಹೇಳಿದ್ದಾರೆ.
ಅಲ್ಲಿಗೆ ಈ ವಾರಾಂತ್ಯಕ್ಕೆ ನಡೆಯಲಿರೋ ಫಿನಾಲೆ.. ಕಿಚ್ಚನ ಕೊನೆ ಫಿನಾಲೆ ಆಗಲಿದೆ. ಮುಂದಿನ ದಿನಗಳಲ್ಲಿ ಬಿಗ್ ಬಾಸ್ ಮುಂದುವರೆಯಬಹುದು.. ಬೇರೇ ನಿರೂಪಕರು ಬಂದು ಬಿಗ್ ಬಾಸ್ ಶೋ ನಡೆಸಿಕೊಡಬಹುದು. ಆದ್ರೆ ಕಿಚ್ಚ ಅಂತೂ ಇನ್ಮುಂದೆ ಈ ವೇದಿಕೆ ಮೇಲೆ ಕಾಣಿಸಿಕೊಳ್ಳಲ್ಲ ಅನ್ನೋದು ಫಿಕ್ಸ್.
ಓಲ್ಡ್ ಪ್ರೊಮೋ ವೈರಲ್, ಸುದೀಪ್‌ಗೆ ಹತ್ತು ವರ್ಷಕ್ಕೆ ಒಂದು ವರ್ಷನಾ ಅಂತಿರೋದ್ಯಾಕೆ?
ಸುದೀಪ್ ಇಲ್ಲದೇ ಹೋಗಿದ್ದಲ್ಲಿ ಬಹುಶಃ ಬಿಗ್ ಬಾಸ್ ಕಾರ್ಯಕ್ರಮ ಕನ್ನಡದಲ್ಲಿ ಇಷ್ಟು ಜನಪ್ರೀಯತೆ ಪಡೆಯೋದು ಸಾಧ್ಯನೇ ಇರಲಿಲ್ಲ. ಸುದೀಪ್ ಬಿಗ್ ಕೇವಲ ಬಾಸ್ ಶೋಗೆ ವಾರಕ್ಕೊಮ್ಮೆ ಬರೋ ವಿಸಿಟಿಂಗ್ ಆಂಕರ್ ಅಲ್ಲ. ಅಥವಾ ಸೆಲೆಬ್ರಿಟಿ ಜಡ್ಜ್ ಅಲ್ಲ. ಇದು ತನ್ನದೇ ಶೋ. ಇದಕ್ಕೆ ತಾನೇ ಜವಾಬ್ದಾರ ಅನ್ನೋ ರೀತಿಯಲ್ಲಿ ಹೆಗಲ ಮೇಲೆ ಹೊತ್ತು ಈ ಶೋನ ನಡೆಸಿಕೊಂಡು ಬಂದವರು ಸುದೀಪ್.
ಕಂಟೆಸ್ಟೆಂಟ್ ಗಳು ಅದೆಷ್ಟೇ ಕಂಟೆಂಟ್ ಕೊಟ್ಟರೂ ಏನೇ ವೀಕ್ಷಕವರ್ಗವನ್ನು ಹುಟ್ಟುಹಾಕಿದ್ರೂ ಬಿಗ್ ಬಾಸ್ ನ ಮೂಲ ಶಕ್ತಿಯಾಗಿದ್ದವರು ಸುದೀಪ್. ಕಂಟೆಸ್ಟೆಂಟ್ಗಳು ಅದೆಂಥಾ ಕಿರಿಕ್ ಮಾಡಿದ್ರೂ, ಪ್ರತಿವಾರದ ಎಲ್ಲ ಕಿರಿಕ್ಗಳನ್ನ ವಾರದ ಕೊನೆಯಲ್ಲಿ ತಮ್ಮ ಮಾತುಗಾರಿಕೆಯ ಮೂಲಕ ಅಳಿಸಿಹಾಕಿ, ಮತ್ತೆ ಮರುವಾರಕ್ಕೆ ವೀಕ್ಷಕವರ್ಗವನ್ನ ರೆಡಿಮಾಡ್ತಾ ಇದ್ದದ್ದು ಸುದೀಪ್.
ಮಣಿಸರ ಮಾರುತ್ತಿದ್ದ ಸುಂದರಿ ಮೊನಾಲಿಸಾ ಮುಂದಿನ ಭವಿಷ್ಯವೇನು?
ಇಂಥಾ ಸುದೀಪ್ ಇಲ್ಲದ ಬಿಗ್ ಬಾಸ್ನ ಊಹಿಸೋದು ಕೂಡ ಕಷ್ಟ. ಸುದೀಪ್ ಎತ್ತರ, ಧ್ವನಿ, ಆ ಚಾರ್ಮ್, , ಮಾತಿನ ವೈಖರಿ, ಆಟಿಟ್ಯೂಡ್, ಇಷ್ಟುವರ್ಷದ ಬಿಗ್ ಬಾಸ್ ಅನುಭವ... ಇದನ್ನೆಲ್ಲ ಸರಿಗಟ್ಟೋಕೆ ಯಾರಿಂದಾನೂ ಖಂಡಿತ ಸಾಧ್ಯ ಇಲ್ಲ. ಹಾಗಂತ ಶೋ ನಿಲ್ಲಿಸೋಕಂತೂ ಸಾಧ್ಯ ಇಲ್ಲ ಅಲ್ವಾ..? ಶೋ ಮಸ್ಟ್ ಗೋ ಆನ್.. ಸೋ ಬಿಗ್ ಹೋಸ್ಟ್ ಅಗಲಿಕ್ಕೆ ಹೊಸ ತಾರೆಯರ ಹುಡುಕಾಟ ಶುರುವಾಗಿದೆ.
ಇದರ ಜೊತೆ ಜೊತೆಗೆ ಇನ್ನೊಂದು ಚರ್ಚೆ ಶುರುವಾಗಿದೆ. ಅದೇನಂದ್ರೆ ಇಷ್ಟು ವರ್ಷಗಳ ಕಾಲ ಬಿಗ್ ಬಾಸ್ ನಿರೂಪಣೆ ಮಾಡಿದ್ದಕ್ಕೆ ಕಿಚ್ಚ ಪಡೆದ ಸಂಭಾವನೆ ಎಷ್ಟು ಅನ್ನೋದು. ಬಿಗ್ ಬಾಸ್ ಕನ್ನಡದಲ್ಲಿ ಆರಂಭವಾಗಿದ್ದು 2013ರಲ್ಲಿ. ಇಲ್ಲಿವರೆಗೆ ಒಟ್ಟು 11 ಸೀಸನ್ ನಡೆದಿವೆ. ಒಂದು ಸಾರಿ ಬೇರೆ ವಾಹಿನಿ ಈ ಶೋ ನಡೆಸಿತ್ತು. ವಾಹಿನಿ ಬದಲಾದರೂ ಕಿಚ್ಚನ ನಿರೂಪಣೆ ಮಾತ್ರ ಬದಲಾಗಿಲ್ಲ. ಭರ್ತಿ 11 ಸೀಸನ್ನ ಸಾರಥ್ಯ ವಹಿಸಿಕೊಂಡು ಬಂದಿರೋದು ಒನ್ ಅಂಡ್ ಓನ್ಲಿ ಸುದೀಪ್.
ಹಾಗಾದ್ರೆ ಇಷ್ಟು ವರ್ಷ ಬಿಗ್ ಬಾಸ್ ನಿರೂಪಣೆ ಮಾಡಿದ್ದಕ್ಕೆ ಸುದೀಪ್‌ಗೆ ದೊಡ್ಡ ಅಭಿಮಾನಿ ಬಳಗ ಸಿಕ್ಕಿದೆ. ಇವರ ಕೀರ್ತಿ ದೇಶದೆಲ್ಲೆಡೆ ಹರಡಿದೆ. ಜೊತೆಗೆ ಇದ್ರಿಂದ ಕಿಚ್ಚನಿಗೆ ಪೇಮೆಂಟ್ ಎಷ್ಟು ಸಿಕ್ಕಿದೆ ಅನ್ನೋ ಕುತೂಹಲವೂ ಅಭಿಮಾನಿಗಳಲ್ಲಿದೆ.
ಅಮ್ಮ-ಮಗಳ ವಿಡಿಯೋ ವೈರಲ್, ಸುಧಾರಾಣಿ 'ಜಿಂಗಿ ಚಕ್ಕ' ಕಂಡು ಕರ್ನಾಟಕವೇ ಶಾಕ್!
ಹೌದು ಸುದೀಪ್ ಮೊದಲ ಸೀಸನ್ ಗೆ ಹೋಸ್ಟ್ ಆದಾಗಲೇ ಭರ್ತಿ 6 ಕೋಟಿ ಸಂಭಾವನೆ ಪಡೆದಿದ್ದಾರೆ ಅನ್ನೋ ಸುದ್ದಿ ಹರದಾಡಿತ್ತು. ಸುದೀಪ್ ಮತ್ತು ಬಿಗ್ ಬಾಸ್ ಆಯೋಜಕರ ನಡುವೆ ಒಪ್ಪಂದ ಇರೋದ್ರಿಂದ ಇದನ್ನ ಬಹಿರಂಗ ಪಡಿಸೋ ಹಾಗಿಲ್ಲ. ಆದ್ರೆ ಸುದೀಪ್ ವಿಷ್ಯ ಗುಟ್ಟಾಗಿಟ್ರೂ ಗಾಂಧಿನಗರ ಗಲ್ಲಿಗಳಲ್ಲಿ ಈ ವಿಷ್ಯ ಸದ್ದು ಮಾಡಿತ್ತು.
12 ವರ್ಷಗಳ ಹಿಂದೆಯೇ 6 ಕೋಟಿ ಸಂಭಾವನೆ ಪಡೆದ ಸುದೀಪ್ ಈಗಿನ ಲೇಟೆಸ್ಟ್ ಸೀಸನ್ಸ್ಗೆ ಎಷ್ಟು ಪೇಮೆಂಟ್ ಪಡೆದಿರಬಹುದು ಅಂತ ನೀವೇ ಊಹೆ ಮಾಡಿ. ಮೂಲಗಳ ಪ್ರಕಾರ ಸುದೀಪ್ ಯಾವ ಸಿನಿಮಾಗೂ ಇಷ್ಟು ಸಂಭಾವನೆ ಪಡೆದಿಲ್ಲ. ಸುದೀಪ್ ಅಷ್ಟೇ ಅಲ್ಲ ಯಾವ ಸ್ಟಾರ್ ನಟರೂ ಇಷ್ಟು ಕೋಟಿ ಕೋಟಿ ಸಂಭಾವನೆ ಗಳಿಸಿಲ್ಲ. ಅಷ್ಟು ಕೋಟಿಗಳನ್ನ ಬಿಗ್ ಬಾಸ್ ನಿಂದ ಪಡೆದಿದ್ದಾರೆ ಸುದೀಪ್.