ಮಣಿಸರ ಮಾರುತ್ತಿದ್ದ ಸುಂದರಿ ಮೊನಾಲಿಸಾ ಮುಂದಿನ ಭವಿಷ್ಯವೇನು?
ಈ ಹುಚ್ಚು ಜನಪ್ರಿಯತೆ ಆರಂಭದಲ್ಲಿ ಮೋನಾಲಿಸಾಗೆ ಕಿರಿಕಿರಿ ತಂದರೂ ಕ್ರಮೇಣ ಇದಕ್ಕೆ ಈಕೆನೂ ಒಗ್ಗಿಕೊಳ್ತಾ ಇದ್ದಾಳೆ. ಇದೀಗ ತನ್ನದೇ ಸೋಷಿಯಲ್ ಮಿಡಿಯಾ ಖಾತೆ ಓಪನ್ ಮಾಡಿರೋ ಈಕೆ ಪ್ರಾಡೆಕ್ಟ್ ವೊಂದರ ಮಾಡೆಲಿಂಗ್ ಮಾಡೋದಕ್ಕೆ ಓಕೆ ಅಂದಿದ್ದಾಳೆ. ಅಷ್ಟೇ ಅಲ್ಲ..

ಇತ್ತೀಚಿಗೆ ಸೋಷಿಯಲ್ ಮೀಡಿಯಾ ತುಂಬಾ ತುಂಟುಕಂಗಳ ಸುಂದ್ರಿ ಮೋನಾಲಿಸಾಳದ್ದೇ ಸದ್ದು ಸುದ್ದಿ. ಮಹಾಕುಂಭ ಮೇಳದಲ್ಲಿ ಮಣಿ ಸರ ಮಾರ್ತಿದ್ದ ಹುಡ್ಗಿ (Monalisa) ರಾತ್ರೋರಾತ್ರಿ ಫೇಮಸ್ ಆಗಿದ್ದು, ಮತ್ತು ಅದರಿಂದ ಸಮಸ್ಯೆಗೆ ಸಿಲುಕಿದ್ದು ಗೊತ್ತೇ ಇದೆ. ಸದ್ಯ ಈ ಮೋನಾಲಿಸಾಗೆ ಸಿನಿಮಾ ನಟಿಯಾಗೋ ಚಾನ್ಸ್ ಒಲಿದು ಬಂದಿದೆ. ಪ್ರಯಾಗ್ ರಾಜ್ ರೋಡ್ನಿಂದ ಸೀದಾ ಬಾಲಿವುಡ್ಗೆ ಎಂಟ್ರಿ ಕೊಟ್ಟಿದ್ದಾಳೆ ವೈರಲ್ ಸುಂದ್ರಿ ಮೊನಾಲಿಸಾ. ಬಾಲಿವುಡ್ ನಿರ್ದೇಶಕರೊಬ್ಬರು ಆಕೆಗೆ ತಮ್ಮ ಚಿತ್ರದಲ್ಲಿ ನಾಯಕಿ ಆಫರ್ ನೀಡಿದ್ದಾರೆ.
ಈ ಸೋಷಿಯಲ್ ಮಿಡಿಯಾ (Social Media) ಕಾಲದಲ್ಲಿ ಯಾರ ಲಕ್ಕು ಯಾವಾಗ ತಿರುಗುತ್ತೋ ಗೊತ್ತಿಲ್ಲ. ಈ ಮೋನಾಲಿಸಾಳನ್ನೇ ನೋಡಿ, ಮೊನ್ನೆ ವರೆಗೂ ರಸ್ತೆ ಬದಿ ಮಣಿ ಮಾರ್ತಾ ಇದ್ದ ಈ ಹುಡುಗಿ ಈಗ ಸೋಷಿಯಲ್ ಮಿಡಿಯಾ ಸ್ಟಾರ್. ಕುಂಭಮೇಳದಲ್ಲಿ ಮಣಿಸರ ಮಾರ್ತಾ ಇದ್ದ ಈಕೆಯ ಸ್ನಿಗ್ದ ಸೌಂದರ್ಯ ಕಂಡ ಯುಟ್ಯೂಬರ್ ಒಬ್ರು ಈಕೆಯ ಇಂಟರ್ವ್ಯೂ ಮಾಡಿದ್ರು. ಈ ಹುಡುಗಿಯ ತುಂಟು ಕಂಗಳ ಆಕರ್ಷಣೆ ಎಲ್ಲರಿಗೂ ಮೋಡಿ ಮಾಡಿಬಿಟ್ತು. ಕುಂಭಮೇಳದ ಮೋನಾಲಿಸಾ ರಾತ್ರೋ ರಾತ್ರಿ ಫೇಮಸ್ ಆಗಿಬಿಟ್ಳು.
ಮಹಾಕುಂಭ ಮೇಳದಲ್ಲಿ ಭಾಗಿಯಾದ ಸಾಧುಸಂತರ ಬಗ್ಗೆ 'ಹೀಗೆ' ವೈರಲ್ ಆಗ್ತಿದೆ!
ಈ ಹುಚ್ಚು ಜನಪ್ರಿಯತೆ ಆರಂಭದಲ್ಲಿ ಮೋನಾಲಿಸಾಗೆ ಕಿರಿಕಿರಿ ತಂದರೂ ಕ್ರಮೇಣ ಇದಕ್ಕೆ ಈಕೆನೂ ಒಗ್ಗಿಕೊಳ್ತಾ ಇದ್ದಾಳೆ. ಇದೀಗ ತನ್ನದೇ ಸೋಷಿಯಲ್ ಮಿಡಿಯಾ ಖಾತೆ ಓಪನ್ ಮಾಡಿರೋ ಈಕೆ ಪ್ರಾಡೆಕ್ಟ್ ವೊಂದರ ಮಾಡೆಲಿಂಗ್ ಮಾಡೋದಕ್ಕೆ ಓಕೆ ಅಂದಿದ್ದಾಳೆ. ಅಷ್ಟೇ ಅಲ್ಲ ಮೇಕಪ್ ಮಾಡಿಕೊಂಡು 'ಹೆಂಗೇ ಸ್ವಾಮಿ' ಅಂತ ಪೋಸ್ ಕೂಡ ಕೊಟ್ಟಿದ್ದಾಳೆ. ಆದರೆ, ಮೊನಾಲಿಸಾ ಈ ಅವತಾರಕ್ಕೆ ಸೋಷಿಯಲ್ ಮೀಡಿಯಾ ಮೂಗು ಮುರಿದಿದೆ. ಕಾರಣ, ಸಹಜ ಸುಂದರಿ ಹಾಗೇ ಇರ್ಬೇಕು, ಯಾಕೆ ಈ ಥರ ಮೇಕಪ್ ಬೇಕು ಎಂದು ಪ್ರಶ್ನಿಸಿದ್ದಾರೆ ಅನೇಕರು!
ಇನ್ನೂ ಸಿನಿಮಾದಲ್ಲಿ ಆಫರ್ ಸಿಕ್ರೆ ನಟಿಸೋದಕ್ಕೂ ಸೈ ಅಂದಿರೋ ಮೋನಾಲಿಸಾ, ತನಗೆ ಐಶ್ವರ್ಯ ರೈ ತರಹ ದೊಡ್ಡ ನಟಿಯಾಗೋ ಕನಸಿದೆ ಅಂದಿದ್ದಾಳೆ. ಒಟ್ನಲ್ಲಿ ರಸ್ತೆ ಬದಿ ಮಣಿ ಮಾರ್ತಿದ್ದ ಹುಡುಗಿ ಈಗ ಬಾಲಿವುಡ್ ನಟಿಯಾಗೋದಕ್ಕೆ ಸಜ್ಜಾಗಿದ್ದಾಳೆ. ಇಷ್ಟು ದಿನ ಈಕೆಯನ್ನ ಮೆರೆಸಿದ ಸೋಷಿಯಲ್ ಮಿಡಿಯಾ ಮುಂದೆಯೂ ಕೈ ಹಿಡಿಯುತ್ತಾ ಅಥವಾ ಮರೆತು ಮತ್ತೊಬ್ಬ ಮೋನಾಲಿಸಾಳ ಹಿಂದೆ ಬೀಳುತ್ತಾ ಕಾದುನೋಡಬೇಕು.
ಅಮ್ಮ-ಮಗಳ ವಿಡಿಯೋ ವೈರಲ್, ಸುಧಾರಾಣಿ 'ಜಿಂಗಿ ಚಕ್ಕ' ಕಂಡು ಕರ್ನಾಟಕವೇ ಶಾಕ್!

