ಒಂದು ಬಿಳಿ ಶರ್ಟ್, ಪಂಚೆ ಉಟ್ಕೊಂಡು ಬರೋರು.. ಅವ್ರ ಆಸೆಗಳೂ ತುಂಬಾ ಕಡಿಮೆ, ಡಿಮಾಂಡ್‌ಗಳೂ ತುಂಬಾ ಕಡಿಮೆ.. ಊಟವೊಂದು ಬಿಟ್ರೆ ಮಿಕ್ಕಿದ್ದು ಏನೂ ಬೇಕಾಗಿರ್ಲಿಲ್ಲ ಅವ್ರಿಗೆ.. ಅವ್ರಿಗೆ ಯಾವುದೇ...
ನಿರೂಪಕಿ ರಾಪಿಡ್ ರಶ್ಮಿ (Anchor Rapid Rashmi) ಶೋದಲ್ಲಿ ಕನ್ನಡದ ಹಿರಿಯ ನಟ ಅವಿನಾಶ್ (Avinash) ಅವರು ತುಂಬಾ ಮುಖ್ಯ ಎನ್ನಿಸುವ ಮಾತನ್ನಾಡಿದ್ದಾರೆ. ಅದಕ್ಕೂ ಮೊದಲು ಆಂಕರ್ 'ಬಹಳಷ್ಟನ್ನು ಬೆನ್ನಟ್ಟಿ ಹೋದರೆ ನಾವು ಅದಕ್ಕೂ ಹೆಚ್ಚು ಕಳೆದುಕೊಳ್ತೀವಿ..' ಅಂತ ಹೇಳ್ತಾರೆ. ಆಗ ಹಿರಿಯ ನಟ ಅವಿನಾಶ್ ಅವರು 'ಅದಕ್ಕೇ ಅಣ್ಣಾವ್ರ ತರದವರು ಎನ್‌ಲೈಟನ್ಡ್ ಆಗ್ಬಿಟ್ರು..
ಅದಕ್ಕೇ ಡಾ ರಾಜ್‌ಕುಮಾರ್ (Dr Rajkumar) ಅವ್ರು ದೇವ್ರ ಥರ ಆಗ್ಬಿಟ್ಟರು ಅವ್ರು.. ಯಾವುದೂ ಬೇಡವಾಗಿತ್ತು ನೋಡಿ ಅವ್ರಿಗೆ.. ಈ ಮಟೀರಿಯಲಿಸ್ಟಿಕ್ ಜೀವನದಲ್ಲಿ ಯಾವುದೂ ಬೇಡವಾಗಿತ್ತು ನೋಡಿ.. ನಾನು ನೋಡಿದೀನಿ ಪರ್ಸನಲ್ ಆಗಿ..'ಎಂದಿದ್ದಾರೆ ನಟ ಅವಿನಾಶ್. ಅವಿನಾಶ್ ಅವರ ಈ ಮಾತಿಗೆ ನಿರೂಪಕಿ ರಾಪಿಡ್ ರಶ್ಮಿ..'ಅಂದ್ರೆ, ಅದನ್ನು ಸ್ವಲ್ಪ ವಿವರಿಸಿ ಹೇಳಿ' ಅನ್ನೋ ಅರ್ಥದಲ್ಲಿ ಹೇಳಿದ್ದಾರೆ. ಅದಕ್ಕೆ ಅವಿನಾಶ್ ಅವರು 'ಜೇಬಲ್ಲಿ ಒಂದು ಪೈಸಾ ಇರ್ತಿರಲಿಲ್ಲ..
ಅಪ್ಪು-ಅಪ್ಪಾಜಿ ಸೀಕ್ರೆಟ್ ಬಿಚ್ಚಿಟ್ಟ ರಾಘಣ್ಣ: ಅದೆಷ್ಟೋ ಗುಟ್ಟು ಜಗತ್ತಿಗೆ ಗೊತ್ತೇ ಇಲ್ಲ! ಇಲ್ನೋಡಿ..
ಒಂದು ಬಿಳಿ ಶರ್ಟ್, ಪಂಚೆ ಉಟ್ಕೊಂಡು ಬರೋರು.. ಅವ್ರ ಆಸೆಗಳೂ ತುಂಬಾ ಕಡಿಮೆ, ಡಿಮಾಂಡ್‌ಗಳೂ ತುಂಬಾ ಕಡಿಮೆ.. ಊಟವೊಂದು ಬಿಟ್ರೆ ಮಿಕ್ಕಿದ್ದು ಏನೂ ಬೇಕಾಗಿರ್ಲಿಲ್ಲ ಅವ್ರಿಗೆ.. ಅವ್ರಿಗೆ ಯಾವುದೇ ಅತಿಯಾದ ಆಸೆ ಇರಲಿಲ್ಲ.. ಅವ್ರೇ ಹೇಳ್ತಿದ್ರಲ್ಲಾ ಅಣ್ಣಾವ್ರು.. ನಾನು ಊರಲ್ಲಿ ಎಮ್ಮೆ ಕಾಯ್ತಾ ಇದ್ದೆ ಅಂತ.. ಆದ್ರೆ, ಜೀವನದಲ್ಲಿ ಅವ್ರು ಅದೆಷ್ಟು ಎತ್ತರಕ್ಕೆ ಏರಿದ್ರು ನೋಡಿ..
ಅವ್ರು ಮಾತಾಡೋ ರೀತಿ, ಅವ್ರ ಸಂಸ್ಕಾರ.. ಅವ್ರು ಜನ್ರ ಜೊತೆ ಮಾತಾಡೋ ರೀತಿ ಎಲ್ಲವೂ ಸೋ ಕ್ಲಾಸಿ..' ಎಂದಿದ್ದಾರೆ ನಟ ಅವಿನಾಶ್. ಹೌದು, ಅಣ್ಣಾವ್ರು ಇದ್ದ ರೀತಿನೇ ಬೇರೆ.. ಅವರ ಜೀವನ ಸರಳ ಹಾಗೂ ಸುಂದರ.. ಅವರು ಶುರುವಿನಲ್ಲಿ ಎಲ್ಲರಂತೆ ಸಾಮಾನ್ಯವಾಗೇ ಇದ್ದರು. ಆದರೆ, ವರ್ಷಗಳು ಕಳೆದಂತೆ ಅವರು ಎತ್ತರೆತ್ತರಕ್ಕೆ ಏರುತ್ತಾ ನಡೆದುಬಿಟ್ಟರು.
ಸಾವಿಗೂ ಮೊದಲು ಮಾಲಾಶ್ರೀಗೆ ಪುನೀತ್ ಹೇಳಿದ್ದು: ನೀವು ದುರ್ಗಿ, ಚಾಮುಂಡಿ ತರ ಇರ್ಬೇಕು!
ಅದೇ ಡಾ ರಾಜ್‌ಕುಮಾರ್ ವಿಶೇಷತೆ.. ಗಾಜನೂರಿನಲ್ಲಿ ಸಾಮಾನ್ಯರಲ್ಲಿ ಸಾಮಾನ್ಯ ಎಂಬಂತೆ ಹುಟ್ಟಿ, ಬಳಿಕ ನಾಟಕರಂಗಕ್ಕೆ ಬಂದು, ಅಲ್ಲಿಂದ ಸಿನಿಮಾರಂಗಕ್ಕೆ ಕಾಲಿಟ್ಟು, ಬಳಿಕ ಅವರು 200ಕ್ಕೂಹೆಚ್ಚು ಸಿನಿಮಾಗಳಲ್ಲಿ ನಟಿಸಿದ್ದಾರೆ. ದಾದಾ ಸಾಹೇಬ್ ಫಾಲ್ಕೆ, ಪದ್ಮಭೂಷಣ, ಕರ್ನಾಟಕ ರತ್ನ ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಶಸ್ತಿ-ಪುರಸ್ಕಾರಗಳನ್ನು ಪಡೆದು ಕರುನಾಡಿನ 'ಅಣ್ಣಾವ್ರು' ಎನ್ನಿಸಿದ್ದಾರೆ ಡಾ ರಾಜ್‌ಕುಮಾರ್. ಅಂಥವರ ಬಗ್ಗೆ ಹಿರಿಯ ನಟ ಅವಿನಾಶ್ ಅವರು ತಮಗೆ ಗೊತ್ತಿರುವ ಸೀಕ್ರೆಟ್ ಹೇಳಿದ್ದಾರೆ.

