Asianet Suvarna News Asianet Suvarna News

ಪೊಲೀಸರ ಮುಂದೆ ಹೇಳಿಕೆ ಕೊಟ್ಟ ನಟ ದರ್ಶನ್: ಮಹಿಳೆಗೆ ನಾಯಿ ಕಚ್ಚಿದಾಗ ಸಿಸಿಟಿವಿ ವರ್ಕ್‌ ಆಗ್ತಿರಲಿಲ್ಲ

ನಮ್ಮ ಮನೆಯ ಸಾಕುನಾಯಿ ಮಹಿಳೆಗೆ ಕಚ್ಚಿದ ದಿನ ಸಿಸಿಟಿವಿ ವರ್ಕ್‌ ಆಗುತ್ತಿರಲಿಲ್ಲ. ನಮ್ಮ ಹುಡುಗರು ನಾಯಿಗಳನ್ನು ಸರಿಯಾಗಿ ಮೆಂಟೇನ್‌ ಮಾಡಿಲ್ಲ ಎಂದು ನಟ ದರ್ಶನ್‌ ತಿಳಿಸಿದರು. 

Sandalwood Actor Darshan gave statement about dog bite case in front of bengaluru police sat
Author
First Published Nov 15, 2023, 2:31 PM IST

ಬೆಂಗಳೂರು (ನ.15): ನಮ್ಮ ಮನೆಯ ಸಾಕು ನಾಯಿ ಘಟನೆ ನಡೆದಾಗ ನಾನು ಗುಜರಾತ್‌ನಲ್ಲಿ ಸಿನಿಮಾ ಶೂಟಿಂಗ್‌ನಲ್ಲಿದ್ದೆನು. ಆಗ ಸಿಸಿಟಿವಿ ವರ್ಕ್‌ ಆಗುತ್ತಿರಲಿಲ್ಲ. ಆದ್ದರಿಂದ ಸಿಸಿಟಿವಿ ಫೂಟೇಜ್‌ ನಮ್ಮಬಳಿಯಿಲ್ಲ. ಘಟನೆ ನಡೆದ ನಂತರ ಸಿಸಿಟಿವಿ ಅಳವಡಿಕೆ ಮಾಡಲಾಗಿದೆ ಎಂದು ನಟ ದರ್ಶನ್‌ ಪೊಲೀಸರ ಮುಂದೆ ಹೇಳಿಕೆ ದಾಖಲಿಸಿದ್ದಾರೆ.

ನಟ ದರ್ಶನ್‌ ಅವರ ಸಾಕು ನಾಯಿ ಕಚ್ಚಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಎರಡು ಬಾರಿ ನೋಟಿಸ್‌ ನೀಡಿದ ನಂತರ ರಾಜರಾಜೇಶ್ವರಿ ನಗರ ಪೊಲೀಸ್‌ ಠಾಣೆಗೆ ಹಾಜರಾದ ನಟ ದರ್ಶನ್‌ ಅವರು ಹೇಳಿಕೆ ದಾಖಲಿಸಿದ್ದಾರೆ. ನಮ್ಮ ಮನೆಯ ಸಾಕುನಾಯಿ ಕಚ್ಚಿದ ಘಟನೆ ನಡೆದಾಗ ನಾನು ಬೆಂಗಳೂರಿನಲ್ಲಿ ಇರಲಿಲ್ಲ. ಆಗ ನಾನು ಗುಜರಾತಿನನ್ನು ಸಿನಿಮಾ ಶೂಟಿಂಗ್‌ನಲ್ಲಿದ್ದೆನು. ನಮ್ಮ ಹುಡುಗರಿಗೆ ಹೇಳಿದ್ದೆನು. ಸರಿಯಾಗಿ ಮೆಂಟೈನ್ ಮಾಡಿ ಅಂತ ಅವರು ಸರಿಯಾಗಿ ಮೆಂಟೈನ್ ಮಾಡಿಲ್ಲ.

ನಟ ದರ್ಶನ್‌ ಮೇಲೆ ದೂರು ಕೊಟ್ಟ ಮಹಿಳೆಗೆ ಪೊಲೀಸರಿಂದಲೇ ಕಿರುಕುಳ?

ಆದರೆ, ಗಾಯಾಳುಗೆ ಚಿಕಿತ್ಸೆ ಕೊಡಿಸಿ ಅಂತ ಅವರಿಗೆ ಹೇಳಿದ್ದೇನೆ ಎಂದು ತನಿಖಾಧಿಕಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಶಿವಕುಮಾರ್‌ ಮುಂದೆ ಹೇಳಿಕೆ ದಾಖಲಿಸಿದ್ದಾರೆ.
ಪೊಲೀಸರು ಘಟನೆಯ ದಿನದ ಸಿಸಿಟಿವಿ ಪುಟೇಜ್ ಸಹ ಕೇಳಿದ್ದರು. ಆದರೆ, ಘಟನೆಯಾದ ದಿನ ಸಿಸಿಟಿವಿ ವರ್ಕಿಂಗ್ ಇರಲಿಲ್ಲ. ಆರ್. ಆರ್. ನಗರ ನಿವಾಸದಲ್ಲಿ ಹೆಚ್ಚಾಗಿ ನಾನು ಇರೋದಿಲ್ಲ. ಬರ್ತಡೆಯ ಸಂದರ್ಭದಲ್ಲಿ ಮಾತ್ರ ಸಿಸಿಟಿವಿ ಹಾಕಿಸಿರ್ತೀವಿ. ಆದರೆ, ಈಗ ನಾಯಿ ಕಚ್ಚಿದ ಘಟನೆ ನಡೆದ ನಂತರ ಸಿಸಿಟಿವಿ ಅಳವಡಿಸಿದ್ದೇವೆ. ಈ ರೀತಿಯ ಘಟನೆ ಮತ್ತೆ ಮರುಕಳಿಸದಂತೆ ಎಚ್ಚರ ವಹಿಸುತ್ತೇನೆ ಎಂದು ನಟ ದರ್ಶನ್‌ ಪೊಲೀಸರ ಮುಂದೆ ಹೇಳಿಕೆ ನೀಡಿದ್ದಾರೆ. ಕೇವಲ 15 ನಿಮಿಷದಲ್ಲಿ ಹೇಳಿಕೆಯನ್ನು ದಾಖಲಿಸಿದರು.

ದರ್ಶನ್‌ ಮನೆಮುಂದೆ ಕಾರು ನಿಲ್ಸಿದ್ದೇ ತಪ್ಪಾಯ್ತು: ಮಹಿಳೆಯೆಂದೂ ನೋಡದೆ ಅಮಾನವೀಯ ಕೃತ್ಯವೆಸಗಿದರು

ದರ್ಶನ್ ಆರ್ ಆರ್ ನಗರ ಠಾಣೆಗೆ ಹಾಜರಾದ ಹಿನ್ನಲೆಯಲ್ಲಿ ಪೊಲೀಸ್‌ ಠಾಣೆ ಬಳಿ ಅಭಿಮಾನಿಗಳ ದಂಡು ಆಗಮಿಸಿತ್ತು. ಪುಷ್ಪಗುಚ್ಚ ಹಿಡಿದು ಆಗಮಿಸಿರುವ ದರ್ಶನ್ ಅಭಿಮಾನಿಗಳು. ಆದರೆ, ಯಾರ ಬಳಿಯೂ ನಿಂತು ಮಾತನಾಡದೇ ಸೀದಾ ಪೊಲೀಸ್‌ ಠಾಣೆಯೊಳಗೆ ಹೋದ ನಟ ದರ್ಶನ್‌ 15 ನಿಮಿಷದಲ್ಲೇ ವಿಚಾರಣೆ ಮುಗಿಸಿ ಹೊರಟು ಹೋದರು. ಈ ವೇಳೆ ಮಾಧ್ಯಮಗಳಿಗೂ ಯಾವುದೇ ಪ್ರತಿಕ್ರಿಯೆ ನೀಡಲಿಲ್ಲ. ಇನ್ನು ಅಭಿಮಾನಿಗಳು ಗಂಟೆಗಟ್ಟಲೆ ಕಾಯುತ್ತಾ ನಿಂತಿದ್ದರೂ ಪೊಲೀಸ್‌ ಠಾಣೆ ಮುಂದೆ ಯಾಋಒಬ್ಬರನ್ನೂ ಮಾತನಾಡಿಸದೇ ಅಲ್ಲಿಂದ ಹೊರಟರು. 

Follow Us:
Download App:
  • android
  • ios