ದರ್ಶನ್ ಮನೆಮುಂದೆ ಕಾರು ನಿಲ್ಸಿದ್ದೇ ತಪ್ಪಾಯ್ತು: ಮಹಿಳೆಯೆಂದೂ ನೋಡದೆ ಅಮಾನವೀಯ ಕೃತ್ಯವೆಸಗಿದರು
ನಟ ದರ್ಶನ್ ಮನೆಯೆಂದು ಗೊತ್ತಿಲ್ಲದೇ ಕಾರು ನಿಲ್ಲಿಸಿದ್ದೇ ತಪ್ಪಾಯ್ತು, ಮಹಿಳೆಯೆಂದೂ ನೋಡದೇ ದರ್ಶನ್ ಮನೆಯ ಸಿಬ್ಬಂದಿ ಅಮಾನವೀಯ ಕೃತ್ಯ ಎಸಗಿದರು.
ಬೆಂಗಳೂರು (ಅ.31): ನಟ ದರ್ಶನ್ ಮನೆ ಎಂಬುದು ಗೊತ್ತಿಲ್ಲದೇ ಕಾರನ್ನು ಪಾರ್ಕಿಂಗ್ ಮಾಡಿ ಹೋಗಿದ್ದು, ವಾಪಸ್ ಬಂದು ಕಾರನ್ನು ತೆಗೆಯುವಾಗ ದರ್ಶನ್ ಮನೆಯ ಸಿಬ್ಬಂದಿ ಗಲಾಟೆ ಮಾಡಿದರು. ನಂತರ ನಾಯಿಯನ್ನು ಛೂ ಬಿಟ್ಟು ನನಗೆ ಕಚ್ಚಿಸಿ ವಿಕೃತಿ ಮೆರೆದಿದ್ದಾರೆ ಎಂದು ಸಂತ್ರಸ್ತ ಮಹಿಳೆ ಅಮಿತ್ ಜಿಂದಾಲ್ ಅಳಲು ತೋಡಿಕೊಂಡಿದ್ದಾರೆ.
ಈ ಕುರಿತು ಏಷ್ಯಾನೆಟ್ ಸುವರ್ಣ ನ್ಯೂಸ್‌ನೊಂದಿಗೆ ಮಾತನಾಡಿದ ಸಂತ್ರಸ್ಥ ಮಹಿಳೆ ಅಮಿತಾ ಜಿಂದಾಲ್ ಅವರು, ಸ್ಪರ್ಶ ಆಸ್ಪತ್ರೆಯಲ್ಲಿ ಕಾರ್ಯಕ್ರಮ ಇತ್ತು. ಅಲ್ಲಿ ಪಾರ್ಕ್ ಮಾಡಿ ಹೋಗೋ ಅಷ್ಟರಲ್ಲಿ ಲೇಟ್ ಆಗುತ್ತೆ ರಸ್ತೆಯ ಬದಿಯಲ್ಲಿ ಪಾರ್ಕ್ ಮಾಡಿದೆ. ಅಂದರೆ ದರ್ಶನ್ ಮನೆ ಬಳಿಯೇ ಕಾರನ್ನು ಪಾರ್ಕ್ ಮಾಡಿದೆ. ಕಾರನ್ನು ಪಾರ್ಕ್ ಮಾಡುವ ವೇಳೆ ಯಾರು ಇರಲಿಲ್ಲ. ನಂತರ ಕಾರ್ಯಕ್ರಮ ಮುಗಿಸಿಕೊಂಡು ಕಾರನ್ನು ಮತ್ತೆ ತೆಗೆಯಲು ಹೋದಾಗ ದರ್ಶನ್ ಮನೆಯ ಸಿಬ್ಬಂದಿ ಅಲ್ಲಿದ್ದರು. ಕಾರನ್ನು ಮನೆಯ ಮುಂದೆ ನಿಲ್ಲಿಸಿದ್ದಕ್ಕೆ ದರ್ಶನ್ ಮನೆಯ ಸಿಬ್ಬಂದಿ ನಮ್ಮ ಮೇಲೆ ಗಲಾಟೆ ಮಾಡೋಕೆ ಬಂದರು.
ನಟ ದರ್ಶನ್ ಮೇಲೆ ದಾಖಲಾಯ್ತು ಎಫ್‌ಐಆರ್: ಹರಿದ ಬಟ್ಟೆಯಲ್ಲಿ ಬಂದು ದೂರು ಕೊಟ್ಟ ಮಹಿಳೆ
ನನಗೆ ಕಚ್ಚುವಂತೆ ನಾಯಿ ಛೂ ಬಿಟ್ಟ ದರ್ಶನ್ ಮನೆ ಸಿಬ್ಬಂದಿ: ಕಾರು ನಿಲುಗಡೆ ವಿಚಾರಕ್ಕೆ ಗಲಾಟೆ ಮಾಡುವಾಗ ಕೈಯಲ್ಲಿ ನಾಯಿಗಳನ್ನು ಹಿಡಿದುಕೊಂಡಿದ್ದರು. ಈ ವೇಳೆ ಒಂದು ನಾಯಿ ನನ್ನ ಮೇಲೆ ಅಟ್ಯಾಕ್ ಮಾಡಲು ಮುಂದಾಯ್ತು. ಈ ವೇಳೆ ನಾಯಿಯನ್ನು ಹಿಡಿದುಕೊಳ್ಳಿ ಎಂದು ಮನವಿ ಮಾಡಿದೆನು. ಆದರೂ, ನೀನ್ಯಾಕೆ ಇಲ್ಲಿ ನಿನ್ನ ಕಾರನ್ನು ಪಾರ್ಕ್ ಮಾಡಿದೆ ಅಂತ ಗಲಾಟೆ ಮಾಡಿದರು. ನಾನು ಕಾರನ್ನು ತೆಗೆದುಕೊಳ್ಳಲು ಮುಂದಾದಾಗ ನನ್ನ ಮೇಲೆ ದಾಳಿ ಮಾಡುವಂತೆ ನಾಯಿಗೆ ಸೂಚನೆ ನೀಡಿ ಛೂ ಬಿಟ್ಟರು. ಮಾಲೀಕನ ಸೂಚನೆ ಮೇರೆಗೆ ನಾಯಿ ಬಂದು ದಾಳಿ ಮಾಡಿ, ಹೊಟ್ಟೆ ಹಾಗೂ ಇತರೆ ಭಾಗಕ್ಕೆಲ್ಲಾ ಕಚ್ಚಿತು ಎಂದು ಅಳಲು ತೋಡಿಕೊಂಡರು.
ನಾಯಿ ಕಚ್ಚುತ್ತಿದ್ದರೂ ನೋಡುತ್ತಾ ನಿಂತು ವಿಕೃತಿ ಮೆರೆದರು: ನನಗೆ ನಾಯಿ ಕಚ್ಚುವ ವೇಳೆ ನನ್ನ ಸ್ನೇಹಿತೆಯ ಮಗ ಕೂಡ ಜೊತೆಗಿದ್ದನು. ನನಗೆ ನಾಯಿ ಕಚ್ಚುವಾಗ ಸ್ನೇಹಿತೆಯ ಮಗ ನನ್ನನ್ನು ರಕ್ಷಣೆ ಮಾಡಲು ಮುಂದಾದರೂ, ದರ್ಶನ್ ಮನೆಯ ಸಿಬ್ಬಂದಿ ನಾಯಿ ಅಟ್ಯಾಕ್ ಮಾಡಲು ಬಿಟ್ಟು ಸುಮ್ಮನೆ ನಿಂತಿದ್ದರು. ಕೊನೆಗೆ, ಮಾನವೀಯತೆಯಿಂದಲೂ ಅವರು ನಮ್ಮನ್ನು ಆಸ್ಪತ್ರೆಗೆ ಸೇರಿಸಲಿಲ್ಲ. ಈ ಘಟನೆಯಿಂದ ನಾನು ಗಾಬರಿ ಆಗಿ ಬಿಟ್ಟೆನು. ಕ್ಷಣಮಾತ್ರದಲ್ಲಿ ನನ್ನ ಮೇಲೆ ನಾಯಿಗಳು ದಾಳಿ ಮಾಡಿ ಘಾಸಿಗೊಳಿಸಿತ್ತು. ಅಲ್ಲಿಂದ ಸೀದಾ ನಾನು ಆರ್.ಆರ್. ನಗರ ಪೊಲೀಸ್ ಠಾಣೆಗೆ ಹೋಗಿ ದೂರನ್ನು ಕೊಟ್ಟೆನು. ಆಗ ಪೊಲೀಸರು ಇಮಿಡಿಯೆಟ್ ಆಗಿ ದೂರನ್ನು ಸ್ವೀಕರಿಸಿದರು ಎಂದು ಸಂತ್ರಸ್ತ ಮಹಿಳೆ ಹೇಳಿದರು.
ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಹೆಸರಲ್ಲಿ 'ಹೃದಯ ಜ್ಯೋತಿ ಯೋಜನೆ ' ಆರಂಭ: ಹೃದಯಾಘಾತಕ್ಕೆ ಆಗುವುದೇ ಪರಿಹಾರ!