Asianet Suvarna News Asianet Suvarna News

ನಟ ದರ್ಶನ್‌ ಮೇಲೆ ದೂರು ಕೊಟ್ಟ ಮಹಿಳೆಗೆ ಪೊಲೀಸರಿಂದಲೇ ಕಿರುಕುಳ?

ನಟ ದರ್ಶನ್‌ ಅವರ ಸಿಬ್ಬಂದಿ ನಾಯಿಯನ್ನು ಬಿಟ್ಟು ಕಚ್ಚಿಸಿ ಕೊಲೆಗೆ ಯತ್ನಿಸಿದ ದೂರು ಕೊಟ್ಟಿದ್ದಕ್ಕೆ ಪೊಲೀಸರೇ ನನಗೆ ಕಿರುಕುಳ ನೀಡುತ್ತಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. 

Sandalwood actor Darshan against complained woman has harassed by the police sat
Author
First Published Nov 7, 2023, 9:48 AM IST

ಬೆಂಗಳೂರು (ನ.07): ಸ್ಯಾಂಡಲ್‌ವುಡ್‌ ನಟ ದರ್ಶನ್‌ ಅವರು ಸಾಕಿದ್ದ ನಾಯಿಯನ್ನು ಬಿಟ್ಟು ಕಚ್ಚಿದಿದ್ದಾರೆ ಎಂದು ಕೊಲೆ ಯತ್ನದ ದೂರು ಕೊಟ್ಟಿದ್ದರಿಂದ ನನ್ನ ಮೇಲೆಯೇ ಪೊಲೀಸರು ಕಿರುಕುಳ ನೀಡುತ್ತಿದ್ದಾರೆಂದು ದೂರುದಾರ ಮಹಿಳೆ ಆರೋಪಿಸಿದ್ದಾರೆ. ನಾನು ಕೊಟ್ಟಂತೆ ದೂರು ದಾಖಲಿಸಿಕೊಳ್ಳದೇ, ಒತ್ತಡಕ್ಕೆ ಸಿಲುಕಿ ಸುಖಾಸುಮ್ಮನೆ ನನ್ನ ಕೆಲಸಕ್ಕೆ ತೊಂದರೆ ನೀಡುತ್ತಿದ್ದಾರೆಂದು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ನಟ ದರ್ಶನ್ ನಾಯಿ ಕಚ್ಚಿದ್ದ ಪ್ರಕರಣದ ಕುರಿತು ಮಂಗಳವಾರ ವಿಚಾರಣೆಗೆಂದು ಪೊಲೀಸ್‌ ಠಾಣೆಗೆ ಹಾಜರಾಗಿ ನಂತರ ಮಾಧ್ಯಮಗಳೊಂದಿಗೆ ಮಾತನಾಡಿದ ಮಹಿಳೆ ಅಮಿತಾ ಜಿಂದಾಲ್‌ ಅವರು, ನಾನು ಬೆಳಗ್ಗೆಯೇ ಠಾಣೆಗೆ ಬಂದರೂ ಯಾರು ಸರಿಯಾಗಿ ಸ್ಪಂದಿಸುತ್ತಿಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ. ದರ್ಶನ್ ದೊಡ್ಡ ವ್ಯಕ್ತಿಯಾಗಿದ್ದು, ಪೊಲೀಸರ ಮೇಲೆ ಒತ್ತಡ ಹೇರಿದ್ದಾರೆ ಅನಿಸುತ್ತದೆ. ನಾಯಿಗಳನ್ನು ಬೇಕು ಅಂತಾನೆ ನನ್ನ ಮೇಲೆ ಅಟ್ಯಾಕ್ ಮಾಡಿಸಿದ್ದಾರೆ. ಈ ಕುರಿತು 307 ಕೇಸ್ ಹಾಕಿ ಅಂತ ಪೊಲೀಸರಿಗೆ ಕೇಳಿಕೊಂಡಿದ್ದೆನು. ಆದರೂ, ಪೊಲೀಸರು 307 ಕೇಸ್ ಹಾಕಿಲ್ಲ ಎಂದು ಆರೋಪಿಸಿದರು.

ದರ್ಶನ್‌ ಮನೆ ನಾಯಿ ಕಚ್ಚಿದ ಪ್ರಕರಣ: ಹೀಗೇ ಆದರೆ ಕೋರ್ಟಿಗೆ ಹೋಗುವೆ ಎಂದ ದೂರುದಾರೆ!

ಕೆಲಸದ ಅವಧಿಯಲ್ಲಿ ಪೊಲೀಸ್‌ ಠಾಣೆಗೆ ಕರೆಸಿ ಕಿರುಕುಳ: ಇಂದು (ಮಂಗಳವಾರ) ಬೆಳಗ್ಗೆ 9.30 ನಂತರ ವಿಚಾರಣಗೆ ಹಾಜರಾಗುವಂತೆ ಪೊಲೀಸರಿಂದ ಸೂಚನೆ ನೀಡಲಾಗಿತ್ತು. ಆದರೆ ನಾನು ಕೆಲಸಕ್ಕೆ ಹೋಗಬೇಕಲ್ಲವೇ? ಇದನ್ನು ಪೊಲೀಸರು ಏಕೆ ಅರ್ಥ ಮಾಡಿಕೊಳ್ಳುತ್ತಿಲ್ಲ. ಮಹಜರ್ ಹಿನ್ನಲೆ ಠಾಣೆಗೆ ಆಗಮಿಸುವಂತೆ ಪೊಲೀಸರು ತಿಳಿಸಿದಂತೆ ನಾನು ಬೆಳಗ್ಗೆಯೇ ಠಾಣೆಗೆ ಬಂದಿದ್ದೇನೆ. ಆದರೆ, ಈ ವೇಳೆ ಅಧಿಕಾರಿ ಇಲ್ಲದಿದ್ದರೆ ಬೇರೆವರ ಜೊತೆ ಕಳುಹಿಸೊದಾಗಿ ಹೇಳಿದ್ದಾರಂತೆ. ಆದರೆ ಇಲ್ಲಿ ನೋಡಿದರೆ ಯಾವಿಉದೇ ಅಧಿಕಾರಿಯ ಫೋನ್ ಕೂಡ ಕನೆಕ್ಟ್ ಆಗ್ತಿಲ್ಲ. ಮಹಜರ್‌ ಮಾಡುವವರು ಯಾರು? ನಾನು ಕೊಟ್ಟ ದೂರಿನ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ದರ್ಶನ್‌ ಮನೆಮುಂದೆ ಕಾರು ನಿಲ್ಸಿದ್ದೇ ತಪ್ಪಾಯ್ತು: ಮಹಿಳೆಯೆಂದೂ ನೋಡದೆ ಅಮಾನವೀಯ ಕೃತ್ಯವೆಸಗಿದರು

ಪೊಲೀಸ್‌ ಠಾಣೆಗೆ ಬಂದರೂ ಸ್ಪಂದಿಸುವ ಅಧಿಕಾರಿಯೇ ಇಲ್ಲ:  ಪೊಲೀಸರ ಸೂಚನೆಯಂತೆ ಠಾಣೆಗೆ ಬಂದರೂ ಇಲ್ಲಿ ಯಾರೊಬ್ಬರೂ ಸ್ಪಂದಿಸುತ್ತಿಲ್ಲ. ನಾನು ಕೆಲಸಕ್ಕೆ ಹೋಗುವ ಸಮಯವಾಗುತ್ತಿದೆ ಈಗ ನಾನೇನು ಮಾಡಲಿ ಎಂದು ಪೊಲೀಸ್‌ ಠಾಣೆಯಲ್ಲಿರುವ ಸಿಬ್ಬಂದಿಯನ್ನು ಪ್ರಶ್ನೆ ಮಾಡುತ್ತಿದ್ದಾರೆ. ಇನ್ನು ಬೆಳಗ್ಗೆಯೇ ಬಂದು ಪೊಲೀಸ್‌ ಠಾಣೆಯ ಬಾಗಿಲಲ್ಲಿ ದೂರುದಾರ ಮಹಿಳೆ ಕಾಯುತ್ತಿದ್ದಾರೆ. ಅಧಿಕಾರಿಗಳಿಗೆ ಮತ್ತೆ ಕರೆ ಮಾಡುವ ಯತ್ನ ಮಾಡಿದರೂ ಫೋನ್‌ ಸಂಪರ್ಕಕ್ಕೆ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಾರೆ. ಇನ್ನು ಈ ಹಿಂದೆಯೂ ನಟ ದರ್ಶನ್‌ನಿಂದ ಬಹುಶ ಪೊಲೀಸರಿಗೆ ಒತ್ತಡ ಇದೆಯಾ ಅಂತ ಅನಿಸುತ್ತದೆ ಎಂದು ತನಿಖೆ ಬಗ್ಗೆ ಮಹಿಳೆ ಅನುಮಾನ ವ್ಯಕ್ತಪಡಿಸಿದ್ದರು. 

Follow Us:
Download App:
  • android
  • ios