2026ಕ್ಕೆ ಹ್ಯಾಟ್ರಿಕ್ ಹೀರೋ ಶಿವಣ್ಣನ ‘ಎ ಫಾರ್ ಆನಂದ್’, ‘ಡ್ಯಾಡಿ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬಹುದು. ಡಾಲಿ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’, ‘ಜಿಂಗೋ’ ಸಿನಿಮಾಗಳು ಬರಬಹುದು.

1. ಟಾಕ್ಸಿಕ್ : ಕೆಜಿಎಫ್ 2 ಭರ್ಜರಿ ಯಶಸ್ಸಿನ ಬಳಿಕ ಬರುತ್ತಿರುವ ಯಶ್ ಸಿನಿಮಾ. ಮಾ19ಕ್ಕೆ ಬಹುಭಾಷೆಗಳಲ್ಲಿ ತೆರೆಗೆ ಬರುತ್ತಿದೆ. ಭಾರಿ ತಾರಾಗಣವಿದೆ. ಹಾಲಿವುಡ್‌ ತಂತ್ರಜ್ಞರು ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಮೇಕಿಂಗ್‌, ಕತೆ ಏನಿರಬಹುದು ಎನ್ನುವ ಕುತೂಹಲ ಇದೆ.

2. ಕೆಡಿ: ಜೋಗಿ ಪ್ರೇಮ್‌ ಹಾಗೂ ಧ್ರುವ ಸರ್ಜಾ ಕಾಂಬಿನೇಶನ್‌. ಸಂಜಯ್‌ ದತ್‌, ಶಿಲ್ಪಾ ಶೆಟ್ಟಿ ಹೀಗೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ಬೆಂಗಳೂರಿನ ಭೂತಗ ಲೋಕದ ಕತೆಯನ್ನು ಈ ಚಿತ್ರದಲ್ಲಿ ಹೇಳಿದ್ದಾರೆ. ಇನ್ನೂ ರಿಲೀಸ್ ದಿನ ಘೋಷಣೆ ಆಗಿಲ್ಲ.

3. ಲ್ಯಾಂಡ್ ಲಾರ್ಡ್‌: 70-80 ದಶಕದ ಕತೆಯನ್ನು ಒಳಗೊಂಡ ಸಿನಿಮಾ. ರಾಜ್‌ ಬಿ ಶೆಟ್ಟಿ ಹಾಗೂ ದುನಿಯಾ ವಿಜಯ್‌ ಮೊದಲ ಬಾರಿಗೆ ಜೊತೆಯಾಗಿ ನಟಿಸಿದ್ದಾರೆ. ರಚಿತಾ ರಾಮ್‌ ನಾಯಕಿ. ಕತೆ ಮತ್ತು ಮೇಕಿಂಗ್‌ ಕಾರಣಕ್ಕೆ ಕುತೂಹಲ ಮೂಡಿಸಿರುವ ಈ ಚಿತ್ರ ಜ.23ಕ್ಕೆ ತೆರೆಗೆ ಬರುತ್ತಿದೆ.

4. ಬಿಲ್ಲಾ ರಂಗ ಬಾಷಾ: ಸುದೀಪ್ ನಟನೆಯ ಅದ್ದೂರಿ ಬಜೆಟ್ ಸಿನಿಮಾ. ಖುದ್ದು ಸುದೀಪ್ ಅವರೇ ಈ ಸಿನಿಮಾ ಈ ವರ್ಷ ಬರಬಹುದು ಎಂದು ತಿಳಿಸಿದ್ದಾರೆ. ಸುದೀಪ್ ಅವರು ಸೆಟ್‌ಗೆ ಬರುವುದಕ್ಕೆ ನಿರ್ದೇಶಕ ಅನೂಪ್‌ ಭಂಡಾರಿ ಕಾಯುತ್ತಿದ್ದಾರೆ.

5. 666 ಆಪರೇಷನ್ ಡ್ರೀಮ್ ಥಿಯೇಟರ್: ಯಶಸ್ವಿ ನಿರ್ದೇಶಕ ಹೇಮಂತ್‌ ರಾವ್‌, ಸೆಂಚುರಿ ಸ್ಟಾರ್‌ ಶಿವರಾಜ್‌ಕುಮಾರ್‌, ಡಾಲಿ ಧನಂಜಯ ಸಿನಿಮಾ. ರೆಟ್ರೋ ಸ್ಟೈಲಿನ ಚಿತ್ರ. ಹೆಸರಿನಿಂದಲೇ ಗಮನ ಸೆಳೆದಿದೆ.

6. ಭಾರ್ಗವ: ವರ್ಷದ ಮಧ್ಯಮ ಭಾಗದಲ್ಲಿ ಬರಲಿರುವ ಚಿತ್ರವಿದು. ನಿರ್ದೇಶಕ ನಾಗಣ್ಣ ಹಾಗೂ ಉಪೇಂದ್ರ ಅವರದ್ದು ಸಕ್ಸಸ್‌ ಜೋಡಿ. ತುಂಬಾ ವರ್ಷಗಳ ನಂತರ ಇವರ ಸಾರಥ್ಯದಲ್ಲಿ ಮತ್ತೆ ಸಿನಿಮಾ ಬರುತ್ತಿದೆ. ಸೂರಪ್ಪ ಬಾಬು ನಿರ್ಮಾಪಕರು.

7. ಕರಾವಳಿ: ಪ್ರಜ್ವಲ್‌ ದೇವರಾಜ್‌ ಯಕ್ಷಗಾನದ ಮಹಿಷಾಸುರ ಗೆಟಪ್‌ನಲ್ಲಿ, ರಾಜ್‌ ಬಿ ಶೆಟ್ಟಿ ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಇದು. ಕಂಬಳ ಹಿನ್ನೆಲೆಯ ಕತೆಯನ್ನು ಗುರುದತ್‌ ಗಾಣಿಗ ನಿರ್ದೇಶಿಸಿದ್ದಾರೆ.

8. ಮ್ಯಾಂಗೋ ಪಚ್ಚ: ಸುದೀಪ್‌ ಸೋದರಳಿಯ ಸಂಚಿತ್ ಸಂಜೀವ್ ನಟನೆಯ ಮೊದಲ ಸಿನಿಮಾ. ಚಿತ್ರದ ಟೀಸರ್‌, ಫಸ್ಟ್‌ ಲುಕ್ಕಿನ ಮೂಲಕ ಕತೆಯಲ್ಲಿ ವಿಶೇಷತೆ ಇದೆ ಎನ್ನುವ ಅಂದಾಜು ಪ್ರೇಕ್ಷಕರದ್ದು. ಜ.15ರಂದು ರಿಲೀಸ್‌ ಆಗುತ್ತಿದೆ.

9. ಉಗ್ರಾಯುಧಮ್ : 2026ರ ವರ್ಷದ ಕೊನೆಯಲ್ಲಿ ತೆರೆಗೆ ಬರಲಿರುವ ಶ್ರೀಮುರಳಿ ನಟನೆಯ ಚಿತ್ರವಿದು. ಇದರ ಜೊತೆ ಪರಾಕ್‌ ಸಿನಿಮಾ ಕೂಡ ಇದೆ. ಎರಡೂ ಅದ್ದೂರಿ ಸಿನಿಮಾಗಳಾಗಿದ್ದು, ಶ್ರೀಮುರಳಿ ನಿರೀಕ್ಷೆ ಇಟ್ಟುಕೊಂಡಿದ್ದಾರೆ.

10. ಕ್ರಿಮಿನಲ್‌: ಹಳ್ಳಿ ಹಿನ್ನೆಲೆಯ ಕತೆ. ಹೊಸ ನಿರ್ದೇಶಕ ರಾಜ್‌ಗುರು ಜೊತೆಗೆ ಧ್ರುವ ಸರ್ಜಾ ಜೊತೆಯಾಗಿರುವುದು, ಜೊತೆಗೆ ರಚಿತಾರಾಮ್‌ ನಾಯಕಿಯಾಗಿ ನಟಿಸುತ್ತಿರುವುದು ವಿಶೇಷ. ಹಿಂದಿಯ ಗೋಲ್ಡ್‌ಮೈನ್ಸ್‌ ಸಂಸ್ಥೆ ನಿರ್ಮಿಸುತ್ತಿದೆ.

11. ಫಾದರ್: ತಂದೆ, ಮಗನ ಕತೆ ಹೇಳುವ ಸಿನಿಮಾ. ಪ್ರಕಾಶ್‌ ರೈ ಹಾಗೂ ಡಾರ್ಲಿಂಗ್‌ ಕೃಷ್ಣ ನಟನೆಯ ಚಿತ್ರ. ಆರ್‌.ಚಂದ್ರು ನಿರ್ಮಾಣದ ಚಿತ್ರ. ಆಪ್ತವಾದ ಕತೆ ಇದೆ ಎನ್ನುವ ಕಾರಣಕ್ಕೆ ಭರವಸೆಯ ಚಿತ್ರ ಎನಿಸಿಕೊಂಡಿದೆ.

12. ದೈಜಿ: ರಮೇಶ್‌ ಅರವಿಂದ್‌ ನಟನೆಯ ಚಿತ್ರ. ಈಗಾಗಲೇ ಚಿತ್ರದ ಫಸ್ಟ್‌ ಲುಕ್‌ ಬಿಡುಗಡೆ ಆಗಿದ್ದು, ತುಂಬಾ ವಿಶೇಷವಾಗಿದೆ. ಪ್ರತಿಭಾವಂತ ಆಕಾಶ್‌ ಶ್ರೀವತ್ಸ ನಿರ್ದೇಶನದ ಸಿನಿಮಾವಿದು.

13. ಪಿನಾಕ: ಗಣೇಶ್‌ ನಟನೆ, ಬಹುಭಾಷೆಯಲ್ಲಿ ಮೂಡಿ ಬರುತ್ತಿರುವ ಸಿನಿಮಾ. ಬುಡಕಟ್ಟು ಸಮುದಾಯದ ಕತೆ, ರಾಜನ ಪಾತ್ರದಲ್ಲಿ ಗಣೇಶ್‌ ಕಾಣಿಸಿಕೊಳ್ಳುತ್ತಿದ್ದು, ನೃತ್ಯ ನಿರ್ದೇಶಕ ಧನಂಜಯ ಅವರ ನಿರ್ದೇಶನದ ಮೊದಲ ಸಿನಿಮಾ.

14. ಸಿಟಿ ಲೈಟ್ಸ್: ದುನಿಯಾ ವಿಜಯ್ ನಿರ್ದೇಶನದ ಮೂರನೇ ಚಿತ್ರ. ಈ ಸಿನಿಮಾ ಮೂಲಕ ವಿಜಯ್‌ ಅವರ ದ್ವಿತೀಯ ಪುತ್ರಿ ಮೊನಿಷಾ ಕನ್ನಡ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ವಿನಯ್‌ ರಾಜ್‌ಕುಮಾರ್‌ ಹೀರೋ.

ಮತ್ತಷ್ಟು ಭರವಸೆ

ಶಿವಣ್ಣನ ‘ಎ ಫಾರ್ ಆನಂದ್’, ‘ಡ್ಯಾಡಿ’ ಸೇರಿದಂತೆ ಹಲವು ಚಿತ್ರಗಳು ಬಿಡುಗಡೆಯಾಗಬಹುದು. ಡಾಲಿ ನಟನೆಯ ‘ಅಣ್ಣ ಫ್ರಂ ಮೆಕ್ಸಿಕೋ’, ‘ಜಿಂಗೋ’ ಸಿನಿಮಾಗಳು ಬರಬಹುದು. ವಿಕ್ರಮ್‌ ರವಿಚಂದ್ರನ್‌ ಅಭಿನಯದ ‘ಮುಧೋಳ’, ಪೃಥ್ವಿ ಅಂಬಾರ್‌ ಅವರ ‘ಚೌಕಿದಾರ್‌’, ಝೈದ್‌ ಖಾನ್‌ ನಟನೆಯ ‘ಕಲ್ಟ್‌’ ಹೊಸ ವರ್ಷದ ಹರ್ಷ ಹೆಚ್ಚಿಸುವ ನಂಬಿಕೆ ಹುಟ್ಟಿಸಿವೆ.