Rakshit Shetty: 777 ಚಾರ್ಲಿ ಚಿತ್ರಕ್ಕೆ 5 ಸ್ಟಾರ್ ಕೊಟ್ಟ ಮನೇಕಾ ಗಾಂಧಿ
ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಪ್ರೀಮಿಯರ್ ಶೋ ದೆಹಲಿಯಲ್ಲಿ ನಡೆದಿದೆ. ಈ ವೇಳೆ ಚಿತ್ರ ವೀಕ್ಷಿಸಿದ ಲೋಕಸಭಾ ಸದಸ್ಯೆ, ಪ್ರಾಣಿ ಪರ ಹೋರಾಟಗಾರ್ತಿ ಮನೇಕಾ ಗಾಂಧಿ, ‘ಚಿತ್ರಕ್ಕೆ ಐದರಲ್ಲಿ ಐದು ಸ್ಟಾರ್ ಕೊಡ್ತೀನಿ’ ಎಂದಿದ್ದಾರೆ.
ಕಿರಣ್ ರಾಜ್ ನಿರ್ದೇಶನದ, ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಪ್ರೀಮಿಯರ್ ಶೋ ದೆಹಲಿಯಲ್ಲಿ ನಡೆದಿದೆ. ಈ ವೇಳೆ ಚಿತ್ರ ವೀಕ್ಷಿಸಿದ ಲೋಕಸಭಾ ಸದಸ್ಯೆ, ಪ್ರಾಣಿ ಪರ ಹೋರಾಟಗಾರ್ತಿ ಮನೇಕಾ ಗಾಂಧಿ, ‘ಚಿತ್ರಕ್ಕೆ ಐದರಲ್ಲಿ ಐದು ಸ್ಟಾರ್ ಕೊಡ್ತೀನಿ’ ಎಂದಿದ್ದಾರೆ. ಸಿನಿಮಾ ಬಗ್ಗೆ ಮೆಚ್ಚುಗೆಯ ಮಾತುಗಳನ್ನಾಡಿದ ಅವರು, ‘ನಾನು ನೋಡಿದ ಅತ್ಯುತ್ತಮ ಚಿತ್ರಗಳಲ್ಲಿ ಚಾರ್ಲಿಯೂ ಒಂದು. ಸಿನಿಮಾದಲ್ಲಿ ನೀಡಿರುವ ಸಂದೇಶ ಸತ್ಯವಾದದ್ದು ಮತ್ತು ಬುದ್ಧಿವಂತಿಕೆಯಿಂದ ಕೂಡಿದ್ದು. ಈ ಸಿನಿಮಾವನ್ನು ಎಲ್ಲರೂ ನೋಡಿ ಅಂತ ನಾನು ಶಿಫಾರಸ್ಸು ಮಾಡುತ್ತೇನೆ’ ಎಂದಿದ್ದಾರೆ.
ದೇಶಾದ್ಯಂದ 21 ನಗರಗಳಲ್ಲಿ 777 ಚಾರ್ಲಿ ಪ್ರೀಮಿಯರ್ ಶೋ ಆಯೋಜಿಸಲಾಗಿದೆ. ಐಎಂಡಿಬಿ ಬಹುನಿರೀಕ್ಷಿತ ಸಿನಿಮಾಗಳ ಲಿಸ್ಟ್‌ನಲ್ಲಿ ಚಾರ್ಲಿ ನಂಬರ್ 1 ಸ್ಥಾನ ಪಡೆದುಕೊಂಡಿದೆ. ತಮಿಳುನಾಡಿನಲ್ಲಿ ಕಮಲ್ ಹಾಸನ್ ನಟನೆಯ ‘ವಿಕ್ರಮ್’ ಸಿನಿಮಾ ಪ್ರದರ್ಶನದ ವೇಳೆ ‘777 ಚಾರ್ಲಿ’ ಚಿತ್ರದ ಟ್ರೇಲರ್ ಪ್ರಸಾರವಾಗುತ್ತಿದ್ದು, ಅದಕ್ಕೂ ಮೆಚ್ಚುಗೆ ವ್ಯಕ್ತವಾಗಿದೆ. ಚಿತ್ರ ಜೂ.10ಕ್ಕೆ ಬಿಡುಗಡೆಯಾಗಲಿದೆ.
ನನಗೆ ಲವ್ ಫೇಲ್ಯೂರ್ ಆಗಿಲ್ಲ; ರವಿಚಂದ್ರನ್ ಪ್ರಶ್ನೆಗೆ ರಕ್ಷಿತ್ ಶೆಟ್ಟಿಯ ಉತ್ತರ
777 ಚಾರ್ಲಿಗೆ ರಾಣಾ ದಗ್ಗುಬಾಟಿ ಸಾಥ್: ರಕ್ಷಿತ್ ಶೆಟ್ಟಿನಟನೆ, ಕಿರಣ್ ರಾಜ್ ಕೆ ನಿರ್ದೇಶನದ ‘777 ಚಾರ್ಲಿ’ ಚಿತ್ರಕ್ಕೆ ತೆಲುಗಿನ ರಾಣಾ ದಗ್ಗುಬಾಟಿ ಸಾಥ್ ನೀಡಿದ್ದಾರೆ. ಬಹು ಭಾಷೆಯಲ್ಲಿ ಮೂಡಿ ಬರುತ್ತಿರುವ ಈ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು ಪ್ರಸ್ತುತ ಪಡಿಸುತ್ತಿದ್ದು, ತಮ್ಮ ಸುರೇಶ್ ಪ್ರೊಡಕ್ಷನ್ ಮೂಲಕ ಚಿತ್ರವನ್ನು ವಿತರಣೆ ಮಾಡಲಿದ್ದಾರೆ. ಆ ಮೂಲಕ ರಕ್ಷಿತ್ ಶೆಟ್ಟಿಅವರ ಈ ಚಿತ್ರವನ್ನು ಟಾಲಿವುಡ್‌ನಲ್ಲಿ ದೊಡ್ಡ ಮಟ್ಟದಲ್ಲಿ ಬಿಡುಗಡೆ ಮಾಡುವುದಕ್ಕೆ ಮುಂದಾಗಿದ್ದಾರೆ.
ಹೀಗಾಗಿ ‘ಕೆಜಿಎಫ್ 2’ ಚಿತ್ರದ ನಂತರ ಮತ್ತೊಂದು ಕನ್ನಡ ಸಿನಿಮಾ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುವುದಕ್ಕೆ ತಯಾರಾಗುತ್ತಿದೆ. ಅಂದಹಾಗೆ ಜೂನ್ 10ಕ್ಕೆ ಕನ್ನಡ, ತೆಲುಗು, ತಮಿಳು, ಹಿಂದಿ, ಮಲಯಳಂ ಭಾಷೆಯಲ್ಲಿ ಸಿನಿಮಾ ಬಿಡುಗಡೆ ಆಗುತ್ತಿದೆ. ಸಂಗೀತ ಶೃಂಗೇರಿ ನಾಯಕಿಯಾಗಿ ನಟಿಸಿದ್ದಾರೆ. ತಮಿಳಿನ ಬಾಬಿ ಸಿಂಹ, ಡ್ಯಾನಿಶ್ ಸೇಠ್ ಸೇರಿದಂತೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ‘ತೆಲುಗಿನಲ್ಲಿ ನಮ್ಮ ಚಿತ್ರವನ್ನು ರಾಣಾ ದಗ್ಗುಬಾಟಿ ಅವರು 10 ಜನರ ತಂಡದೊಂದಿಗೆ ಸಿನಿಮಾ ನೋಡಿದ ನಂತರ ಅಲ್ಲಿ ವಿತರಣೆ ಮಾಡಲು ಒಪ್ಪಿದ್ದು, ನಮ್ಮ ಚಿತ್ರಕ್ಕೆ ಸಿಕ್ಕಿರುವ ಬಹು ದೊಡ್ಡ ಮೆಚ್ಚುಗೆ.
ಸಿನಿಮಾ ನೋಡಿದ ಕೂಡಲೇ ರಾಣಾ ಅವರೇ ಟ್ವೀಟ್ ಮಾಡಿ, ಚಿತ್ರದ ಬಗ್ಗೆ ಎರಡೇ ಸಾಲಿನಲ್ಲಿ ರಿವ್ಯೂ ಕೂಡ ಹಾಕಿದ್ದಾರೆ. ಹೀಗಾಗಿ ಚಿತ್ರವನ್ನು ಅವರೇ ಪ್ರಸೆಂಟ್ ಮಾಡುವ ಜತೆಗೆ ಇದರ ತೆಲುಗು ವರ್ಷನ್ ಅನ್ನು ಸುರೇಶ್ ಪ್ರೊಡಕ್ಷನ್‌ನಿಂದ ಬಿಡುಗಡೆ ಮಾಡುತ್ತಿದ್ದಾರೆ. ಎಷ್ಟುಚಿತ್ರಮಂದಿರಗಳು, ಎಷ್ಟುಸ್ಕ್ರೀನ್‌ಗಳು ಎಂಬುದನ್ನು ಸದ್ಯದಲ್ಲೇ ಹೇಳುತ್ತಾರೆ. ಆದರೆ, ಕನ್ನಡ ಚಿತ್ರಕ್ಕೆ ಟಾಲಿವುಡ್‌ನಲ್ಲಿ ದೊಡ್ಡ ನಿರ್ಮಾಣ ಸಂಸ್ಥೆ ಜತೆಯಾಗಿದೆ ಎಂಬುದು ಈ ಕ್ಷಣದ ಸಂಭ್ರಮ’ ಎನ್ನುತ್ತಾರೆ ನಿರ್ದೇಶಕ ಕಿರಣ್ ರಾಜ್.
Ramya ಜೊತೆ ಮದುವೆ ಆಗಲಿದ್ದಾರಾ Rakshit Shetty? ಅಷ್ಟಕ್ಕೂ ನಟ ಹೇಳಿದ್ದೇನು?
ರಾಷ್ಟ್ರ ಮಟ್ಟದಲ್ಲಿ ಸದ್ದು ಮಾಡಲಿರುವ ಮುಂದಿನ ಸಿನಿಮಾ ಎಂಬ ನಿರೀಕ್ಷೆ ಹುಟ್ಟಿರುವ ಸಿನಿಮಾ ‘777 ಚಾರ್ಲಿ’ ಜೂನ್ 10ರಂದು ಬಿಡುಗಡೆಯಾಗಲಿದೆ. ರಕ್ಷಿತ್ ಶೆಟ್ಟಿನಟಿಸಿರುವ, ಕಿರಣ್‌ರಾಜ್ ಕೆ ನಿರ್ದೇಶನದ ಈ ಚಿತ್ರದ ಕನ್ನಡ ಭಾಷೆಯ ಪ್ರಸಾರ ಹಕ್ಕುಗಳು ರು.21 ಕೋಟಿಗೆ ಕಲರ್ಸ್ ಕನ್ನಡದ ಪಾಲಾಗಿದೆ ಎಂದು ಮೂಲಗಳು ತಿಳಿಸಿವೆ. ಡಿಜಿಟಲ್ ಹಕ್ಕು ಕಲರ್ಸ್ ಸಂಸ್ಥೆಯ ಒಡೆತನದ ವೂಟ್ ಓಟಿಟಿಗೆ ದಕ್ಕಿದೆ.