ರಕ್ಷಿತ್ ಶೆಟ್ಟಿ ನಿರ್ಮಾಣದ ಹೊಸ ಸಿನೆಮಾದಲ್ಲಿ ಅಂಕಿತಾ ಅಮರ್ ನಾಯಕಿ!
ಹುಟ್ಟುಹಬ್ಬದ ದಿನ ಹೊಸ ಸಿನಿಮಾ ಫಸ್ಟ್ ಲುಕ್ ಅನೌನ್ಸ್ ಮಾಡಿದ ನಮ್ಮನೆ ಯುವರಾಣಿ ಧಾರಾವಾಹಿ ನಟಿ ಅಂಕಿತಾ.
ರಕ್ಷಿತ್ ಶೆಟ್ಟಿ (Rakshit Shetty) ನಿರ್ಮಾಣದ ಹೊಸ ಚಿತ್ರಕ್ಕೆ ಅಂಕಿತಾ ಅಮರ್ (Ankitha Amar) ನಾಯಕಿಯಾಗಿ ಆಯ್ಕೆಯಾಗಿದ್ದಾರೆ.
ಸಿನೆಮಾ ಕಾವ್ಯಾತ್ಮಕ ಪ್ರೇಮಕಥೆ ಹೊಂದಿದೆ. ಕಥಾಸಂಗಮ ಚಿತ್ರದಲ್ಲಿ ಒಂದು ಕಿರುಚಿತ್ರ ನಿರ್ದೇಶಿಸಿದ್ದ ಪ್ರತಿಭಾವಂತ ಬರಹಗಾರ ಚಂದ್ರಜಿತ್ ಬೆಳ್ಳಿಯಪ್ಪ ಈ ಸಿನೆಮಾದ ನಿರ್ದೇಶಕ ಎಂದು ಮೂಲಗಳು ತಿಳಿಸಿವೆ.
ಬಾಲ್ಯದ ಚಿತ್ರಗಳನ್ನು ತುಂಬಾ ಇಷ್ಟಪಡುವ ಹುಡುಗಿಯ ಪಾತ್ರದಲ್ಲಿ ಅಂಕಿತಾ ಅಮರ್ ಕಾಣಿಸಿಕೊಳ್ಳುತ್ತಿದ್ದಾರೆ. ‘777 ಚಾರ್ಲಿ’ ಸಿನಿಮಾ ಬಿಡುಗಡೆಯಾದ ಬಳಿಕ ಈ ಸಿನಿಮಾ ಘೋಷಣೆಯಾಗುವ ಸಾಧ್ಯತೆ ಇದೆ.
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ನಮ್ಮನೆ ಯುವರಾಣಿ ಧಾರಾವಾಹಿಯಲ್ಲಿ ಅಂಕಿತಾ ಅಭಿನಯಿಸುತ್ತಿದ್ದರು. ಕಥೆ ಬದಲಾವಣೆಯಿಂದ ಹೊರ ಬಂದರು.
ಇದಾದ ನಂತರ ಹಾಡು ಎದೆ ತುಂಬಿ ಹಾಡುವೆನು ಕಾರ್ಯಕ್ರಮದ ನಿರೂಪಕಿಯಾಗಿ, ತಮ್ಮ ಧ್ವನಿಯಿಂದ ನೂರಾರು ಅಭಿಮಾನಿಗಳನ್ನು ಸಂಪಾದನೆ ಮಾಡಿದ್ದರು.
ಮೂಲತಃ ಮೈಸೂರಿನವರು ಆಗಿರುವ ಅಂಕಿತಾ, ಮಾಸ್ಟರ್ ಡಿಗ್ರಿ ಪಡೆದು ಡಬಲ್ ಗೋಲ್ಡ್ ಮಡಲ್ ಪಡೆದಿದ್ದಾರೆ. ಮೆಡಿಕಲ್ ಬಯೋಕೆಮಿಸ್ಟ್ರೊ ಓದಿದ್ದಾರೆ.
ಆರ್‌ಜೆ ಮಯೂರ ನಿರ್ದೇಶನ ಮಾಡುವ ಸಿನಿಮಾದಲ್ಲೂ ಅಂಕಿತಾ ಗಾಯಕಿಯಾಗಿ ಕಾಣಿಸಿಕೊಳ್ಳುತ್ತಿದ್ದಾರೆ. ಅಂಕಿತಾ ಹಲವಾರು ಬೀದಿ ನೃತ್ಯ ಮಾಡಿರುವ ವಿಡಿಯೋಗಳು ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.