Asianet Suvarna News Asianet Suvarna News

200 ಕೋಟಿ ರೂ. ಗಳಿಕೆಯತ್ತ ಕಾಟೇರ; ದಚ್ಚು ಅಭಿಮಾನಿಗಳು ಫುಲ್ ಖುಷ್

ದಾಖಲೆ ಬರೆಯುತ್ತಿದೆ ಕಾಟೇರ ಸಿನಿಮಾ. ತಜ್ಞರ ಲೆಕ್ಕದ ಪ್ರಕಾರ ಕಲೆಕ್ಷನ್ ಕೇಳಿದರೆ ಎಲ್ಲರೂ ಶಾಕ್ ಆಗ್ತೀರಾ.....
 

Rockline Venkatesh Darshan Aaradhana ram Kaater film to join 200 crore club vcs
Author
First Published Jan 18, 2024, 1:55 PM IST

ದರ್ಶನ್‌ ನಟನೆಯ ‘ಕಾಟೇರ’ ಸಿನಿಮಾ ದಾಖಲೆಯ 200 ಕೋಟಿ ರು. ಗಳಿಕೆಯತ್ತ ಹೆಜ್ಜೆ ಹಾಕಿದೆ ಎನ್ನಲಾಗಿದೆ. ತಜ್ಞರ ಲೆಕ್ಕಾಚಾರದ ಪ್ರಕಾರ ಈ ಚಿತ್ರ 18 ದಿನಗಳಲ್ಲಿ 190.89 ಕೋಟಿ ರು. ಕಲೆಕ್ಷನ್‌ ಮಾಡಿದೆ. ಈ ಸಿನಿಮಾ ಗಳಿಕೆ ಈ ವಾರ 200 ಕೋಟಿ ರು. ದಾಟಬಹುದು ಎಂದು ಅಂದಾಜಿಸಲಾಗಿದೆ.

ವೀಕೆಂಡ್‌, ಸಂಕ್ರಾಂತಿ ಹಬ್ಬದ ಸಾಲು ರಜೆಗಳಲ್ಲಿ ‘ಕಾಟೇರ’ ರಾಜ್ಯದ ಹಲವೆಡೆ ಹೌಸ್‌ಫುಲ್‌ ಪ್ರದರ್ಶನ ಕಂಡಿದೆ. ಚಿತ್ರದ ಈ ಮೂರು ದಿನಗಳ ಗಳಿಕೆಯೇ 33.47 ಕೋಟಿ ರು.ಗೂ ಹೆಚ್ಚಿದೆ ಎಂದು ಆಪ್ತ ಮೂಲಗಳು ತಿಳಿಸಿವೆ. ವೀಕೆಂಡ್‌ನ ಎರಡು ರಜಾದಿನ ಹಾಗೂ ಸಂಕ್ರಾಂತಿ ದಿನ ಸುಮಾರು 5622 ಸ್ಕ್ರೀನ್‌ಗಳಲ್ಲಿ ಸಿನಿಮಾ ಪ್ರದರ್ಶನಗೊಂಡಿದ್ದು, ಇದರಲ್ಲಿ 3864 ಶೋಗಳು ಹೌಸ್ ಆಗಿವೆ ಎನ್ನಲಾಗಿದೆ. ಕನ್ನಡದಲ್ಲಿ ಮಾತ್ರ ಬಿಡುಗಡೆಯಾದ ಚಿತ್ರವೊಂದು ಈ ಮಟ್ಟಿನ ಕಲೆಕ್ಷನ್‌ ಮಾಡಿರುವುದು ದಾಖಲೆಯಾಗಿದೆ.

ಅಪ್ಪ ಬಂಡವಾಳ ಹಾಕೋದು ಬೇಡ ಎಂದ ಆರಾಧನಾ; ಕೋಟಿ ರಾಮು ನೆನೆದು ಕಣ್ಣೀರಿಟ್ಟ ಮಾಲಾಶ್ರೀ!

ದರ್ಶನ್‌ ಹಾಗೂ ಆರಾಧನಾ ನಾಯಕ, ನಾಯಕಿಯಾಗಿ ನಟಿಸಿರುವ ‘ಕಾಟೇರ’ ಸಿನಿಮಾವನ್ನು ತರುಣ್‌ ಕಿಶೋರ್‌ ಸುಧೀರ್‌ ನಿರ್ದೇಶಿಸಿದ್ದು, ರಾಕ್‌ಲೈನ್‌ ವೆಂಕಟೇಶ್‌ ನಿರ್ಮಿಸಿದ್ದಾರೆ.

'ಕತೆಯ ಸೂಕ್ಷ್ಮತೆಯನ್ನು ಮನಸ್ಸಲ್ಲಿಟ್ಟುಕೊಂಡೇ ಕೆಲವು ಸನ್ನಿವೇಶಗಳಲ್ಲಿ ದರ್ಶನ್ ಅ‍ವರ ಅಭಿಮಾನಿಗಳಿಗೆ ಖುಷಿ ಕೊಡುವ ಸಂಭಾಷಣೆಗಳನ್ನೇ ನಾನು ಬರೆಯಬೇಕಿತ್ತು. ಅದಕ್ಕೆ ಪೂರಕವಾದ ದೃಶ್ಯಗಳಲ್ಲಿ ಅದೇ ಥರದ ಡೈಲಾಗ್ ಬರೆದೆ. ಉದಾಹರಣೆಗೆ ಮೆಶಿನ್ ಮಚ್ಚು ಮಾರಾಟ ಮಾಡುವವನು ಬಂದಾಗ ಹೇಳುವ ಮಾತು, ಮಚ್ಚು ಒಡವೆ ಥರ ಕಾಣಿಸಬಾರದು, ಒಡೆಯೋ ಥರ ಕಾಣಿಸಬೇಕು. ಎಲ್ಲಾ ಹಾವುಗಳು ತಲೆ ಎತ್ತುತ್ತವೆ, ಆದರೆ ಕಾಳಿಂಗ ಸರ್ಪ ಮಾತ್ರ ಹೆಡೆ ಎತ್ತುತ್ತದೆ, ಗಂಡ್ಸಾದವನ ಬೆವರು ಸುರಿಸಬೇಕು- ಜೊಲ್ಲು ಸುರಿಸಬಾರದು. ಸೂಕ್ಷ್ಮವಾಗಿ ಬರೆದಾಗ ಎಲ್ಲರಿಗೂ ಆ ಮಾತು ಇಷ್ಟವಾಗುತ್ತದೆ. ಅದೇ ಪ್ರಕಾರ ಈ ಮಾತುಗಳು ಎಲ್ಲರಿಗೂ ತಲುಪಿವೆ' ಎಂದು ನ್ನೆಲೆಯಲ್ಲಿ ಸಂಭಾಷಣಾಕಾರ ಮಾಸ್ತಿ ಹೇಳಿದ್ದರು. 

ಭಯ-ಭಕ್ತಿಯಿಂದ ಸಂಭಾಷಣೆ ಬರೆದ ಸಿನಿಮಾ ಕಾಟೇರ: ಮಾಸ್ತಿ ಜೊತೆ ಮಾತುಕತೆ

ಕಾಟೇರ ನೋಡಿದ ಸೆಲೆಬ್ರಿಟಿಗಳು

ಕನ್ನಡ ಚಿತ್ರರಂಗದ ಗಣ್ಯರಿಗಾಗಿ ಸೆಲೆಬ್ರಿಟಿ ಶೋ ಆಯೋಜಿಸಲಾಗಿತ್ತು. ರಮೇಶ್‌ ಅರವಿಂದ್‌, ಉಪೇಂದ್ರ, ಬಿ ಸರೋಜಾದೇವಿ, ಧನಂಜಯ್‌, ವಿನೋದ್‌ ಪ್ರಭಾಕರ್, ಸತೀಶ್‌ ನೀನಾಸಂ, ಯೋಗರಾಜ್‌ ಭಟ್‌, ವಸಿಷ್ಠ ಸಿಂಹ, ಹರಿಪ್ರಿಯಾ, ಪ್ರಿಯಾಂಕಾ ಉಪೇಂದ್ರ ಮುಂತಾದವರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ದರ್ಶನ್, ರಾಕ್‌ಲೈನ್‌ ವೆಂಕಟೇಶ್‌ ಮೆಟ್ಟಿಲ ಮೇಲೆ ಕುಳಿತು ಸಿನಿಮಾ ನೋಡಿದರು.

Follow Us:
Download App:
  • android
  • ios