ಸ್ಯಾಂಡಲ್ ವುಡ್ ಖ್ಯಾತ ನಿರ್ದೇಶಕ ಪವನ್ ಒಡೆಯರ್ ಪತ್ನಿ ಅಪೇಕ್ಷಾ ಪುರೋಹಿತ್ ಟಿ ಎನ್ ಸೀತಾರಾಮ್ ಅವರ ಕಾಫಿ ತೋಟ ಸಿನಿಮಾ ಮೂಲಕ ಬೆಳ್ಳಿ ತೆರೆಗೆ ಪಾದಾರ್ಪಣೆ ಮಾಡಿದ್ದರು. ಈಗ ಸಾಗುತ ದೂರ ದೂರ ಎನ್ನುವ ಸಿನಿಮಾದಲ್ಲಿ ಮುಖ್ಯವಾದ ಪಾತ್ರವೊಂದರಲ್ಲಿ ಕಾಣಿಸಿಕೊಂಡಿದ್ದಾರೆ.

ಈ ಚಿತ್ರದ ಟೀಸರನ್ನು ಯಶ್ ಬಿಡುಗಡೆ ಮಾಡಿದ್ದಾರೆ. ಈ ಸಂತೋಷವನ್ನು ಅಪೇಕ್ಷಾ ಪುರೋಹಿತ್ ಟ್ವಿಟರ್ ನಲ್ಲಿ ಹಂಚಿಕೊಂಡಿದ್ದಾರೆ. 

ರಾಬರ್ಟ್ ಜೊತೆ ಕೆಜಿಎಫ್-2 ಶೂಟಿಂಗ್ ಶುರು!

‘ ಸಿನಿಮಾ ಎಂದರೆ ತುಂಬಾ ಎಕ್ಸೈಟೆಡ್ ನಾನು, 2 ವರ್ಷದ ಹಿಂದೆ ಸಿನಿಮಾ ಆಫರ್ ಬಂದಾಗ ತೊಗೊಳೋದೋ ಬೇಡವೋ ಎಂದು ಫುಲ್ ಕನ್ಫೂಸ್ ನಲ್ಲಿದ್ದೆ. ಬಟ್ ಕಥೆ ಕೇಳಿದ ಮೇಲೆ ಅನಿಸ್ತು ಯಾಕೆ ಒನ್ ಟ್ರೈ ಮಾಡ್ಬಾರ್ದು ಅಂತ. ನನ್ನ ಟೀಮ್ ಈಸ್ ಫುಲ್ ಹ್ಯಾಪಿ ಬೈ ಮೈ ಪರ್ಫಾಮೆನ್ಸ್. ಈಗ ಸಾಗುತ ದೂರ ದೂರ ಬಂದಿದೀನಿ. ನಿಮ್ಮ ಪ್ರೋತ್ಸಾಹ ಇರಲಿ’ ಎಂದು ಟ್ವೀಟ್ ಮಾಡಿದ್ದಾರೆ. 

 

ಚಿತ್ರದಲ್ಲಿ ಅಪೇಕ್ಷಾ ಅವರು ಪ್ರಧಾನ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಇಲ್ಲಿ ಅವರು ಪ್ರೀತಿಯ ಹಿಂದೆ ಬಿದ್ದು ಮರ ಸುತ್ತುವ ಪಾತ್ರವನ್ನು ಮಾಡಿಲ್ಲ. ಇದೊಂದು ಪ್ರಯಾಣದ ಕಥೆಯಾಗಿದ್ದು, ಅಪೇಕ್ಷಾ ಮತ್ತು ಇನ್ನೊಬ್ಬ ಚಿಕ್ಕ ಹುಡುಗನ ನಡೆಯುವ ಕಥೆ ಇದಾಗಿದೆ. ಈ ಪ್ರಯಾಣದಲ್ಲಿ ಇಬ್ಬರೂ ತಮ್ಮ ತಾಯಿಯನ್ನು ಹುಡುಕಿ ಹೋಗುವ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. 

ಕರ್ಕಿ ಚಿತ್ರದಲ್ಲಿ ರೋಜರ್‌ಗೆ ಜತೆಯಾದ ಪಾವನಾ!

ನಾಯಕಿ ಅಪೇಕ್ಷಾ ಇಲ್ಲಿ ಕುಂದಾಪುರದ ಹುಡುಗಿಯಾಗಿ ನಟಿಸಿರುವುದರಿಂದ ಅವರ ಸಂಭಾಷಣೆ ಕೂಡ ಕುಂದಾಪುರ ಶೈಲಿಯಲ್ಲೇ ಇರಲಿದೆಯಂತೆ. ಚಿತ್ರದಲ್ಲಿ ಜಾಹ್ನವಿ, ಗಡ್ಡಪ್ಪ, ಹೊನ್ನವಳ್ಳಿ ಕೃಷ್ಣ ಸೇರಿದಂತೆ ಅನೇಕರು ಅಭಿನಯಿಸಿದ್ದಾರೆ. ಚಿತ್ರಕ್ಕೆ ಚಿತ್ರಕ್ಕೆ ಮಣಿಕಾಂತ್ ಕದ್ರಿ ಸಂಗೀತವಿದೆ. ಈ ಚಿತ್ರವನ್ನು 'ಕೃಷಿ ಕನಸು' ಬ್ಯಾನರ್ ನಲ್ಲಿ ಅಮಿತ್ ಪೂಜಾರಿ ಅವರು ನಿರ್ಮಾಣ ಮಾಡಿದ್ದಾರೆ. ಎಲ್ಲವೂ ಅಂದುಕೊಂಡಂಗೆ ಆದರೆ ಸೆಪ್ಟೆಂಬರ್ ನಲ್ಲಿ ತೆರೆ ಕಾಣುವ ಸಾಧ್ಯತೆ ಇದೆ.