ಚಿತ್ರದಲ್ಲಿ ಮೂವರು ನಾಯಕಿಯರಿದ್ದಾರೆ. ಅದರಲ್ಲಿ ಪಾವನಾ ಕೂಡ ಒಬ್ಬರು.

‘ಚಿತ್ರದಲ್ಲಿ ಮೂವರು ನಾಯಕಿಯರಿದ್ದೇವೆ. ಅದರಲ್ಲಿ ನಾನು ಕೂಡ ಒಬ್ಬಳು. ಮೂವರದ್ದು ಮುಖ್ಯ ಭೂಮಿಕೆಯ ಪಾತ್ರಗಳೇ. ಸಮಾನ ಅವಕಾಶ ಮೂವರಿಗೂ ಸಿಕ್ಕಿದೆ. ಚಿತ್ರದ ಅರ್ಧ ಭಾಗ ಕಥಾ ನಾಯಕನ ಜತೆಗೆ ನಾನು ಕಾಣಿಸಿಕೊಳ್ಳುತ್ತೇನೆ. ದ್ವಿತೀಯಾರ್ಧದಲ್ಲಿ ಮೂರು ಪಾತ್ರಗಳು ಕತೆಯಲ್ಲಿ ಪ್ರಾಮುಖ್ಯತೆ ಪಡೆಯುತ್ತವೆ. ಆ ಮಟ್ಟಿಗೆ ಪಾತ್ರಕ್ಕೆ ಆದ್ಯತೆ ಇದ್ದ ಕಾರಣ ನಾನು ಅಭಿನಯಿಸಲು ಒಪ್ಪಿಕೊಂಡೆ’ ಎನ್ನುತ್ತಾರೆ ಪಾವನಾ.

ಸಾಮಾನ್ಯವಾಗಿ ಪ್ರೇಕ್ಷಕರಿಗೆ ಇಷ್ಟವಾಗುವಂತಹ ಪಾತ್ರಗಳಲ್ಲೇ ಕಾಣಿಸಿಕೊಂಡರೆ ಸೂಕ್ತ ಎನ್ನುವ ಅಭಿಪ್ರಾಯ ಅವರದ್ದು. ಅಂತಹದೇ ಪಾತ್ರ ಇಲ್ಲೂ ಸಿಕ್ಕಿದೆ ಎನ್ನುವ ಖುಷಿಯಲ್ಲಿದ್ದಾರೆ. ‘ಪಾತ್ರದ ಹೆಸರು ಪೂರ್ವಿ ಅಂತ. ಈ ಕಾಲದ ಯುವ ಜನರನ್ನು ಪ್ರತಿನಿಧಿಸುವಂತಹ ಹುಡುಗಿ. ತೊಡುವ ಬಟ್ಟೆಯಲ್ಲಿ ಬೋಲ್ಡ್‌ ಅಂತ ಇರದಿದ್ದರೂ, ಆಕೆಯ ಸ್ವಭಾವವೇ ಬೋಲ್ಡ್‌. ತುಂಬಾ ಪ್ರಾಕ್ಟಿಕಲ್‌ ಹುಡುಗಿ’ ಅಂತಾರಾ ಪಾವನಾ. ‘ಅಮ್ಮನ ಮನೆ’ ಚಿತ್ರದ ನಂತರ ನಿರ್ಮಾಪಕರಾದ ಕುಮಾರ್‌ ಹಾಗೂ ಸಂಪತ್‌ ‘ಕರ್ಕಿ’ ನಿರ್ಮಾಣಕ್ಕೆ ಬಂಡವಾಳ ಹೂಡುತ್ತಿದ್ದಾರೆ.