Asianet Suvarna News Asianet Suvarna News

Yash; ನೆಪೋಟಿಸಂ ಬಗ್ಗೆ ರಾಕಿಂಗ್ ಸ್ಟಾರ್ ಹೇಳಿದ್ದೇನು? ಫ್ಯಾನ್ಸ್ ಹೃದಯ ಗೆದ್ದ ಯಶ್ ರಿಯಾಕ್ಷನ್

ಕೆಜಿಎಫ್ ಸ್ಟಾರ್ ರಾಕಿಂಗ್ ಸ್ಟಾರ್ ಯಶ್ ಮೆಪೋಟಿಸಂ ಬಗ್ಗೆ ಮಾತನಾಡಿದ್ದಾರೆ. ಯಶ್ ಪ್ರತಿಕ್ರಿಯೆ ಅಭಿಮಾನಿಗಳ ಹೃದಯ ಗೆದ್ದಿದೆ.

Rocking star Yash Talks About Nepotism dialogue in KGF Chapter 2 sgk
Author
First Published Dec 23, 2022, 2:36 PM IST

ಕೆಜಿಎಫ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ಯಶ್ ಇತ್ತೀಚಿಗಷ್ಟೆ ಫಿಲ್ಮ್ ಕಾಂಪ್ಯಾನಿಯನ್ ಜೊತೆ ಮಾತನಾಡಿದ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗಿದೆ. ಸಂದರ್ಶನದಲ್ಲಿ ಕೆಜಿಎಫ್ ಸ್ಟಾರ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ ತನ್ನ ಉದ್ಯಮದ ಪ್ರತಿಯೊಬ್ಬರು ನಟ, ನಿರ್ದೇಶಕ, ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ಕರ್ನಾಟಕ ಜನತೆ ಬೇರೆ ಯಾವುದೇ  ಚಿತ್ರರಂಗವನ್ನು ತೆಗಳಬಾರದು, ಕೀಳಾಗಿ ನೋಡಬಾರದು ಎಂದು ಹೇಳಿದರು. ಇನ್ನು ವಿಶೇಷ ಎಂದರೆ ನೆಪೋಟಿಸಂ ಬಗ್ಗೆಯೂ ಮಾತನಾಡಿದ್ದಾರೆ. ನೆಪೋಟಿಸಂ ಬಗ್ಗೆ ರಾಕಿಂಗ್ ಹೇಳಿರುವ ಮಾತು ಸಿಕ್ಕಾಪಟ್ಟೆ ವೈರಲ್ ಆಗಿದೆ. 

ಕಳೆದ ಕೆಲವು ವರ್ಷಗಳಿಂದ ಭಾರತೀಯ ಸಿನಿಮಾರಂಗದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡಿದ ವಿಚಾರ ನೆಪೋಟಿಸಂ. ಬಾಲಿವುಡ್‌ಗೆ ದೊಡ್ಡ ಸಮಸ್ಯೆಯಾಗಿ ಕಾಡಿತ್ತು. ಅದರಲ್ಲೂ ಸುಶಾಂತ್ ರಜಪೂತ್ ನಿಧನದ ಬಳಿಕ ನೆಪೋಟಿಸಂ ಬಗ್ಗೆ ಚರ್ಚೆ ಜೋರಾಯಿತು. ಸ್ಟಾರ್ ಕಿಡ್ ವಿರುದ್ದ ಪ್ರೇಕ್ಷಕರು ಸಹ ರೊಚ್ಚಿಗೆದ್ದರು. ಅನೇಕ ಕಲಾವಿದರೂ ಸಹ ನೆಪೋಟಿಸಂ ವಿರುದ್ಧ ಅಸಮಾಧಾನ ಹೊರಹಾಕಿದ್ದರು. ಅದೆ ವೇಳೆಗೆ ಬಂದ ಕೆಜಿಎಫ್-2 ಸಿನಿಮಾದಲ್ಲಿ ನೆಪೋಟಿಸಂ ಬಗ್ಗೆ ಇದ್ದ ಡೈಲಾಗ್ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ರಾಕಿ ಭಾಯ್ ಹೇಳಿದ್ದ ಡೈಲಾಗ್ ಕೇಳಿ ಫ್ಯಾನ್ಸ್ ಫಿದಾ ಆಗಿದ್ದರು. ಈ ಬಗ್ಗೆ ಈಗ ರಾಕಿಂಗ್ ಸ್ಟಾರ್ ಯಶ್ ಮಾತನಾಡಿದ್ದಾರೆ. 

ಬೇರೆ ಚಿತ್ರರಂಗವನ್ನು ತೆಗಳಬೇಡಿ, ಬಾಲಿವುಡ್‌ಅನ್ನು ಗೌರವಿಸಿ; ಕನ್ನಡ ಅಭಿಮಾನಿಗಳಿಗೆ ಯಶ್ ಮನವಿ

'ಕೆಜಿಎಫ್ ಚಾಪ್ಟರ್ 2 ನಲ್ಲಿರುವ ಸ್ವಜನಪಕ್ಷಪಾತದ ದೃಶ್ಯವನ್ನು ಲಾಕ್‌ಡೌನ್‌ಗೂ ಮುಂಚೆಯೇ ಚಿತ್ರೀಕರಿಸಲಾಗಿತ್ತು. ಇದು ಇಡೀ ರಾಷ್ಟ್ರದ ಗಮನ ಸೆಳೆಯಿತು. ಆ ದೃಶ್ಯದ ಹಿಂದಿನ ಕಲ್ಪನೆ ಸಿನಿಮಾ ಕುಟುಂಬದ ಜನರನ್ನು ತೆಗಳುವುದು ಆಗಿರಲಿಲ್ಲ. ಆದರೆ ಹೊರಗಿನವರನ್ನು ನಿಗ್ರಹಿಸಲು ಪ್ರಯತ್ನಿಸುವ ವ್ಯಕ್ತಿಗಳನ್ನು ಗುರಿಯಾಗಿರಿಸಿಕೊಂಡಿತ್ತು. ನೆಪೋಟಿಸಂ ದೃಶ್ಯದ ಹಿಂದಿನ ಉದ್ದೇಶ ಎಂದರೆ ಯಾವುದೇ ಅಧಿಕಾರ, ಬ್ಯಾಗ್ರೌಂಡ್, ಪ್ರಭಾವವಿಲ್ಲದೇ ಸಾಧಿಸಬಹುದು ಎಂದು ಪ್ರೇರೆಪಿಸುವುದುದಾಗಿತ್ತು' ಎಂದು ಯಶ್ ಹೇಳಿದ್ದಾರೆ. ಇದಕ್ಕೆ ಯಶ್ ಅವರೇ ದೊಡ್ಡ ಸಾಕ್ಷಿ. ಯಾಕೆಂದರೆ ಯಶ್ ಯಾವುದೇ ಫಿಲ್ಮ್ ಕುಟುಂಬ ಅಥವಾ ಬ್ಯಾಗ್ರೌಂಡ್ ಇಲ್ಲದೇ ಬಂದವರು. ಇಂದು ದೊಡ್ಡ ಸ್ಟಾರ್ ಆಗಿ ಗುರುತಿಸಿಕೊಂಡಿದ್ದಾರೆ. ಪ್ರತಿಭೆ, ಛಲ, ಸಾಧಿಸುವ ಹಠ ಇದ್ದರೆ ಖಂಡಿತವಾಯಿಗೂ ಸಾಧಿಸ ಬಹುದು ಎಂದು ಹೇಳಿದ್ದಾರೆ. 

Yash; 4 ವರ್ಷದ ಸಂಭ್ರಮದಲ್ಲಿ KGF: Chapter 1; ವಿಶೇಷ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?

ರಾಕಿಂಗ್ ಸ್ಟಾರ್ ಕೊನೆಯದಾಗಿ ಕೆಜಿಎಫ್-2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ರಾಕಿ ಭಾಯ್ ಆಗಿ ಯಶ್ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ಈ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಳಿಕ ಯಶ್ ಯಾವ ಸಿನಿಮಾ ಮೂಲಕ ಅಭಿಮಾನಿಗಳ ಮುಂದೆ ಬರ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ.

Follow Us:
Download App:
  • android
  • ios