Yash; 4 ವರ್ಷದ ಸಂಭ್ರಮದಲ್ಲಿ KGF: Chapter 1; ವಿಶೇಷ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?
ಬ್ಲಾಕ್ ಬಸ್ಟರ್ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆಗಿ 4 ವರ್ಷಗಳನ್ನು ಪೂರೈಸಿದೆ. ಇತಿಹಾಸ ಸೃಷ್ಟಿಸಿದ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ.
ಡಿಸೆಂಬರ್ 21, 2018 ಕನ್ನಡ ಚಿತ್ರಾಭಿಮಾನಿಗಳು ಈ ದಿನ ಮರೆಯಲು ಸಾಧ್ಯವೇ ಇಲ್ಲ. ಪ್ರಶಾಂತ್ ನೀಲ್ ನಿರ್ದೇಶನದ, ರಾಕಿಂಗ್ ಸ್ಟಾರ್ ಯಶ್ ನಟನೆಯ, ಹೊಂಬಾಳೆ ಫಿಲ್ಮ್ಸ್ ನಿರ್ಮಾಣದ ಕೆಜಿಎಫ್ ಚಾಪ್ಟರ್ 1 ರಿಲೀಸ್ ಆದ ದಿನ. ಇಡೀ ದೇಶವೇ ಕನ್ನಡ ಸಿನಿಮಾರಂಗದ ಕಡೆ ತಿರುಗಿನೋಡುವಂತೆ ಮಾಡಿದ ದಿನವಿದು. ಕನ್ನಡ ಮಾತ್ರವಲ್ಲದೇ ಬೇರೆ ಬೇರೆ ಭಾಷೆಯಲ್ಲೂ ರಿಲೀಸ್ ಆಗಿ ಅಬ್ಬರಿಸಿತ್ತು. ಸ್ಯಾಂಡಲ್ ವುಡ್‌ನಲ್ಲಿ ಇತಿಹಾಸ ಸೃಷ್ಟಿಸಿದ ಸಿನಿಮಾಗೆ ಈಗ 4 ವರ್ಷಗಳ ಸಂಭ್ರಮ. ಹೌದು, ಕೆಜಿಎಫ್ ಚಾಪ್ಟರ್ -1 ರಿಲೀಸ್ ಆಗಿ 4 ವರ್ಷಗಳಾಗಿದೆ. ಈ ವಿಶೇಷ ದಿನವನ್ನು ಹೊಂಬಾಳೆ ಫಿಲ್ಮ್ಸ್ ನೆನಪಿಸಿಕೊಂಡಿದೆ. ಸಾಮಾಜಿಕ ಜಾಲತಾಣದಲ್ಲಿ ವಿಶೇಷ ಪೋಸ್ಟ್ ಶೇರ್ ಮಾಡಿದ್ದಾರೆ.
ಕೆಜಿಎಫ್ ಸಿನಿಮಾ ಅನೇಕ ಮೊದಲುಗಳಿಗೆ ಸಾಕ್ಷಿಯಾಗಿದೆ. ಅನೇಕ ದಾಖಲೆಗಳನ್ನು ನಿರ್ಮಿಸಿತ್ತು. ಕನ್ನಡ ಸಿನಿಮಾವನ್ನು ಪರಭಾಷಿಕರು ನೋಡಿ ಇಷ್ಟಪಟ್ಟು ಅಪ್ಪಿಕೊಂಡಿದ್ದರು. ರಾಕಿ ಬಾಯ್ ಹವಾ ಗಡಿಗೂ ಮೀರಿ ಪಸರಿಸಿತು. ಕನ್ನಡ ಸಿನಿಮಾರಂಗದ ಮಾರುಕಟ್ಟೆ ವಿಸ್ತರಿಸಿತು. ಕೋಟಿ ಗಟ್ಟಲೇ ಬ್ಯುಸಿನೆಸ್ ಮಾಡಿ ಬೀಗಿತ್ತು. ಈ ಸಿನಿಮಾ ಬಳಿಕ ಪ್ಯಾನ್ ಇಂಡಿಯಾ ಸಿನಿಮಾಗಳು ಹೆಚ್ಚಾಯಿತು. ಕನ್ನಡ ಸಿನಿಮಾಗಳು ದೇಶ ವಿದೇಶದ ಗಮನ ಸೆಳೆಯಲು ಪ್ರಾರಂಭಿಸಿತು. ಕೆಜಿಎಫ್ ಬಾಲಿವುಡ್ ಭದ್ರಕೋಟೆಯನ್ನು ಛಿದ್ರಮಾಡಿ ಕೋಟಿ ಕೋಟಿ ಲೂಟಿ ಮಾಡಿತ್ತು. ಹಿಂದಿಯಲ್ಲಿ ಕೆಜಿಎಫ್ ಚಿತ್ರ 44 ಕೋಟಿ ರೂಪಾಯಿ ಬಾಚಿತ್ತು. ಕನ್ನಡದ ಸಿನಿಮಾವೊಂದು ಬಾಲಿವುಡ್ನಲ್ಲಿ ಇಷ್ಟು ದೊಡ್ಡ ಮಟ್ಟದಲ್ಲಿ ಕಲೆಕ್ಷನ್ ಮಾಡಿದ್ದು ಅದೇ ಮೊದಲು. ಕೆಜಿಎಫ್ ಚಿತ್ರ ದೊಡ್ಡ ಇತಿಹಾಸವನ್ನೇ ಸೃಷ್ಟಿಸಿತ್ತು. ಈ ಬಗ್ಗೆ ಹೊಂಬಾಳೆ ಫಿಲ್ಮ್ಸ್ ಟ್ವೀಟ್ ಮಾಡಿದೆ.
Yash: ಸವಾಲುಗಳ ಸರಮಾಲೆಯಲ್ಲಿ ರಾಕಿಂಗ್ ಸ್ಟಾರ್: ಯಶ್ ಸುಮ್ಮನೆ ಕೂರುವ ವ್ಯಕ್ತಿಯೇ ಅಲ್ಲ ಎಂದ ನೀಲ್
'ಈ ದಿನ ಮತ್ತು ಈ ಸಿನಿಮಾ ನಮ್ಮ ಹೃದಯದಲ್ಲಿ ವಿಶೇಷ ಸ್ಥಾನವನ್ನು ಹೊಂದಿದೆ. ನಾವು ಊಹಿಸಿದ್ದೆವು, ನಾವು ನಂಬಿದ್ದೆವು, ನಾವು ಗೆದ್ದಿದ್ದೆವು. ಲೆಕ್ಕವಿಲ್ಲದಷ್ಟು ನೆನಪುಗಳು ಮತ್ತು ಈ ಕನಸನ್ನು ಸಾಧ್ಯವಾಗಿಸಿದ್ದಕ್ಕಾಗಿ ಧನ್ಯವಾದಗಳು' ಎಂದು ಹೇಳಿದ್ದಾರೆ. ಜೊತೆಗೆ ವಿಶೇಷ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಹೊಂಬಾಳೆ ಪೋಸ್ಟ್‌ಗೆ ಅಭಿಮಾನಿಗಳು ವಿವಧ ಕಾಮೆಂಟ್ ಮಾಡಿ ಅಭಿನಂದನೆ ಸಲ್ಲಿಸುತ್ತಿದ್ದಾರೆ.
ಒಂದು ಗಂಟೆ ನಿಂತು, 700ಕ್ಕೂ ಅಧಿಕ ಅಭಿಮಾನಿಗಳಿಗೆ ಸೆಲ್ಫಿ ನೀಡಿದ ಯಶ್!
‘ಕೆಜಿಎಫ್’ ಚಿತ್ರದಲ್ಲಿ ಯಶ್ ರಾಕಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ನಾಯಕಿಯಾಗಿ ಶ್ರೀನಿಧಿ ಶೆಟ್ಟಿ ಬಣ್ಣ ಹಚ್ಚಿದ್ದರು. ಇದು ಅವರ ಚೊಚ್ಚಲ ಚಿತ್ರವಾಗಿದ್ದು ಮೊದಲ ಸಿನಿಮಾದಲ್ಲೇ ಗಮನ ಸೆಳೆದರು. ಕೆಜಿಎಫ್ ಸಿ ನಿಮಾದ ದೊಡ್ಡ ಮಟ್ಟದ ಸಕ್ಸಸ್ 2ನೇ ಭಾಗಕ್ಕೆ ಪ್ರೇರೆಪಿಸಿತು. 2ನೇ ಭಾಗದ ಮೇಲೆ ನಿರೀಕ್ಷೆ ಮತ್ತು ಕುತೂಹಲ ಹೆಚ್ಚಿಸಿತ್ತು. ಮೊದಲ ಭಾಗಕ್ಕಿಂತ 2ನೇ ಭಾಗ ಅದ್ದೂರಿಯಾಗಿ ಮೂಡಿಬಂದಿದ್ದು ಮತ್ತಷ್ಟು ದೊಡ್ಡ ಮಟ್ಟದ್ದಲ್ಲಿ ಸಕ್ಸಸ್ ಕಂಡಿತು. ಭಾರತದ ಬಾಕ್ಸ್ ಆಫೀಸ್ ನಲ್ಲಿ ದಾಖಲೆಗಳ ಮೇಲೆ ದಾಖಲೆ ನಿರ್ಮಿಸಿತು. ಅತೀ ಹೆಚ್ಚು ಕಲೆಕ್ಷನ್ ಮಾಡಿದ ಭಾರತದ ಸಿನಿಮಾಗಳಲ್ಲಿ ಕೆಜಿಎಫ್ ಕೂಡ ಎನ್ನುವ ಹೆಗ್ಗಳಿಕೆ ಕೂಡ ಗಳಿಸಿತು.