Asianet Suvarna News Asianet Suvarna News

ಬೇರೆ ಚಿತ್ರರಂಗವನ್ನು ತೆಗಳಬೇಡಿ, ಬಾಲಿವುಡ್‌ಅನ್ನು ಗೌರವಿಸಿ; ಕನ್ನಡ ಅಭಿಮಾನಿಗಳಿಗೆ ಯಶ್ ಮನವಿ

ಕೆಜಿಎಫ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಯಾವುದೇ ಚಿತ್ರರಂಗವನ್ನು ತೆಗಳಬೇಡಿ ಎಂದು ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. 

KGF Star Yash Does not Want Karnataka People To Put Any Industry Down sgk
Author
First Published Dec 23, 2022, 11:07 AM IST

ಕೆಜಿಎಫ್ ಸ್ಟಾರ್, ಪ್ಯಾನ್ ಇಂಡಿಯಾ ಹೀರೋ ರಾಕಿಂಗ್ ಸ್ಟಾರ್ ಯಶ್ ಯಾವುದೇ ಚಿತ್ರರಂಗವನ್ನು ತೆಗಳಬೇಡಿ ಎಂದು ಎಂದು ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದಾರೆ. ಇತ್ತೀಚಿಗಷ್ಟೆ ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿದ ರಾಕಿಂಗ್ ಸ್ಟಾರ್ ಕೆಜಿಎಫ್ ಸ್ಟಾರ್ ಅನೇಕ ವಿಚಾರಗಳನ್ನು ಬಹಿರಂಗ ಪಡಿಸಿದರು. ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡುತ್ತಿರುವ ಯಶ್ ಫಿಲ್ಮ್ ಕಂಪ್ಯಾನಿಯನ್ ಜೊತೆ ಮಾತನಾಡಿ, ತನ್ನ ಉದ್ಯಮದ ಪ್ರತಿಯೊಬ್ಬರು ನಟ, ನಿರ್ದೇಶಕ, ಪ್ಯಾನ್ ಇಂಡಿಯಾ ಸ್ಟಾರ್ ಆಗಬೇಕು ಎಂದು ಹೇಳಿದರು. ಇದೇ ಸಮಯದಲ್ಲಿ ಕರ್ನಾಟಕ ಜನತೆ ಬೇರೆ ಯಾವುದೇ ಚಿತ್ರರಂಗವನ್ನು ತೆಗಳಬಾರದು, ಕೀಳಾಗಿ ನೋಡಬಾರದು ಎಂದು ರಾಕಿಂಗ್ ಸ್ಟಾರ್ ಬಯಸಿದರು.  

ಫಿಲ್ಮ್ ಕಂಪ್ಯಾನಿಯನ್‌ ಜೊತೆಗಿನ ಇತ್ತೀಚಿನ ಸಂಭಾಷಣೆಯ ಯಶ್,  'ಕರ್ನಾಟಕದ ಜನರು ಬೇರೆ ಯಾವುದೇ ಉದ್ಯಮವನ್ನು ಕೀಳಾಗಿ ನೀಡುವುದನ್ನು ನಾನು ಬಯಸುವುದಿಲ್ಲ. ಏಕೆಂದರೆ ಎಲ್ಲರೂ ನಮ್ಮನ್ನು ಕೀಳಾಗಿ ನಡೆಸಿಕೊಂಡಾಗ ನಾವು ಆ ಸಮಸ್ಯೆಯನ್ನು ಎದುರಿಸಿದ್ದೇವೆ. ನಾನು ಈ ಗೌರವ ಪಡೆಯಲು ತುಂಬಾ ಶ್ರಮಿಸಿದ್ದೇವೆ. ಅದರ ನಂತರ, ನಾವು ಯಾರನ್ನೂ ಕೆಟ್ಟದಾಗಿ ನಡೆಸಿಕೊಳ್ಳುವುದು ಬೇಡ.  ನಾವು ಎಲ್ಲರನ್ನೂ ಗೌರವಿಸೋಣ. ಬಾಲಿವುಡ್ ಅನ್ನು ಗೌರವಿಸಿ. ನಾರ್ತ್ ಮತ್ತು ಸೌತ್ ಮರೆತುಬಿಡಿ' ಎಂದು ಹೇಳಿದರು. 

Yash; 4 ವರ್ಷದ ಸಂಭ್ರಮದಲ್ಲಿ KGF: Chapter 1; ವಿಶೇಷ ದಿನ ನೆನೆದು ಹೊಂಬಾಳೆ ಫಿಲ್ಮ್ಸ್ ಹೇಳಿದ್ದೇನು?

ಇದೇ ಸಮಯದಲ್ಲಿ ಯಾರನ್ನೂ ಮೂಲೆಗುಂಪು ಮಾಡುವುದು ಸರಿಯಲ್ಲ ಯಾರೋ ಒಬ್ಬರು ಬಾಲಿವುಡ್‌ ಏನೂ ಅಲ್ಲ  ಎಂದು ಅಪಹಾಸ್ಯ ಮಾಡುವುದು ಒಳ್ಳೆಯ ಬೆಳವಣಿಗೆಯಲ್ಲ ಎಂದು ಯಶ್ ಹೇಳಿದರು. 'ಒಂದು ದೇಶವಾಗಿ, ನಾವು ಉತ್ತಮ ಸಿನಿಮಾಗಳನ್ನು ಮಾಡಬೇಕು, ಮೂಲಸೌಕರ್ಯಗಳನ್ನು ಅಭಿವೃದ್ಧಿಪಡಿಸಬೇಕು ಮತ್ತು ಚಿತ್ರಮಂದಿರಗಳನ್ನು ನಿರ್ಮಿಸಬೇಕು. ಮಾಡಲು ತುಂಬಾ ಇದೆ. ಈ ತಲೆಮಾರು ನಮ್ಮ ನಡುವೆ ಜಗಳವಾಡುವುದನ್ನು ನಿಲ್ಲಿಸಿ, ಹೊರಹೋಗಿ ಪ್ರಪಂಚದ ಇತರರೊಂದಿಗೆ ಸ್ಪರ್ಧಿಸಿ ಭಾರತ ಈಗ ಬಂದಿದೆ ಎಂದು ಹೇಳಬೇಕು' ಎಂದು ಯಶ್ ಹೇಳಿದರು. 

ಒಂದು ಗಂಟೆ ನಿಂತು, 700ಕ್ಕೂ ಅಧಿಕ ಅಭಿಮಾನಿಗಳಿಗೆ ಸೆಲ್ಫಿ ನೀಡಿದ ಯಶ್‌!

ರಾಕಿಂಗ್ ಸ್ಟಾರ್ ಕೊನೆಯದಾಗಿ ಕೆಜಿಎಫ್-2 ಮೂಲಕ ಅಭಿಮಾನಿಗಳ ಮುಂದೆ ಬಂದಿದ್ದರು. ಈ ಸಿನಿಮಾ ಭಾರತೀಯ ಸಿನಿಮಾರಂಗದಲ್ಲಿ ಅತೀ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾಗಳಲ್ಲಿ ಒಂದಾಗಿದೆ. ರಾಕಿ ಭಾಯ್ ಆಗಿ ಯಶ್ ರಾಷ್ಟ್ರ- ಅಂತಾರಾಷ್ಟ್ರೀಯ ಮಟ್ಟದಲ್ಲಿ ಸದ್ದು ಮಾಡಿದರು. ಈ ಸಿನಿಮಾ ಬಳಿಕ ರಾಕಿಂಗ್ ಸ್ಟಾರ್ ಹೊಸ ಸಿನಿಮಾ ಅನೌನ್ಸ್ ಮಾಡಿಲ್ಲ. ಯಶ್ ಮುಂದಿನ ಸಿನಿಮಾಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಕೆಜಿಎಫ್ ಬಳಿಕ ಯಶ್ ಯಾವ ಸಿನಿಮಾ ಮೂಲಕ  ಬರ್ತಾರೆ ಎಂದು ಅಭಿಮಾನಿಗಳು ಕುತೂಹಲದಿಂದ ಕಾಯುತ್ತಿದ್ದಾರೆ. ಅಂದಹಾಗೆ ಯಶ್ ತನ್ನ ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್ ಮಾಡಲಿದ್ದಾರೆ ಎನ್ನಲಾಗಿದೆ. ಹಾಗಾಗಿ ಈ ಬಾರಿಯ ಯಶ್ ಹುಟ್ಟುಹಬ್ಬ ಭಾರಿ ಕುತೂಹಲ ಮೂಡಿಸಿದೆ. 

Follow Us:
Download App:
  • android
  • ios