ಟಾಕ್ಸಿಕ್ ಸಿನಿಮಾದ ಬಳಿಕ ನಟ ಯಶ್ ಅವರಿಗೆ ಹಾಲಿವುಡ್ ಸಿನಿಮಾಗಳಿಂದಲೂ ಆಫರ್ ಬರಹುದು. ಸದ್ಯಕ್ಕಂತೂ ನಟ ಯಶ್ ಅವರು ಕನ್ನಡಕ್ಕೆ ಸೀಮಿತರಾದ ನಟ ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್. ಆದರೆ, ಕೆಜಿಎಫ್ ಸಿನಿಮಾಗಿಂತ ಮೊದಲು ನಟ ಯಶ್ ಅವರು ಕನ್ನಡದ ಒಬ್ಬ ನಟರಷ್ಟೇ ಆಗಿದ್ದರು.
ರಾಕಿಂಗ್ ಸ್ಟಾರ್ ಯಶ್ ಹಳೆಯ ಫೋಟೊ ವೈರಲ್!
ಕನ್ನಡದ ನಟ, ರಾಕಿಂಗ್ ಸ್ಟಾರ್ ಯಶ್ (Yash) ಅವರು ಇಂದು ಪ್ಯಾನ್ ಇಂಡಿಯಾ ಸ್ಟಾರ್. 'ಟಾಕ್ಸಿಕ್' ಸಿನಿಮಾ ರಿಲೀಸ್ ಆದ ಬಳಿಕವಂತೂ ಅವರನ್ನು ಕೇಳೋದೇ ಬೇಡ.. ನಟ ಯಶ್ ಅವರು ಟಾಕ್ಸಿಕ್ ಬಿಡುಗಡೆಯ ಬಳಿಕ ಜಾಗತಿಕ ಐಕಾನ್, ಅಂದರೆ 'ಪ್ಯಾನ್ ವರ್ಲ್ಡ್ ಸ್ಟಾರ್' ಆಗುವ ಎಲ್ಲಾ ಸಾಧ್ಯೆತಗಳು ಇವೆ ಎನ್ನಬಹುದು. ಈಗಾಗಲೇ ಬಿಡುಗಡೆ ಕಂಡಿರುವ ಯಶ್ ಅಭಿನಯದ 'ಟಾಕ್ಸಿಕ್' ಸಿನಿಮಾದ ಟೀಸರ್, ವಿವಾದದ ನಡುವೆಯೂ ಸಾಕಷ್ಟು ಗಮನ ಸೆಳೆದಿದೆ.
ಟಾಕ್ಸಿಕ್ ಸಿನಿಮಾದ ಬಳಿಕ ನಟ ಯಶ್ ಅವರಿಗೆ ಹಾಲಿವುಡ್ ಸಿನಿಮಾಗಳಿಂದಲೂ ಆಫರ್ ಬರಹುದು. ಸದ್ಯಕ್ಕಂತೂ ನಟ ಯಶ್ ಅವರು ಕನ್ನಡಕ್ಕೆ ಸೀಮಿತರಾದ ನಟ ಅಲ್ಲ, ಪ್ಯಾನ್ ಇಂಡಿಯಾ ಸ್ಟಾರ್. ಆದರೆ, ಕೆಜಿಎಫ್ ಸಿನಿಮಾಗಿಂತ ಮೊದಲು ನಟ ಯಶ್ ಅವರು ಕನ್ನಡದ ಒಬ್ಬ ನಟರಷ್ಟೇ ಆಗಿದ್ದರು, ಸ್ಟಾರ್ ನಟ ಕೂಡ ಆಗಿರಲಿಲ್ಲ. ಯಶ್ ನಡೆದು ಬಂದ ಹಾದಿ ಸಾಕಷ್ಟು ಕಷ್ಟ, ಕಲ್ಲು-ಮುಳ್ಳುಗಳಿಂದ ಕೂಡಿತ್ತು.
'ಮೊದಲಾ ಸಲ' ಸಿನಿಮಾ
ಯಶ್ ಅವರು ಧಾರಾವಾಹಿ ಕ್ಷೇತ್ರದಲ್ಲಿ ಮಿಂಚಿ ನಂತರ ಸಿನಿಮಾ ಮಾಡಿದವರು. ಅವರು ತಮ್ಮ ವೃತ್ತಿ ಜೀವನದಲ್ಲಿ ಸಾಕಷ್ಟು ಹಿಟ್ ಚಿತ್ರಗಳನ್ನು ನೀಡಿದ್ದಾರೆ. 'ಜಂಭದ ಹುಡುಗಿ' ಯಶ್ ನಟನೆಯ ಮೊಟ್ಟಮೊದಲ ಸಿನಿಮಾ ಆಗಿದ್ದರೂ ಅವರಿಗೆ ಸಕ್ಸಸ್ ತಂದುಕೊಟ್ಟ ಸಿನಿಮಾ 'ಮೊಗ್ಗಿನ ಮನಸ್ಸು' ಎಂಬುದು ಬಹುತೇಕ ಎಲ್ಲರಿಗೂ ಗೊತ್ತು. 2010ರಲ್ಲಿ ಅವರು 'ಮೊದಲಾ ಸಲ' ಸಿನಿಮಾದಲ್ಲಿ ನಟಿಸಿದ್ದರು. ಈ ಚಿತ್ರವನ್ನು ಪುರುಷೋತ್ತಮ್ ಸಿ ನಿರ್ದೇಶನ ಮಾಡಿದ್ದರು. ಈ ಚಿತ್ರಕ್ಕಾಗಿ ಯಶ್ ಸಾಕಷ್ಟು ಪ್ರಚಾರ ಮಾಡಿದ್ದರು.
ನಟ ಯಶ್ ಅವರು ತಮ್ಮ ನಟನೆಯ 'ಮೊದಲಾ ಸಲ' ಸಿನಿಮಾ ಬಿಡುಗಡೆ ಸಮಯದಲ್ಲಿ 'ನನ್ನ ಸಿನಿಮಾ ನೋಡಿ ಪ್ಲೀಸ್' ಎಂದು ಬಸ್ ಹತ್ತಿ ಪಾಂಪ್ಲೆಂಟ್ ಹಂಚಿದ್ದರು ಎನ್ನಲಾಗಿದೆ. ಅದರಲ್ಲೂ ಮಂಡ್ಯದಲ್ಲಿ ಓಡಾಡುತ್ತಿದ್ದ ಬಸ್‌ಗಳಲ್ಲಿ ಯಶ್ ಅವರು ಪಾಂಪ್ಲೆಟ್ ಹಂಚಿದ್ದು, ಆ ಫೋಟೋಗಳನ್ನು ಯಾರೋ ಇನ್ನೂ ಇಟ್ಟುಕೊಂಡಿದ್ದು, ಅವುಗಳನ್ನು ಈಗ ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡಿದ್ದಾರೆ. ಆ ಸಂದರ್ಭದ ಅಪರೂಪದ ಫೋಟೋ ಈಗ ವೈರಲ್ ಆಗಿದೆ.
ಯಶ್ ಹಾಗೂ ಭಾಮಾ ಕಾಂಬಿನೇಷನ್‌ನಲ್ಲಿ ಮೂಡಿ ಬಂದ 'ಮೊದಲಾ ಸಲ' ಸಿನಿಮಾದಲ್ಲಿ ರಂಗಾಯಣ ರಘು, ತಾರಾ ಮೊದಲಾದವರು ನಟಿಸಿದ್ದರು. ಈ ಸಿನಿಮಾ ಭಾವನಾತ್ಮಕವಾಗಿ ಸಾಕಷ್ಟು ಹೆಸರು ಮಾಡಿತ್ತು. ಈ ಚಿತ್ರದ ಪ್ರಚಾರ ಮಾಡಲು ಯಶ್ ಸ್ವತಹ ತಾವೇ ಬಸ್ ಏರಿದ್ದರು. ಬಸ್ ದಿನದ ಆಚರಣೆ ವೇಳೆ 'ಮೊದಲ ಸಲ' ಸಿನಿಮಾದ ಶರ್ಟ್ ಹಾಕಿ ಬಸ್ ಒಳಗಿದ್ದ ಮಕ್ಕಳಿಗೆ ಪಾಂಪ್ಲೆಟ್ ನೀಡಿದ್ದರು. ಈ ಫೋಟೋನ ಫ್ಯಾನ್ಸ್ ವೈರಲ್ ಮಾಡುತ್ತಿದ್ದಾರೆ.
ಅಂದು ಹಾಗಿದ್ದ ಯಶ್ ಇಂದು ಪ್ಯಾನ್ ಇಂಡಿಯಾ ಸ್ಟಾರ್ ಆಗಿ ಮಿಂಚುತ್ತಿದ್ದು, ಮುಂದೆ ಪ್ಯಾನ್ ವರ್ಲ್ಡ್ ಸ್ಟಾರ್ ಆಗುವ ಎಲ್ಲಾ ಲಕ್ಷಣಗಳು ಕಾಣಿಸುತ್ತಿವೆ. ಅದಕ್ಕೆ ಹೇಳೋದು, ಯಾರು ಯಾವಾಗ ಎಲ್ಲಿಗೆ ತಲುಪುತ್ತಾರೆ ಅಥವಾ ಯಾರು ಎಷ್ಟು ಎತ್ತರದಿಂದ ಯಾವಾಗ ಕೆಳಕ್ಕೆ ಬೀಳುತ್ತಾರೆ ಅನ್ನೋದು ಗೊತ್ತಾಗಲ್ಲ ಅಂತ..


