ಸ್ಯಾಂಡಲ್‌ವುಡ್‌ನಲ್ಲೀಗ 'ಯುಐ' ಸಿನಿಮಾ ಫೀವರ್ ಜೋರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಲೆಬ್ಬಿಸಿದೆ.
ಸ್ಯಾಂಡಲ್‌ವುಡ್‌ನಲ್ಲೀಗ 'ಯುಐ' ಸಿನಿಮಾ ಫೀವರ್ ಜೋರಾಗಿದೆ. ರಿಯಲ್ ಸ್ಟಾರ್ ಉಪೇಂದ್ರ ನಿರ್ದೇಶಿಸಿ ನಟಿಸಿರುವ ಸಿನಿಮಾ ಭರ್ಜರಿ ಪ್ರದರ್ಶನ ಕಾಣುತ್ತಿದೆ. ಬಾಕ್ಸಾಫೀಸ್‌ನಲ್ಲಿ ಧೂಳೆಲೆಬ್ಬಿಸಿದೆ. ಶುಕ್ರವಾರ ತೆರೆಕಂಡ ಚಿತ್ರಕ್ಕೆ ಮಿಶ್ರ ಪ್ರತಿಕ್ರಿಯೆ ಸಿಕ್ಕಿತ್ತು. ಆದರೂ ಸಿನಿಮಾ ಪ್ರೇಕ್ಷಕರನ್ನು ಸೆಳೆಯುವಲ್ಲಿ ಸಕ್ಸಸ್ ಕಂಡಿದೆ. ರಿಯಲ್ ಸ್ಟಾರ್ ನಿರ್ದೇಶನದ ಸಿನಿಮಾಗಳಿಗೆ ಅಭಿಮಾನಿ ಬಳಗ ದೊಡ್ಡದಿದೆ. ಸ್ಟಾರ್ ಫಿಲ್ಮ್ ಮೇಕರ್‌ಗಳೇ ಉಪ್ಪಿ ಚಿತ್ರಕ್ಕಾಗಿ ಕಾದು ಕೂರುತ್ತಾರೆ. ಇನ್ನು ಕಲ್ಟ್ ಸಿನಿಮಾಗಳನ್ನು ನೋಡಿ ಮೆಚ್ಚಿಕೊಂಡ ಅಭಿಮಾನಿಗಳ ಬಗ್ಗೆ ಬಿಡಿಸಿ ಹೇಳುವುದು ಬೇಕಾಗಿಲ್ಲ.
ದೊಡ್ಡಮಟ್ಟದಲ್ಲಿ ಪ್ರಚಾರ ಮಾಡದೇ ಇದ್ದರೂ ಚಿತ್ರಕ್ಕೆ ಒಳ್ಳೆ ಓಪನಿಂಗ್ ಕರ್ನಾಟಕ ಮಾತ್ರವಲ್ಲದೇ ಆಂಧ್ರ, ತೆಲಂಗಾಣ, ತಮಿಳುನಾಡು ಹಾಡು ವಿದೇಶಗಳಲ್ಲಿ ಚಿತ್ರಕ್ಕೆ ಒಳ್ಳೆ ರೆಸ್ಪಾನ್ಸ್ ಸಿಕ್ಕಿದೆ. ಇನ್ನು ಬೆಂಗಳೂರಿನಲ್ಲಿ ಆಯೋಜಿಸಿದ್ದ ಯುಐ ಸಿನಿಮಾ ಸೆಲೆಬ್ರಿಟಿ ಶೋಗೆ ಇಡೀ ಸ್ಯಾಂಡಲ್ವುಡ್ ಒಂದುಗೂಡಿದೆ. ಮುಂಬೈನಿಂದ ಬಂದ ರಾಕಿಂಗ್ ಸ್ಟಾರ್ ಯಶ್, ಪತ್ನಿ ರಾಧಿಕಾ ಪಂಡಿತ್ ಜೊತೆ ಉಪ್ಪಿ ಯುಐ ಸಿನಿಮಾ ನೋಡಿದ್ರು. ಮ್ಯಾಕ್ಸ್ ಸಿನಿಮಾ ಪ್ರಮೋಷನ್ ಬ್ಯುಸಿಯಲ್ಲೂ ಕಿಚ್ಚ ಸುದೀಪ್ UI ಸಿನಿಮಾ ವೀಕ್ಷಿಸಿದ್ದಾರೆ. 
ವಿಶೇಷವಾಗಿ ನಟ ಸುದೀಪ್ ಹಾಗೂ ನಟ ಯಶ್ ಇಬ್ಬರೂ ಬೆಂಗಳೂರಿನ ಓರಾಯನ್ ಮಾಲ್‌ನಲ್ಲಿ ಆಯೋಜಿಸಿದ್ದ ಯುಐ ಸೆಲೆಬ್ರಿಟಿ ಶೋಗೆ ಬಂದ ವಿಡಿಯೋವನ್ನು ಲಹರಿ ಹಾಗೂ ಕೆವಿಎನ್ ಪ್ರೊಡೆಕ್ಷನ್ ತಮ್ಮ ಟ್ವಿಟರ್ ಎಕ್ಸ್ ಖಾತೆಯಲ್ಲಿ ಶೇರ್ ಮಾಡಿದ್ದು, ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಿದೆ. ಜೊತೆಗೆ ಸುದೀಪ್-ಯಶ್ ತಬ್ಬಿಕೊಂಡಿರುವ ಫೋಟೋ ಸಹ ವೈರಲ್ ಆಗಿದೆ. ಒಟ್ಟಿನಲ್ಲಿ ಸ್ಯಾಂಡಲ್ವುಡ್ ಸ್ಟಾರ್ ನಟರಾದ ನಟ ಯಶ್ ಹಾಗೂ ಕಿಚ್ಚ ಸುದೀಪ್ ಕೂಡ ಯುಐ ಸಿನಿಮಾ ನೋಡಿ, ಉಪ್ಪಿಗೆ ಸಾಥ್ ಕೊಟ್ಟಿದ್ದಾರೆ. ಉಪೇಂದ್ರ ನಿರ್ದೇಶನ ಅಂದರೆ ವಿಭಿನ್ನವಾಗಿಯೇ ಇರುತ್ತದೆ. ಅಷ್ಟು ಸುಲಭಕ್ಕೆ ಎಲ್ಲರಿಗೂ ಅರ್ಥವಾಗಲ್ಲ. ಅದೇ ಯುಐ ಚಿತ್ರಕ್ಕೆ ಪ್ಲಸ್ ಆಗಿದೆ.
UI ಸಿನಿಮಾ ವಿಮರ್ಶೆ: ಕ್ಷಣಿಕ ಸಂತೋಷಕ್ಕೆ, ಕ್ಷಣಿಕ ಉದ್ವೇಗಕ್ಕೆ.. ಜಗತ್ತಿಗೆ ಹಿಡಿದ ವಿಡಂಬನಾತ್ಮಕ ಕನ್ನಡಿ
ರಿಪೀಟ್ ಆಡಿಯನ್ಸ್ ಚಿತ್ರಮಂದಿರದ ಕಡೆ ಮುಖ ಮಾಡಿದ್ದಾರೆ. ಇನ್ನು ಅಡ್ವಾನ್ಸ್ ಬುಕ್ಕಿಂಗ್ ಸೇರಿ ಮೊದಲ 3 ದಿನಕ್ಕೆ ಬುಕ್‌ಮೈ ಶೋನಲ್ಲಿ 4 ಲಕ್ಷಕ್ಕೂ ಅಧಿಕ ಟಿಕೆಟ್ ಬುಕ್ ಆಗಿದೆ. ಈ ವರ್ಷ ಬುಕ್‌ಮೈ ಶೋನಲ್ಲಿ ಮೊದಲ 3 ದಿನಕ್ಕೆ ಅತಿಹೆಚ್ಚು ಟಿಕೆಟ್ ಮಾರಾಟವಾದ ಕನ್ನಡ ಸಿನಿಮಾ ಎನ್ನುವ ದಾಖಲೆ 'ಯುಐ' ಪಾಲಾಗಿದೆ. ಸಿನಿಮಾ ನೋಡಿದ ಕೆಲವರು ಬಹಳ ಮೆಚ್ಚಿ ರಿವ್ಯೂ ಕೊಡುತ್ತಿದ್ದಾರೆ. 10 ವರ್ಷಗಳ ಬಳಿಕ ನಟ ಉಪೇಂದ್ರ ಡೈರೆಕ್ಟರ್ ಕ್ಯಾಪ್ ತೊಟ್ಟು UI ಸಿನಿಮಾ ಮಾಡಿದ್ದಾರೆ. ಸಿನಿಮಾವನ್ನ ತೆರೆ ಮೇಲೆ ನೋಡಿದ ಅಭಿಮಾನಿಗಳು ಕೂಡ ಮೆಚ್ಚಿಕೊಂಡಿದ್ದಾರೆ.
