ಸ್ಯಾಂಡಲ್‌ವುಡ್ ಚಾಲೆಂಜಿಂಗ್ ಸ್ಟಾರ್ ದರ್ಶನ್‌ ನಡೆದಿದ್ದೇ ದಾರಿ ಆಡಿದ್ದೇ ಮಾತು. ಡಿ-ಬಾಸ್‌ ಮಾತಿಗೆ ನೋ ಅನ್ನುವವರಾರು ಇಲ್ಲ. 'ರಾಬರ್ಟ್' ಚಿತ್ರೀಕರಣವನ್ನು ಪೂರ್ಣಗೊಳಿಸಿ ತೆರೆ ಕಾಣಲು ಸಜ್ಜಾಗುತ್ತಿರುವ ಚಿತ್ರತಂಡ ಬಾಕ್ಸ್‌ ಆಫೀಸ್‌ ಸುಲ್ತಾನ್‌ ಬಗ್ಗೆ ಯಾರಿಗೂ ತಿಳಿಯದ ವಿಚಾರವನ್ನು ರಿವೀಲ್ ಮಾಡಿದೆ.  ಇದರ ಬಗ್ಗೆ ವೆಬ್‌ಸೈಟ್‌ವೊಂದು ವರದಿ ಮಾಡಿದೆ. 

ವಿಂಗ್‌ ಕಮಾಂಡರ್‌ ಅಭಿನಂದನ್‌ ಸಿನಿಮಾದಲ್ಲಿ ನಟ ದರ್ಶನ್‌

'ರಾಬರ್ಟ್' ಚಿತ್ರ ನಿರ್ಮಾಪಕ ಶ್ರೀನಿವಾಸ್‌ ದರ್ಶನ್ ಬಗ್ಗೆ ಮಾತನಾಡಿದ್ದಾರೆ. ಚಿತ್ರದಲ್ಲಿ ದರ್ಶನ್‌ ಹೆಚ್ಚಾಗಿ ಜೀನ್ಸ್‌ ಪ್ಯಾಂಟ್ ಧರಿಸಿದ್ದಾರೆ. ಆ ಬ್ರ್ಯಾಂಡ್‌ ಟ್ರೂ ರಿಲಿಜನ್‌ ಎಂದು. ಒಂದು ಪ್ಯಾಂಟಿಗೆ ಸುಮಾರು 50 ಸಾವಿರದಿಂದ 1 ಲಕ್ಷ ಬೇಕಾಗುತ್ತದೆ. ಒಟ್ಟಾರೆ ಜೀನ್ಸ್‌ ಪ್ಯಾಂಟ್‌ಗೆ 20 ಲಕ್ಷ ಖರ್ಚಾಗುತ್ತದೆ. ಈ ವಿಚಾರ ತಿಳಿಯುತ್ತಿದ್ದಂತೆ ದರ್ಶನ್‌ ಅಷ್ಟೆಲ್ಲಾ ಹಣ ಖರ್ಚು ಮಾಡುವುದು ಬೇಡ. ನನ್ನ ಬಳಿ ಸಾಕಷ್ಟು ಜೀನ್ಸ್‌ ಇದೆ ಸುಮಾರು 4-5 ತರ್ಸಿ ಸಾಕು ಎಂದು ಹೇಳಿ ಪ್ರೊಡಕ್ಷನ್‌ ಕಾಸ್ಟ್‌ ಕಮ್ಮಿ ಮಾಡಿದ್ದಾರಂತೆ!

ಮಗನಿಗೆ ಕುದುರೆ ಸವಾರಿ ಕಲಿಸ್ತಿದ್ದಾರೆ ದರ್ಶನ್; ಯಾಕೆ ಗೊತ್ತಾ?

ಅಷ್ಟೇ ಅಲ್ಲದೆ ಸಂಭಾವನೆ ವಿಚಾರದಲ್ಲೂ ನಿರ್ಮಾಪಕರಿಗೆ ಖಡಕ್‌ ವಾರ್ನಿಂಗ್ ಕೊಟ್ಟಿದ್ದಾರೆ. ' ಪ್ರತಿ ದಿನವೂ ಶೂಟಿಂಗ್‌ ಸೆಟ್‌ನಲ್ಲಿ ನಾನ್‌ ವೆಜ್‌ ಇರಲೇಬೇಕು. ಫೈಟ್‌ ಸನ್ನಿವೇಶ ಇದ್ದಾಗಲಂತೂ ಫೈಟರ್‌ಗಳಿಗೆ ಡೈಲಿ ಪೇಮೆಂಟ್‌ ಆಗಬೇಕು ಅವರು ಕಷ್ಟ ಪಡುತ್ತಾರೆ. ನಾನು ಚೆನ್ನಾಗಿದ್ದೇನೆ. ವಿನೋದ್‌ ಪ್ರಭಾಕರ್‌ ಇನ್ನೂ ದೊಡ್ಡ ಮಟ್ಟದಲ್ಲಿ ಬೆಳೆಯಬೇಕು. ಹಾಗಾಗಿ ತರುಣ್‌ ಹಾಗೂ ವಿನೋದ್‌ಗೆ ಒಳ್ಳೆಯ ಪೇಮೆಂಟ್‌ ಕೊಡಿ' ಎಂದು ಹೇಳಿದ್ದಾರೆಂದು ಶ್ರೀನಿವಾಸ್‌ ಹೇಳಿದ್ದಾರೆ.