ಬೆಂಗಳೂರು (ಫೆ. 22):  ತನ್ನ ನಿರ್ಮಾಣದ ಮುಂದಿನ ಚಿತ್ರದಲ್ಲಿ ನಟ ದರ್ಶನ್ ತೂಗುದೀಪ ಅವರು ವಿಂಗ್ ಕಮಾಂಡರ್ ಪಾತ್ರ ಮಾಡಲಿದ್ದಾರೆ ಎಂದು ರಾಜರಾಜೇಶ್ವರಿ ಕ್ಷೇತ್ರದ ಅನರ್ಹ ಶಾಸಕ, ಚಿತ್ರ ನಿರ್ಮಾಪಕ ಮುನಿರತ್ನ ತಿಳಿಸಿದ್ದಾರೆ.

ದರ್ಶನ್ ಮನೆ ಮುಂದೆ ಇನ್ಮೇಲೆ ಬರ್ತಡೇ ಸೆಲಬ್ರೇಶನ್ ಇಲ್ಲ!

ನಗರದ ಮತ್ತಿಕೆರೆಯ ಜೆ.ಪಿ.ಪಾರ್ಕಿನಲ್ಲಿ ಹಮ್ಮಿಕೊಂಡಿದ್ದ ಮುನಿರತ್ನ ಕುರುಕ್ಷೇತ್ರ ಚಿತ್ರದ ಶತದಿನೋತ್ಸವ ಕಾರ್ಯಕ್ರಮದಲ್ಲಿ ಅವರು ಈ ಬಗ್ಗೆ ಸುಳಿವು ನೀಡಿದರು. ದರ್ಶನ್ ಅವರಲ್ಲಿ ಈಗ ತಾನೇ ಮಾತನಾಡಿದ್ದೇನೆ. ಪೌರಾಣಿಕ, ಸಾಮಾಜಿಕ ಸೇರಿದಂತೆ ಅವರು ಎಲ್ಲ ತರಹದ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಆದರೆ ಅವರನ್ನೊಬ್ಬ ಸೈನಿಕನನ್ನಾಗಿ ನೋಡಬೇಕೆಂಬ ಆಸೆ ಇದೆ. ಕಳೆದ ವರ್ಷ ಪುಲ್ವಾಮ ದಾಳಿಯ ಬಳಿಕ ಸರ್ಜಿಕಲ್ ಸ್ಟ್ರೈಕ್ ವೇಳೆ ನೆರೆಯ ದೇಶಕ್ಕೆ ತೆರಳಿ ಸೆರೆ ಸಿಕ್ಕ ಬಳಿಕ ಭಾರತಕ್ಕೆ ಮರಳಿದ ಧೀರ ಸೈನಿಕ ಅಭಿನಂದನ್ ಪಾತ್ರದಲ್ಲಿ ದರ್ಶನ್ ಕಾಣಿಸಿಕೊಳ್ಳಲಿದ್ದಾರೆ ಎಂದು ಹೇಳಿದರು.

ದರ್ಶನ್ -ನಿಖಿಲ್ ಕುಮಾರಸ್ವಾಮಿ ಮುಖಾಮುಖಿಯಾಗ್ತಾರಾ?

ಈ ಚಿತ್ರ ಅಭಿನಂದನ್ ಜೀವನಾಧಾರಿತವೋ ಅಲ್ಲ ಪ್ರೇರಣೆಯಿಂದ ನಿರ್ಮಿಸುತ್ತಿರುವುದೋ ಎಂದು ಮುಂದಿನ ದಿನಗಳಲ್ಲಿ ತಿಳಿಸಲಿದ್ದೇನೆ. ಆದರೆ ಈ ಚಿತ್ರದಲ್ಲಿ ದರ್ಶನ್ ಅವರ ಪಾತ್ರದ ಹೆಸರು ಮಾತ್ರ ವಿಂಗ್ ಕಮಾಂಡರ್ ಅಭಿನಂದನ್ ಎಂದೇ ಇರುತ್ತದೆ. ಜೊತೆಗೆ ಈ ಚಿತ್ರದಲ್ಲಿ ಅಭಿಷೇಕ್ ಅಂಬರೀಷ್ ಮುಖ್ಯಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಈ ವಿಶೇಷ ಕಾಂಬಿನೇಷನ್‌ನ ಚಿತ್ರವನ್ನು ನಾನು ನಿರ್ಮಾಣ ಮಾಡುತ್ತಿದ್ದೇನೆ ಎಂದು ಮಾಹಿತಿ ನೀಡಿದರು. ಇದೇ ವೇಳೆ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಹೊಗಳಿದ ಅವರು, ಕೊಟ್ಟ ಮಾತಿನಂತೆ ನಡೆಯುವವರಲ್ಲಿ ನಮ್ಮ ಯಡಿಯೂರಪ್ಪನವರು ಒಂದನೇ ಸ್ಥಾನದಲ್ಲಿ ನಿಲ್ಲುತ್ತಾರೆ ಎಂದು ಅಭಿಪ್ರಾಯಪಟ್ಟರು. ಎಂತಹ ಪರಿಸ್ಥಿತಿ ಬಂದರೂ ಎಂತಹ ಟೀಕೆ ಬಂದರೂ ಸರಿ, ನಾನು ಮಾತು ಕೊಟ್ಟಿದ್ದೇನೆ ಆ ಮಾತಿನ ಪ್ರಕಾರ ನಡೆಯುತ್ತೇನೆ ಎನ್ನುತ್ತಾರವರು.

ಕೊಟ್ಟ ಮಾತಿನಂತೆ ನಡೆದ ಒಬ್ಬ ನಾಯಕರು ಶಿವರಾತ್ರಿಯ ಈ ದಿನ ಇಲ್ಲಿಗೆ ಆಗಮಿಸಿರುವುದು ಬಹಳ ಸಂತೋಷವಾಗಿದೆ. ಕಳೆದ ಏಳೆಂಟು ತಿಂಗಳಿಂದ ಇದ್ದ ನೋವು, ಈ ಕ್ಷಣ ಇಲ್ಲಿ ನಿಮ್ಮನ್ನು ನೋಡಿದ ಬಳಿಕ ಆ ಶಿವ ನನಗೆ  ನಮ್ಮದಿ ಕೊಡ್ತಿದ್ದಾನೆ ಎಂದು ಅನ್ನಿಸುತ್ತಿದೆ ಎಂದು ಹೇಳಿದರು.

"