ರಾಬರ್ಟ್ ಸಿನಿಮಾ ರಿಲೀಸ್ ಆಗಿ ಈಗಾಗಲೇ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದೆ. ಮೊದಲ ದಿನವೇ 17 ಕೋಟಿ ಕಲೆಕ್ಷನ್ ಮಾಡಿದ ಸಿನಿಮಾ ಟಾಲಿವುಡ್‌ನಲ್ಲಿಯೂ ಸೌಂಡ್ ಮಾಡಿದೆ.

ಪೊಗರು ನಂತರ ಥಿಯೇಟರ್‌ನಲ್ಲಿ ರಿಲೀಸ್ ಆದ ಬಿಗ್‌ ಬಜೆಟ್ ಸಿನಿಮಾ ಸಿಕ್ಕಾಪಟ್ಟೆ ಸೌಂಡ್ ಮಾಡುತ್ತಿದ್ದು, ಡಿಬಾಸ್ ಫ್ಯಾನ್ಸ್ ಅಂತೂ ಫುಲ್ ಖುಷ್ ಆಗಿದ್ದಾರೆ.

KGF-ರಾಬರ್ಟ್ ಬಾಕ್ಸ್ ಆಫೀಸ್ ಕಲೆಕ್ಷನ್ ಕಿರಿಕ್: ಯಶ್, ಡಿಬಾಸ್ ಫ್ಯಾನ್ಸ್ ಮಧ್ಯೆ ಜಗಳ

ಸಿನಿಮಾ ಸೂಪರ್ ಹಿಟ್ ಆಗುತ್ತಿರುವಾಗ ಟಿಕೆಟ್ ಖರೀದಿಸಿ ಪ್ರೀತಿಯಿಂದ ಸಿನಿಮಾ ನೋಡಿದ ಅಭಿಮಾನಿಗಳಿಗೆ ನಟ ಥ್ಯಾಂಕ್ಸ್ ಹೇಳಿದ್ದಾರೆ. ಆದರೆ ಇನ್‌ಸ್ಟಾಗ್ರಾಂ ಪೋಸ್ಟ್‌ನಲ್ಲಿ ಥ್ಯಾಂಕ್ಸ್ ಹೇಳೋಕೆ ಹೋಗಿ ಅಕ್ಷರ ತಪ್ಪಿನಿಂದ ಎಡವಟ್ಟು ಮಾಡಿಕೊಂಡಿದ್ದಾರೆ.

ಆನ್ಲೈನ್ ಮೀಡಿಯಾ ಮಿತ್ರರು ಮತ್ತು ನಮ್ಮ ಸೆಲೆಬ್ರಿಟಿಗಳು ನಮ್ಮ ಚಿತ್ರಕ್ಕೆ ನೀಡಿರುವ ಪ್ರೋತ್ಸಾಹ ಹಾಗೂ ಬೆಂಬಲಕ್ಕೆ ಹೃದಯಪೂರ್ವಕ ಧನ್ಯವಾದಗಳು. ಒಳ್ಳೆ ಕನ್ನಡ ಚಿತ್ರಗಳಿಗೆ ಸದಾ ಬೆನ್ನೆಲುಬಾಗಿರಿ. ಮಧ್ಯರಾತ್ರಿಯಿಂದ ಟಿಕೆಟ್ಸ್ ಗಾಗಿ ಕಾದು ನಿಂತು ನಮ್ಮನ್ನು ಹೃದಯತುಂಬಿ ಆಶೀರ್ವದಿಸಿದ ಸೆಲೆಬ್ರಿಟಿ ಸಮೂಹಕ್ಕೆ ನಿಮ್ಮ ಈ ದಾಸನ ಕೃತಘ್ನತೆಗಳು ಎಂದು ಬರೆದಿದ್ದಾರೆ ನಟ. ಕೃತಜ್ಞತೆ ಹೇಳಬೇಕಾದಲ್ಲಿ ಕೃತಘ್ನತೆ ಹೇಳಿದ್ದಾರೆ.

ಆಂಧ್ರದಲ್ಲಿ ರಾಬರ್ಟ್ ಮೊದಲ ದಿನದ ಕಲೆಕ್ಷನ್ ಎಷ್ಟು?; ಕರ್ನಾಟಕವೇ ಟಾಪ್!

ಕೃತಘ್ನತೆ ಎಂದು ಕೃತಜ್ಞತೆ ಇಲ್ಲದಿರುವುದು ಎಂದು ಅರ್ಥ. ಇಲ್ಲಿ ಡಿಬಾಸ್ ಫ್ಯಾನ್ಸ್‌ಗೆ ಕೃತಜ್ಞತೆ ಹೇಳೋಕೆ ಹೊರಟು ಕೃತಘ್ನತೆ ಎಂದು ಬರೆದಿದ್ದಾರೆ.